ಅಯೋಧ್ಯೆಯಲ್ಲಿ ಶುರುವಾಯಿತು ಹೈಡ್ರಾಮಾ

ಅಯೋಧ್ಯೆಯಲ್ಲಿ ಶುರುವಾಯಿತು ಹೈಡ್ರಾಮಾ

0

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಭಾರತೀಯ ಹಿಂದುವಿನ ಕನಸಾಗಿದೆ. ಆದರೆ ಸುಪ್ರೀಂ ಕೋರ್ಟ್ ಅಂಕಣದಲ್ಲಿ ನಡೆಯುತ್ತಿರುವ ಕೇಸ್ ತೀರ್ಪಿಗಾಗಿ ಕಾಯುತ್ತಿರುವ ಕೇಂದ್ರ ಸರ್ಕಾರವು ಕೈಕಟ್ಟಿ ಕುಳಿತಿದೆ. ಸುಪ್ರೀಂ ಕೋರ್ಟ್ ಗೆ ಎಚ್ಚರಿಕೆ ನೀಡಲು ವಿಶ್ವ ಹಿಂದೂ ಪರಿಷತ್ ಧರ್ಮ ಸಭಾ ಕಾರ್ಯಕ್ರಮ ಇದೇ ತಿಂಗಳ ನವಂಬರ್ 24, 25ರಂದು ಆಯೋಜನೆ ಯಾಗಿದ್ದು ಲಕ್ಷಾಂತರ ರಾಮಭಕ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

[do_widget id=et_ads-2]

ಈ ಸಭೆ ಘೋಷಣೆ ಆಗುತ್ತಿದ್ದಂತೆ ರಾಮಮಂದಿರ ನಿರ್ಮಾಣದ ವಿರುದ್ಧ ಹೋರಾಡುತ್ತಿರುವ ಕೆಲವು ಮುಸ್ಲಿಂ ನಿವಾಸಿಗಳು ಅಯೋಧ್ಯೆಯಲ್ಲಿ ಹೈಡ್ರಾಮಾ ಸ್ಟಾರ್ಟ್ ಮಾಡಿದ್ದಾರೆ. ಹೌದು ಈ ರ್ಯಾಲಿ ಅಯೋಧ್ಯೆ ಯಲ್ಲಿರುವ ಮುಸ್ಲಿಂ ನಿವಾಸಿಗಳನ್ನು ಚಿಂತೆಗೆ ಈಡು ಮಾಡುತ್ತಿದೆ, ಈ ರ್ಯಾಲಿ ನಡೆದರೆ ಮುಸ್ಲಿಮರು ಖಂಡಿತ ಅಯೋಧ್ಯೆ ಬಿಟ್ಟು ಹೊರಗಡೆ ಹೋಗಬೇಕಾಗುತ್ತದೆ. ಒಂದು ವೇಳೆ ನಾವು ಇಲ್ಲೇ ಇರಬೇಕು ಎಂದಿದ್ದರೆ ನಮಗೆ ಭದ್ರತೆ ನೀಡಿ ಎಂದು ಕೆಲವರು ಕ್ಯಾತೆ ತೆಗೆದಿದ್ದಾರೆ.

[do_widget id=et_ads-3]

ಆದರೆ ಇಲ್ಲಿ ವಿಶ್ವ ಹಿಂದೂ ಪರಿಷತ್ ಕೇವಲ ರ್ಯಾಲಿಯನ್ನು ನಡೆಸಲು ಮಾತ್ರ ಉದ್ದೇಶಿಸಿದೆ. ಇದರ ಹಿಂದೆ ಯಾವುದೇ ಮುಸ್ಲಿಂ ಬಾಂಧವರಿಗೆ ಆಗಲಿ ಅಥವಾ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ ಎಂಬುದನ್ನು ತಿಳಿದರು ಸಹ ಅಯೋಧ್ಯೆಯಲ್ಲಿ ಕೆಲವು ಕಿಡಿಗೇಡಿಗಳು ಭದ್ರತೆ ನೀಡಿ, ಹೊರ ಹೋಗುತ್ತೇವೆ ಈ ರೀತಿಯ ಮಾತುಗಳಿಂದ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ.

[do_widget id=et_ads-4]