ಕಳೆದ ಕೆಲವು ದಿನಗಳ ಹಿಂದಷ್ಟೇ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಬಿಜೆಪಿ ಪಕ್ಷದ ವಿರುದ್ಧವಾಗಿತ್ತು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಿಜೆಪಿ ಪಕ್ಷದ ಹೈಕಮಾಂಡ್ ಇಂದು ಮಂಗಳೂರಿನಲ್ಲಿ ಆರೆಸ್ಸೆಸ್ ಬೈಠಕ್ ನಲ್ಲಿ ಮಹತ್ವದ ಚರ್ಚೆಗಳನ್ನು ನಡೆಸಬೇಕೆಂದು ನಿರ್ಧರಿಸಿತ್ತು. ಅದಕ್ಕಾಗಿಯೇ ಅಮಿತ್ ಶಾ ರವರು ಸಹ ಮಂಗಳೂರಿಗೆ ಬಂದಿದ್ದರು. ಅದೇ ವೇಳೆ ಬಿಎಸ್ ಯಡಿಯೂರಪ್ಪನವರ ವರ್ಚಸ್ಸು ಕಂಡ ಅಮಿತ್ ಶಾ ರವರು ಶಾಕ್ ಆಗಿದ್ದಾರೆ.
[do_widget id=et_ads-2]
ಮೊದಲಿನಿಂದಲೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಪಟ್ಟವನ್ನು ಇತರರಿಗೆ ನೀಡಬೇಕು ಎಂದು ಹಲವಾರು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಆದರೆ ಬಿಜೆಪಿ ಪಕ್ಷದ ಚಾಣಕ್ಯ ರಾದ ಅಮಿತ್ ಶಾ ರವರು ಯಡಿಯೂರಪ್ಪನವರ ಬೆನ್ನಿಗೆ ನಿಂತು ನೀವೇ ರಾಜ್ಯಾಧ್ಯಕ್ಷರಾಗಿರಿ ಎಂದು ಪ್ರತಿ ಬಾರಿಯೂ ಹೇಳುತ್ತಿದ್ದರು. ಆದರೆ ಈ ಬಾರಿ ಅಮಿತ್ ಶಾ ರವರು ರಾಜಕೀಯ ಒತ್ತಡಗಳಿಗೆ ಮಣಿದು ರಾಜ್ಯಾಧ್ಯಕ್ಷ ಪಟ್ಟವನ್ನು ಬದಲಾಯಿಸಲು ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗುತ್ತಾರೆ.
[do_widget id=et_ads-3]
ಅದೇ ವೇಳೆಯಲ್ಲಿ ಆರ್ಎಸ್ಎಸ್ ನಾಯಕರು ಮತ್ತು ಬಿಜೆಪಿ ಪಕ್ಷದ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸುವ ವೇಳೆಯಲ್ಲಿ ಬಿ ಎಸ್ ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾಗಿ ಮುಂದುವರಿಯಲು ಇರುವ ಬೆಂಬಲವನ್ನು ನೋಡಿದ ಅಮಿತ್ ಶಾ ರವರು ಒಂದು ಕ್ಷಣ ಶಾಕ್ ಆಗುತ್ತಾರೆ. ಬಾರಿ ಪ್ರತಿರೋಧವನ್ನು ಕಂಡ ಅಮಿತ್ ಶಾ ರವರು ಈ ನಿರ್ಧಾರವನ್ನು ಇಲ್ಲಿಗೆ ಕೈಬಿಟ್ಟು ಮುಂದಿನ ಲೋಕಸಭಾ ಚುನಾವಣೆಯವರೆಗೂ ಬಿಎಸ್ ಯಡಿಯೂರಪ್ಪನವರೇ ನಾಯಕರು ಎಂದು ಘೋಷಿಸಿದ್ದಾರೆ.
[do_widget id=et_ads-4]
ಬಿ ಎಸ್ ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾಗಿ ಇರುವುದು ಕೇವಲ ಜನರಿಗೆ ಮಾತ್ರ ಇಷ್ಟವಿದೆ ಎಂದು ಅಮಿತ್ ಶಾ ಅವರು ನಂಬಿದ್ದರು ಆದರೆ ಪಕ್ಷದ ನಾಯಕರ ಬೆಂಬಲವನ್ನು ಗಮನಿಸಿದ ಅಮಿತ್ ಶಾ ರವರು ಇನ್ನು ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಮುಂದಿನ ಲೋಕಸಭಾ ಚುನಾವಣೆಗೂ ಬದಲಾಯಿಸುವ ಮಾತೇ ಬರುವುದಿಲ್ಲ ಎಂಬಂತೆ ಕಡಕ್ ಆಗಿ ಯಡಿಯೂರಪ್ಪನವರೇ ಮುಂದಿನ ಲೋಕಸಭಾ ಚುನಾವಣೆಗೂ ನಾಯಕರು ಎಂದು ಘೋಷಣೆ ಮಾಡಿದ್ದಾರೆ.
[do_widget id=et_ads-5]