ಎಲ್ಲರಿಗಿಂತಲೂ ಪ್ರಧಾನಿ ನಮೋ ಗ್ರೇಟಂತೆ! ಒಮ್ಮೆ ಓದಿ ಶೇರ್ ಮಾಡಿ ಬೆಂಬಲಿಸಿ

0

ನರೇಂದ್ರ ಮೋದಿ ರವರ ಅಧಿಕಾರಕ್ಕೆ ಬಂದ ಮೇಲೆ ಪ್ರತಿದಿನವೂ ನರೇಂದ್ರ ಮೋದಿ ರವರ ವರ್ಚಸ್ಸು ಹೆಚ್ಚುತ್ತಿದೆ. ಈಗ ಮತ್ತೊಂದು ಗರಿ ಮೋದಿ ರವರಿಗೆ ದೊರಕಿದೆ.ಅದು ಏನೆಂದು ತಿಳಿಯಲು ಮತ್ತು ಸಂಪೂರ್ಣ ವಿವರಕ್ಕಾಗಿ ಕೆಳಗಡೆ ಓದಿ.

ಭಾರತ ದೇಶವು ಸ್ವತಂತ್ರ ಬಂದ ಮೇಲೆ ಹಲವಾರು ಪ್ರಧಾನಿಗಳನ್ನು ಕಂಡಿದೆ. ಒಬ್ಬೊಬ್ಬರದ್ದು ಒಂದೊಂದು ಸಿದ್ಧಾಂತ. ಆ ಪ್ರಧಾನಿಗಳಲ್ಲಿ ಕೆಲವೊಂದು ಪ್ರಧಾನಮಂತ್ರಿಗಳು ತಮ್ಮದೇ ಆದ ಹೆಜ್ಜೆಗುರುತುಗಳನ್ನು ಭಾರತದ ಇತಿಹಾಸದಲ್ಲಿ ಬಿಟ್ಟು ಹೋಗಿದ್ದಾರೆ. ಈ ಎಲ್ಲಾ ನಾಯಕರನ್ನು ಒಂದು ತಕ್ಕಡಿಯಲ್ಲಿ  ಇಟ್ಟು  ಯಾರು ಗ್ರೇಟ್ ಎಂದು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಇಂಡಿಯಾ ಟುಡೇ ಸಮೀಕ್ಷೆಯೊಂದನ್ನು ನಡೆಸಿತ್ತು.

ರಾಜಕೀಯ ವಿಶ್ಲೇಷಕರು ಈ ವರದಿಯನ್ನು ನೋಡಿದ ನಂತರ ಮೋದಿ ರವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ಸಮೀಕ್ಷೆಯ ಪಲಿತಾಂಶಗಳು ಏನು? ಫಲಿತಾಂಶದ ವಿವರ ಹೀಗಿದೆ: 

ಹೆಚ್.ಡಿ ದೇವೇಗೌಡ, ಪಿ.ವಿ ನರಸಿಂಹ ರಾವ್, ಚಂದ್ರಶೇಖರ ಅವರು ಶೇಕಡಾ1ರಷ್ಟು ಮತ ಗಳಿಸಿ ಕೊನೆಯ ಸ್ಥಾನಗಳಿಸಿದರೆ, ಅಜಾತಶತ್ರು ಎಂದೇ ಹೆಸರು ಗಳಿಸಿರುವ ಅಟಲ್ ಬಿಹಾರಿ ವಾಜಪೇಯಿ ರವರು ಶೇಕಡಾ 12ರಷ್ಟು  ಮತ ಪಡೆದುಕೊಂಡು ಮೂರನೇ ಸ್ಥಾನ ಗಳಿಸಿದ್ದಾರೆ. ಇನ್ನೂ ಇಂದಿರಾಗಾಂಧಿ ರವರು ಶೇಕಡಾ 20 ರಷ್ಟು ಮತ ಗಳಿಸಿದರೆ ಊಹೆಯಂತೆ ನರೇಂದ್ರ ಮೋದಿ ರವರು ಬರೋಬರಿ 26 ಪರ್ಸೆಂಟ್ ಮತಗಳಿಸಿ ದೇಶದ ಸಾರ್ವಕಾಲಿಕ ಗ್ರೇಟ್ ಪ್ರಧಾನಮಂತ್ರಿ ಎನಿಸಿಕೊಂಡಿದ್ದಾರೆ.

ಒಂದು ವೇಳೆ ಇದೇ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ಕಂಡು ಬಂದಲ್ಲಿ ಭಾರತದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಅಥವಾ ಮೂರು ಪಕ್ಷಗಳು ಸ್ಪರ್ಧಿಸುವು ದರಲ್ಲಿ ಅನುಮಾನವೇ ಇಲ್ಲ, ಉಳಿದ ಪಕ್ಷಗಳು ಅವನತಿ ಹೊಂದಲಿವೆ.