ಮೇಘಾಲಯ ಉಪಚುನಾವಣೆ- ಭರ್ಜರಿ ಗೆಲುವು ದಾಖಲಿಸಿದ ಬಿಜೆಪಿ

ಈ ಬಾರಿ ದೇಶದಲ್ಲಿ ಪ್ರತಿಯೊಂದು ಚುನಾವಣೆಯು ಬಹಳ ಮಹತ್ವವನ್ನು ಪಡೆದುಕೊಳ್ಳುತ್ತಿವೆ, ಅದಕ್ಕೆ ಕಾರಣ ಭಾರತದ ಪ್ರಧಾನ ಸೇವಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿ. ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿ ಬಾರಿಯೂ ನರೇಂದ್ರ ಮೋದಿ ರವರ ವಿರುದ್ಧ ಕಣಕ್ಕೆ ಇಳಿಯುತ್ತದೆ.  ಆದರೆ ಮೋದಿ ರವರು ಜಯ ದಾಖಲಿಸುತ್ತಾರೆ.

ಈ ಬಾರಿಯೂ ಮೇಘಾಲಯ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಭರ್ಜರಿಯಾಗಿ ಗೆಲುವು ದಾಖಲಿಸಿದ್ದು  ಲೋಕಸಭಾ ಚುನಾವಣೆಗೆ ಕನ್ನಡಿಯಂತೆ  ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ಪಕ್ಷಕ್ಕೆ ಸಾರಿದೆ. ಅಷ್ಟಕ್ಕೂ ವಿಷಯದ ಮೂಲವೇನು?

ಕಳೆದ ಮಾರ್ಚಿನಲ್ಲಿ ಮೇಘಾಲಯದ ಚುನಾವಣೆಯಲ್ಲಿ ತನ್ನ ಅಸ್ತಿತ್ವವೇ ಇಲ್ಲದ ಪ್ರದೇಶದಲ್ಲಿ ಕೆಲವು ಸೀಟುಗಳನ್ನು ಗೆದ್ದರು ಇತರ ಪಕ್ಷಗಳ ಮೈತ್ರಿಯೊಂದಿಗೆ  ಸರ್ಕಾರ ರಚಿಸಲು ಸಫಲವಾಗಿದ್ದ ಬಿಜೆಪಿಗೆ  ಉಪಚುನಾವಣೆ ಒಂದು ಪ್ರತಿಷ್ಠೆಯ ಕಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ  ಬಿಜೆಪಿ ಸರ್ಕಾರವು   ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.

ಎರಡು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ಕ್ರಮವಾಗಿ 8000 ಮತ್ತು 3500  ಕ್ಕೂ  ಹೆಚ್ಚು ಮತಗಳಿಂದ ಜಯಬೇರಿ ಬಾರಿಸಿ, ಲೋಕಸಭಾ ಚುನಾವಣೆಗೆ ಸ್ಪರ್ಧೆ ಸಂದೇಶವನ್ನು ಸಾರಿದೆ ಒಂದು ವೇಳೆ ಇದೇ ಮೈತ್ರಿ ಹೀಗೆ ಮುಂದುವರೆದಲ್ಲಿ  ಮೇಘಾಲಯದ  ಎಲ್ಲಾ ಲೋಕಸಭಾ ಚುನಾವಣೆಯ ಕ್ಷೇತ್ರಗಳು ಬಿಜೆಪಿಯ ವಶವಾಗುವುದು ಖಂಡಿತ.

Post Author: Ravi Yadav