ಮತ್ತೊಮ್ಮೆ ವಿಶಾಲ ಹೃದಯ ತೋರಿದ ಸುಧಾ ಮೂರ್ತಿ ಅಮ್ಮ

ಮತ್ತೊಮ್ಮೆ ವಿಶಾಲ ಹೃದಯ ತೋರಿದ ಸುಧಾ ಮೂರ್ತಿ ಅಮ್ಮ

0

ಭಾರತೀಯ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್ ನ ಸುಧಾಮೂರ್ತಿ ಅಮ್ಮನವರು ಎಂದರೆ ಯಾರಿಗೆ ತಿಳಿದಿಲ್ಲ ಹೇಳಿ, ಸದಾ ಒಂದಲ್ಲ ಒಂದು ಸಾಮಾಜಿಕ ಸೇವೆಗಳಿಂದ ಹೆಸರುವಾಸಿಯಾಗಿರುವ ಸುಧಾಮೂರ್ತಿ ಅಮ್ಮನವರು ಈಗ ಚಿಕಿತ್ಸೆಗೆ ಬರುವ ಕ್ಯಾನ್ಸರ್ ರೋಗಿಗಳಿಗೆ ಧರ್ಮಶಾಲಾ  ಒಂದನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ.

[do_widget id=et_ads-2]

ಈ ಧರ್ಮಶಾಲಾ ವನ್ನು ಕಿದ್ವಾಯಿ ಆಸ್ಪತ್ರೆಗೆ ಬರುವ ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬ ದವರು ವಾಸ ಮಾಡಲು ಬಳಸಬಹುದು. ಇಲ್ಲಿ ಕೇವಲ ಕಲಬುರಗಿ ನಾಗರಿಕರು ಮಾತ್ರವಲ್ಲದೆ ಪಕ್ಕದ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಬೀದರ್ ಹಾಗೂ ಬಳ್ಳಾರಿಯ ಜನತೆಯ ಬಳಸಿಕೊಳ್ಳುವ ಅವಕಾಶ ಇದೆ.

[do_widget id=et_ads-3]

ಈ ಹಿಂದೆಯೂ ಸಹ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಹಲವಾರು ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚಿರುವ ಇವರು ಈಗ ಮತ್ತೊಮ್ಮೆ ತಮ್ಮ ವಿಶಾಲವಾದ ಹೃದಯದಿಂದ ರೋಗಿಗಳಿಗಾಗಿ ಧರ್ಮ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಈ ಧರ್ಮಶಾಲಾದಲ್ಲಿ ಸುಮಾರು 1 ಸಾವಿರ ರೋಗಿಗಳು ಒಮ್ಮೆ ವಾಸ  ಮಾಡಲು ಅವಕಾಶವಿದೆ.

[do_widget id=et_ads-4]