ದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮುಡಿಗೆ ಮತ್ತೊಂದು ದಾಖಲೆ

ಭಾರತದ ಕ್ರಿಕೆಟ್ ತಂಡದ ನಾಯಕ ರಾದ ವಿರಾಟ್ ಕೊಹ್ಲಿ ರವರು ದಾಖಲೆಗಳ ಸರದಾರ ಎಂದೇ ಪ್ರಸಿದ್ಧರು.  ವಿಶ್ವ ಟೆಸ್ಟ್ ಕ್ರಿಕೆಟ್ ನ ನಂಬರ್ 1 ಬ್ಯಾಟ್ಸ್ ಮ್ಯಾನ್ ಆಗಿರುವ ವಿರಾಟ್ ಕೊಹ್ಲಿ ರವರು ಇಂಗ್ಲಿಷ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದುವರೆಗೂ ಭಾರತದ 9 ಆಟಗಾರರು ಟೆಸ್ಟ್ ಕ್ರಿಕೆಟ್ ನಲ್ಲಿ 6 ಸಾವಿರ ರನ್ ಪೂರೈಸಿದ ದಾಖಲೆಯೊಂದನ್ನು ಮಾಡಿದ್ದರು. ಈಗ ಕೊಹ್ಲಿ ರವರು ಅದೇ ಸಾಲಿಗೆ ಸೇರ್ಪಡೆಯಾಗಿದ್ದು ಟೆಸ್ಟ್ ಕ್ರಿಕೆಟ್ ನಲ್ಲಿ ಆರು ಸಾವಿರ ರನ್ ಪೂರೈಸಿದ ಹತ್ತನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಅಂದಹಾಗೆ ವಿರಾಟ್ ಕೊಹ್ಲಿ ರವರು ಈ ಸಾಧನೆಯನ್ನು ಕೇವಲ 119 ಇನ್ನಿಂಗ್ಸ್ ಗಳಲ್ಲಿ ಮಾಡಿದ್ದಾರೆ.  ಇವರಿಗಿಂತ ಒಂದು ಕೈ ಮೇಲಿರುವ ಸುನಿಲ್ ಗವಾಸ್ಕರ್ ಅವರು ಕೇವಲ 117 ಇನಿಂಗ್ಸ್ ಗಳಲ್ಲಿ 6000 ಪೂರೈಸಿದ್ದರು.

Post Author: Ravi Yadav