ಮುಂಬೈ(ನ.15): ಮೂರು ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿರುವ ಮುಂಬೈ ಇಂಡಿಯನ್ಸ್ ಇದೀಗ 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2019ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದಿಂದ ಕೈಬಿಟ್ಟಿರುವ ಆಟಗಾರರ ಪಟ್ಟಿಯನ್ನ ಪ್ರಕಟಿಸಿದೆ.
[do_widget id=et_ads-2]
ಆಲ್ರೌಂಡರ್ ಜೆಪಿ ಡುಮಿನಿ, ವೇಗಿ ಪ್ಯಾಟ್ ಕಮಿನ್ಸ್, ಮುಸ್ತಾಫಿಜುರ್ ರೆಹಮಾನ್, ಸೌರಬ್ ತಿವಾರಿ, ಪ್ರದೀಪ್ ಸಾಂಗ್ವಾನ್ ಸೇರಿದಂತೆ ಪ್ರಮುಖ 10 ಆಟಗಾರರನ್ನ ಮುಂಬೈ ಇಂಡಿಯನ್ಸ್ ತಂಡ ಕೈಬಿಟ್ಟಿದೆ.
ಮಂಂಬೈ ಉಳಿಸಿಕೊಂಡ ಆಟಗಾರರು:
ರೋಹಿತ್ ಶರ್ಮಾ, ಹಾರ್ಧಿಕ್ ಪಾಂಡ್ಯ ಜಸ್‌ಪ್ರೀತ್ ಬುಮ್ರಾ, ಕ್ರುನಾಲ್ ಪಾಂಡ್ಯ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಮಯಾಂಕ್ ಮಾರ್ಕಂಡೆ, ರಾಹುಲ್ ಚಹಾರ್, ಅಂಕುಲ್ ರಾಯ್, ಸಿದ್ದೇಶ್ ಲಾಡ್, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಕ್ವಿಂಟನ್ ಡಿಕಾಕ್, ಬೆನ್ ಕಟ್ಟಿಂಗ್, ಮೆಚೆಲ್ ಮೆಕ್ಲೆನಾಘನ್, ಆಡಮ್ ಮಿಲ್ನೆ, ಜಾಸನ್ ಬೆಹ್ರೆಂಡ್ರೋಫ್
[do_widget id=et_ads-4]
ತಂಡದಿಂದ ಕೈಬಿಡಲಾದ ಆಟಗಾರರು:
ಸೌರಬ್ ತಿವಾರಿ, ಪ್ರದೀಪ್ ಸಾಂಗ್ವಾನ್, ಮೊಹಿಸಿನ್ ಖಾನ್, ಎಂ.ಡಿ ನಿಧೇಶ್, ಜೆಪಿ ಡುಮಿನಿ, ಪ್ಯಾಟ್ ಕಮಿನ್ಸ್, ಮುಸ್ತಾಫಿಜುರ್ ರೆಹಮಾನ್, ಆಕಿಲ್ ದನಂಜಯ, ಶರದ್ ಲುಂಬಾ, ತಜಿಂದರ್ ಸಿಂಗ್ ದಿಲ್ಲೋನ್
Credits: Suvarna News
[do_widget id=et_ads-3]