ಬಿಹಾರದಲ್ಲಿ ಮೊಳಗಿತು ಲೋಕಸಭಾ ರಣಕಹಳೆ- ಬಿಜೆಪಿಯ ಮಾಸ್ಟರ್ ಪ್ಲಾನ್ ಏನು ಗೊತ್ತಾ?

ಬಿಹಾರದಲ್ಲಿ ಮೊಳಗಿತು ಲೋಕಸಭಾ ರಣಕಹಳೆ- ಬಿಜೆಪಿಯ ಮಾಸ್ಟರ್ ಪ್ಲಾನ್ ಏನು ಗೊತ್ತಾ?

0

2019 ರ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಈ ಲೋಕಸಭಾ ಚುನಾವಣೆಯು ಮೋದಿ ರವರಿಗೆ ಅಗ್ನಿಪರೀಕ್ಷೆ ಯಾಗಿ ಬದಲಾಗಿದೆ. ಇದನ್ನರಿತಿರುವ ಮೋದಿ ಮತ್ತು ಪಕ್ಷದ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಅಮಿತ್ ಶಾ ರವರು ಪ್ರತಿಯೊಂದು ಸೀಟು ಮುಖ್ಯವೆಂದು ಅರಿತಿದ್ದಾರೆ.

ಯಾವುದೇ ಕ್ಷೇತ್ರವನ್ನು ಕಡೆಗಣಿಸಿದರು ನಿರ್ಧರಿಸಿರುವ ಬಿಜೆಪಿ ಪಕ್ಷವು ಬರೋಬ್ಬರಿ 40 ಲೋಕಸಭಾ ಚುನಾವಣಾ ಕ್ಷೇತ್ರಗಳು ಇರುವ ಬಿಹಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಸಕತ್ತಾಗಿಯೇ ಪ್ಲಾನ್ ಮಾಡಿದೆ.

ಈಗಾಗಲೇ ಬಿಹಾರದಲ್ಲಿ ಜೆಡಿಯು ಪಕ್ಷದ ಜೊತೆ ಮೈತ್ರಿ ಸರ್ಕಾರವನ್ನು ರಚಿಸಿರುವ ಬಿಜೆಪಿ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯನ್ನು  ಮುಂದುವರಿಸಲು ನಿರ್ಧರಿಸಿದೆ. ಇಷ್ಟೇ ಅಲ್ಲದೆ ಇನ್ನು ಎರಡು ಪಕ್ಷಗಳನ್ನು ಹೆಚ್ಚಿಗೆ ಸೇರಿಸಿಕೊಂಡು ನಾಲ್ಕು ಪಕ್ಷಗಳು ಮೈತ್ರಿಯನ್ನು  ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಸಿದ್ಧವಾಗಿವೆ.

ಅಷ್ಟಕ್ಕೂ ಮೈತ್ರಿ ವಿವರಗಳೇನು?

40 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಲ್ಲಿ ಕೇವಲ ಬಿಜೆಪಿ ಪಕ್ಷವು ಮಾತ್ರ ಸ್ಪರ್ಧಿಸಲಿದೆ, ಉಳಿದ 20 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳನ್ನು ಅಧಿಕಾರದ ಪಾರ್ಟಿ ಜೆಡಿಯುಗೆ ಬಿಟ್ಟುಕೊಟ್ಟರೆ 5 ಕ್ಷೇತ್ರಗಳನ್ನು ಲೋಕಜನಶಕ್ತಿ ಪಾರ್ಟಿ ಗೆ ಬಿಟ್ಟುಕೊಟ್ಟಿದೆ. ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಲೋಕ ಸಮತಾ ಪಕ್ಷ  ಸ್ಪರ್ಧಿಸಲಿದೆ.

ಯಾವುದೇ ಮತಗಳು ಪಕ್ಷದ ಕೈ ತಪ್ಪಬಾರದು ಎಂದು ನಿರ್ಧರಿಸಿರುವ ಬಿಜೆಪಿ ಪಕ್ಷವು ಪಕ್ಷದ ಕೈ ತಪ್ಪಬಾರದು ಎಂದು ನಿರ್ಧರಿಸಿರುವ ಬಿಜೆಪಿ ಪಕ್ಷವು  ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ.