ಹೊರಬಿತ್ತು ಮೋದಿ ತಂತ್ರಗಾರಿಕೆ- ನೋಟ್ ಬ್ಯಾನ್ ಇದು ಸೀಕ್ರೆಟ್ ಪ್ಲಾನ್

ಹೊರಬಿತ್ತು ಮೋದಿ ತಂತ್ರಗಾರಿಕೆ- ನೋಟ್ ಬ್ಯಾನ್ ಇದು ಸೀಕ್ರೆಟ್ ಪ್ಲಾನ್

0

ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕಿನ ಹಳೆಯ ನೋಟುಗಳ ವಾಪಸಾತಿ ವರದಿಯೊಂದು ಬಹಿರಂಗಗೊಂಡಿತ್ತು. ಇದು ಇಡಿ ದೇಶಕ್ಕೆ ಶಾಕ್ ನೀಡಿತ್ತು.  ನಮೋ ಭಕ್ತರಿಗೆ ಎಲ್ಲಿಲ್ಲದ ಆತಂಕ ಎದುರಾಗಿತ್ತು,  ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ನಾಯಕರು ಇದರ ವಿರುದ್ಧ ಅಪಸ್ವರ ಎತ್ತಿ ಮೋದಿ ರವರ ಮೇಲೆ ಟೀಕೆಗಳ ಬಾಣಗಳನ್ನೇ ಬಿಟ್ಟರು. ಆದರೆ ಅದೆಲ್ಲದಕ್ಕೂ ಇಂದು ಸಚಿವರಾದ ಜೇಟ್ಲಿ ನವರು ಉತ್ತರ ನೀಡಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು?

ಮೋದಿ ರವರು ಬ್ಯಾನ್ ಮಾಡಿದ ಹಳೆಯ 500 ಮತ್ತು 100 ನೋಟುಗಳು ಶೇಕಡ 99 ಗಿಂತಲೂ ಹೆಚ್ಚು ನೋಟುಗಳು ವಾಪಸ್ ಆಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿಯೊಂದನ್ನು ಬಹಿರಂಗಗೊಳಿಸಿತ್ತು.

ಇದನ್ನೇ ಬಳಸಿಕೊಂಡ ಕಾಂಗ್ರೆಸ್ ಪಕ್ಷದವರು ಜನಸಾಮಾನ್ಯರ ತಲೆ ಕೆಡಿಸಲು ನೋಟ್ ಬ್ಯಾನ್ ಒಂದು ಅರ್ಥಪೂರ್ಣ ವಿಲ್ಲದ ನಿರ್ಧಾರ.  ಇದರಿಂದ ಜನಸಾಮಾನ್ಯರಿಗೆ ತೊಂದರೆ ಯಾಗಿದೆ ಎಂದು  ಮೋದಿ ರವರನ್ನು ದೂಷಿಸಿದರು. ಆದರೆ ಇದೆಲ್ಲದಕ್ಕೂ ಉತ್ತರವನ್ನು ಜೇಟ್ಲಿ ನೀಡಿದ್ದಾರೆ.  ಸಂಪೂರ್ಣ ವಿವರವನ್ನು ತಿಳಿಯಲು ಸಂಪೂರ್ಣ ಓದಿ.

ನೋಟ್ ಬ್ಯಾನ್ ನಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಗಮವಾಗಿದೆ. ಇದರಿಂದ ದೇಶದ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗುತ್ತಿದೆ. ನೋಟ್ ಬ್ಯಾನ್ ನ ಪ್ರಮುಖ ಉದ್ದೇಶ ತೆರಿಗೆ ಸಂಗ್ರಹವನ್ನು ಹೆಚ್ಚು ಮಾಡುವುದು ಮತ್ತು ಕಪ್ಪು ಹಣವನ್ನು ಹೊರಗೆಳೆಯುವುದು.  ಅದನ್ನು ಮಾಡಿದ್ದೇವೆ, ಈಗ ಎಲ್ಲಾ ಹಣವು   ಜನರ ಮಧ್ಯೆಯೇ ಇದೆ ಮತ್ತು ಪ್ರತಿಯೊಂದು ರೂಪಾಯಿಗೂ ಜನರು ತೆರಿಗೆಯನ್ನು ಪಾವತಿಸುವ ಪರಿಸ್ಥಿತಿ ಎದುರಾಗಿದೆ.

 

ಅನ್ನದೇ ಸ್ವಿಸ್ ಬ್ಯಾಂಕ್ ನಲ್ಲಿ ಇರುವ ಪ್ರತಿಯೊಬ್ಬ ಭಾರತೀಯನ ಕಪ್ಪು ಹಣವು ಗಣನೀಯವಾಗಿ ಇಳಿಕೆಯಾಗಿದೆ, ಇದರಿಂದ ಭ್ರಷ್ಟಾಚಾರವನ್ನು ನಾವು ತಡೆದಿದ್ದೇವೆ. ಈಗ ಪ್ರತಿಯೊಬ್ಬ ಭಾರತೀಯನು ತೆರಿಗೆ ಕಟ್ಟದೆ ಬೇರೆ ದಾರಿಯೇ ಇಲ್ಲ ಎಂಬುದನ್ನು ವಿವರಿಸಿದರು.

ಮೊದಲ ಎರಡು ವರ್ಷಗಳಲ್ಲಿ ತೆರಿಗೆ ಸಂಗ್ರಹ ಶೇ 6.6 ರಿಂದ ಶೇ 9 ಕ್ಕೆ ಏರಿತ್ತು, ಆದರೆ ನಿಷೇಧದ ನಂತರ ಆದಾಯ ಶೇ 15 ರಿಂದ ಶೇ 18 ಕ್ಕೆ ಏರಿಕೆಯಾಗಿದೆ. IT ಸಲ್ಲಿಕೆಗೆ ಸಂಬಂಧಿಸಿದಂತೆ ಅಪ್ಲಿಕೇಶನ್ನ ಸಂಖ್ಯೆ 3.8 ಕೋಟಿಗೆ ಇತ್ತು. ಈ ದರ 2017-18ರಲ್ಲಿ 6.86 ಕ್ಕೆ ಏರಿದೆ. ಅದು ತೆರಿಗೆ ವಿನಾಯಿತಿ ಶೇಕಡಾ 19 ರಿಂದ ಶೇಕಡಾ 25 ಕ್ಕೆ ಏರಿದೆ ಎಂದು ಗಮನಾರ್ಹವಾಗಿದೆ.

ಒಟ್ಟಿನಲ್ಲಿ ಈಗ ಪ್ರತಿಯೊಂದು ರೂಪಾಯಿಯೂ ಭಾರತೀಯರ ಮಧ್ಯೆ ಇದೆ ಮತ್ತು ಆ ಒಂದು ರೂಪಾಯಿಯ ತೆರಿಗೆಯನ್ನು ಸಹ ಪ್ರತಿಯೊಬ್ಬರೂ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಎಂಬುದನ್ನು ಜೇಟ್ಲಿ ರವರು ಜನರಿಗೆ ಮನದಟ್ಟು ಮಾಡಲು ಹೊರಟಿದ್ದಾರೆ.ತೆರಿಗೆ ಪಾವತಿಸಿದರೆ ಕಪ್ಪು ಹಣ ತೊಲಗಿದಂತೆ ಅಲ್ಲವೇ? ಹೌದು ಎಂದು ನಮಗೆ ಎನಿಸುತ್ತದೆ ನಿಮಗೂ ಹಾಗೆಯೇ ಅನಿಸಿದರೆ ಶೇರ್ ಮಾಡಿ.