ಬಿಹಾರದಂತಾಗಲಿದೆಯೇ ಕರ್ನಾಟಕ- ಬಿಎಸ್ ಯಡಿಯೂರಪ್ಪ ನವರು ಮತ್ತೆ ಮುಖ್ಯಮಂತ್ರಿ?

ಬಿಹಾರದಂತಾಗಲಿದೆಯೇ ಕರ್ನಾಟಕ- ಬಿಎಸ್ ಯಡಿಯೂರಪ್ಪ ನವರು ಮತ್ತೆ ಮುಖ್ಯಮಂತ್ರಿ?

0

ಕರ್ನಾಟಕದ ಕಥೆ ಕೇಳುವ ಮೊದಲು ನೀವು ಬಿಹಾರದ ಕಥೆ ಕೇಳಲೇ ಬೇಕು. ಬಿಹಾರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ತಪ್ಪಿಸಲು ಪ್ರಾದೇಶಿಕ ಪಕ್ಷಗಳು ಮೈತ್ರಿಯನ್ನು ಮಾಡಿಕೊಂಡು ಜೆಡಿಯು ಪಕ್ಷವು ಅಧಿಕಾರದ ಗದ್ದುಗೆ ಹೇರಿತ್ತು. ಆದರೆ ಈ ಮೈತ್ರಿ ಹೆಚ್ಚು ದಿನ ಉಳಿಯಲಿಲ್ಲ.

ಯಾಕೆಂದರೆ ಮೈತ್ರಿಯ ಸರ್ಕಾರದ ಒಳಗಡೆ ಕಚ್ಚಾಟಗಳು ಶುರುವಾಗಿತ್ತು. ಇದನ್ನು ಅರಿತ ಜೆಡಿಯು ಪಕ್ಷದ ನಾಯಕರು ಅಧಿಕಾರ ಮತ್ತು ರಾಜ್ಯದ  ಹಿತದೃಷ್ಟಿಯಿಂದ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಿ ಪ್ರಾದೇಶಿಕ ಪಕ್ಷಗಳ ಮೈತ್ರಿಯನ್ನು ಕಳಚಿಕೊಂಡು ಸರ್ಕಾರ ರಚಿಸಿದ್ದರು.

ಈಗ ಕರ್ನಾಟಕದಲ್ಲಿಯೂ ಸಹ ಅದೇ ರೀತಿಯ ವಿದ್ಯಮಾನಗಳು ನಡೆಯುತ್ತಿವೆ, ಆದರೆ ಸ್ವಲ್ಪ ಬದಲಾವಣೆ ಏನೆಂದರೆ ಇಲ್ಲಿ ಮುಖ್ಯಮಂತ್ರಿಗಳು ಸಹ ಬದಲಾಗಲಿ ದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆಲ್ಲಾ ಕಾರಣವೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಎದ್ದಿರುವ ಅಪಸ್ವರಗಳು.

ಸಿದ್ದು ರವರ ವಿದೇಶಿ ಪ್ರವಾಸದ ಬೆನ್ನಿಗೆ ಬೆಂಗಳೂರಿನ ಶಾಸಕರು ಸೇರಿದಂತೆ ಹಲವಾರು ಸಿದ್ದರಾಮಯ್ಯ ಬೆಂಬಲಿಗರು ಮೈತ್ರಿ ಸರ್ಕಾರವನ್ನು ಮುರಿಯಲು ನಿರ್ಧರಿಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಮೈತ್ರಿ ಸರ್ಕಾರದಲ್ಲಿ ಅಪಸ್ವರಗಳು ಹೆಚ್ಚಾಗಿದ್ದು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವಂತೆ ಕಾಣುತ್ತಿದೆ ಎಂದು ಮೊನ್ನೆಯಷ್ಟೇ ಒಂದು ಸಮೀಕ್ಷೆ ಬಹಿರಂಗಗೊಂಡಿತ್ತು.

ಇದನ್ನು ಅರಿತಿರುವ ಜೆಡಿಎಸ್ ಪಕ್ಷದ ನಾಯಕರಾದ ಕುಮಾರಸ್ವಾಮಿ ರವರು ಚುನಾವಣೆಯನ್ನು ಎದುರಿಸುವ ಬದಲು ಬಿಜೆಪಿ ಸರ್ಕಾರದ ಜೊತೆ ಮೈತ್ರಿಯನ್ನು ಮಾಡಿಕೊಂಡು ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಯಡಿಯೂರಪ್ಪನವರಿಗೆ ಬೆಂಬಲ ಘೋಷಿಸಿ ಮುಖ್ಯಮಂತ್ರಿಯನ್ನಾಗಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.