ಅಂತೂ-ಇಂತೂ ಪ್ರಕಾಶನ ಅಂತ್ಯ ಬಂತು- ಜೈಲೇ ಗತಿ

ಭಾರತದಲ್ಲಿ ಯಾವುದೇ ಒಬ್ಬ ನಾಯಕರು ಯಾವುದೇ ಧರ್ಮವನ್ನು ತಿರಸ್ಕರಿಸಿ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆಬರುವಂತೆ ಮಾತನಾಡುವ ಹಾಗಿಲ್ಲ.  ಈ ರೀತಿಯ ಕಾನೂನು ಇದ್ದರೂ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಕಾಶ್ ರೈ ರವರು ಪ್ರತಿ ಬಾರಿಯೂ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಮಾತುಗಳನ್ನು ಆಡುತ್ತಿದ್ದರು.

ಇದರ ವಿರುದ್ಧ ಹಲವರು ಧ್ವನಿಯೆತ್ತಿದ್ದರು ಆದರೆ ಯಾವುದಕ್ಕೂ ಪ್ರಕಾಶ್ ರೈ ರವರು ಜಗ್ಗಲಿಲ್ಲ.  ಚುನಾವಣಾ  ಸಂದರ್ಭದಲ್ಲಿ ಮನ ಬಂದಂತೆ ಮಾತನಾಡುತ್ತಿದ್ದ ಪ್ರಕಾಶ್ ರವರು ಚುನಾವಣೆಯ ನಂತರ ಕಣ್ಮರೆಯಾಗಿದ್ದರು. ಆದರೆ ಮತ್ತೆ ಬಂದಿರುವ ಪ್ರಕಾಶ್ ರೈ ರವರಿಗೆ ಬಂದಿದ ತಕ್ಷಣ ಶಾಕ್ ಎದುರಾಗಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಭಾರತೀಯ ಹಿಂದೂಗಳು ಗೋಮಾತೆಯನ್ನು ದೇವರಂತೆ ಪೂಜಿಸುತ್ತಾರೆ. ಆದರೆ ಪ್ರಕಾಶ್ ರೈ ರವರು ವಿಜಯಪುರದಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ  ಗೋಮಾತೆಯ ಬಗ್ಗೆ ಮರ ಬಂದಂತೆ ಮಾತನಾಡಿದ್ದಾರೆ. ಇದನ್ನು ಖಂಡಿಸಿರುವ ಬೆಂಗಳೂರಿನ ವಕೀಲರಾದ ಕಿರಣ್ ರವರು  ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೋರ್ಟಿಗೆ ಹಾಜರಾಗುವಂತೆ ನೋಟಿಸ್ ಕಳಿಸಿದ್ದಾರೆ.

ಕೇವಲ ಒಂದು ಪ್ರಕರಣದಲ್ಲಿ ಅಲ್ಲದೆ ಅದೆಷ್ಟು ಬಾರಿ ಪ್ರಕಾಶ್ ರವರು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತಹ ಮಾತುಗಳನ್ನು ಆಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ವಕೀಲರು ಎಫ್ಐಆರ್ ದಾಖಲಿಸಿದ್ದಾರೆ. ಒಂದು ವೇಳೆ ಈ ಪ್ರಕರಣ ಸಾಬೀತಾದಲ್ಲಿ ಪ್ರಕಾಶ್ ರೈ ರವರು ಹಲವು ತಿಂಗಳುಗಳು ಅಥವಾ ವರ್ಷಗಳ ಕಾಲ ಜೈಲಿನಲ್ಲಿರಬೇಕಾಗುತ್ತದೆ. ಜಾಮೀನಿನ ಮೇಲೆ ಹೊರಗಡೆ ಬಂದರು ಸಮಾರಂಭಗಳಲ್ಲಿ  ಮಾತನಾಡುವುದನ್ನು ನಿಲ್ಲಿಸಬೇಕಾಗುತ್ತದೆ. ಇದೆಲ್ಲವನ್ನು ಗಮನಿಸಿದರೆ ಪ್ರಕಾಶ್ ರೈ ಅವರ ಮಾತುಗಳಿಗೆ ಅಂತ್ಯ ಬಂದಂತೆ ಕಾಣುತ್ತಿದೆ.

Post Author: Ravi Yadav