ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್- ಕಮಲ ಸೇರಲಿದ್ದಾರೆ ಸಿದ್ದು, ಖರ್ಗೆ ಆಪ್ತ

ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಮೇಲೆ ಶಾಕ್ ಎದುರಾಗುತ್ತಿವೆ,ಮೊದಲೇ ದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಯಾಕೋ ಸಮಯ ಸರಿ ಇದ್ದಂತೆ ಕಾಣುತ್ತಿಲ್ಲ.  ಇಷ್ಟೇ ಅಲ್ಲದೆ ಪ್ರತಿದಿನವೂ ಮೋದಿ ವರ್ಚಸ್ಸು ಮತ್ತು ಬಿಜೆಪಿ ಪಕ್ಷದ ವರ್ಚಸ್ಸು ಹೆಚ್ಚಾಗುತ್ತಿದೆ.

ಪ್ರತಿಯೊಬ್ಬ ಕಾರ್ಯಕರ್ತರು ಶಾಸಕರು ಮತ್ತು ದೊಡ್ಡ ನಾಯಕರನ್ನು ಕಾಪಾಡಿಕೊಳ್ಳುವುದೇ ಕಾಂಗ್ರೆಸ್ ಪಕ್ಷಕ್ಕೆ ಕಷ್ಟವೆನಿಸುತ್ತಿದೆ. ಇಷ್ಟು ಸಾಲದು ಎಂಬಂತೆ ಕಾಂಗ್ರೆಸ್ ಪಕ್ಷವು ತೃತಿಯ ರಂಗ ಸೃಷ್ಟಿಸಿ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ವೇಳೆಯಲ್ಲಿ ಸಿದ್ದರಾಮಯ್ಯನವರ ಆಪ್ತ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಲು ನಿರ್ಧರಿಸಿದ್ದಾರೆ.

ಹೌದು ಕಾಂಗ್ರೆಸ್ ಸಂಸದಿಯ ನಾಯಕರಾದ ಬಾಬು ರಾವ್ ರವರು ಇನ್ನು ಕೇವಲ ಎರಡು ದಿನಗಳಲ್ಲಿ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.  ಬಹಿರಂಗವಾಗಿ ಪತ್ರಿಕೆಗಳ ಮುಂದೆ ಈ ವಿಷಯನ್ನು ಘೋಷಿಸಿರುವ ಬಾಬು ರಾವ್ ರವರು ಕಾಂಗ್ರೆಸ್ನ ಕುತಂತ್ರ ನೀತಿಯೊಂದನ್ನು ಹೊರಬಿಟ್ಟಿದ್ದಾರೆ.

ನಾನು ಕಳೆದ ಚುನಾವಣೆಯಲ್ಲಿ ಸೋಲಲು ಜೆಡಿಎಸ್ ಅಥವಾ ಬಿಜೆಪಿ ಕಾರಣವಲ್ಲ ಬದಲಾಗಿ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ನನ್ನನ್ನು ಸೋಲಿಸಿದ್ದಾರೆ.   ಎಂದು ಗಂಭೀರ ಆರೋಪ ಮಾಡಿ ನಾಳೆ ಅಧಿಕೃತವಾಗಿ ಗುಂಡು ರಾವ್ ರವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಘೋಷಿಸಿದ್ದಾರೆ.

Post Author: Ravi Yadav