ಮನಸ್ಸಿದ್ದರೆ ಮಾರ್ಗ: ದಿವಾಕರ್ ಅವರು ಮಾಡಿದ ಕೆಲಸ ನೋಡಿದರೆ ಶಹಭಾಷ್ ಅಂತೀರಾ !

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು ದೇಶದೆಲ್ಲೆಡೆಯಿಂದ  ಹಲವರು ಸಹಾಯ ಹಸ್ತ  ಚಾಚುತ್ತಿದ್ದಾರೆ. ಆದರೆ ಈ ವಿಷಯ ಸ್ವಲ್ಪ ವಿಭಿನ್ನ. ಕೊನೆಯ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ದಿವಾಕರ್ ಅವರು ತಮ್ಮ ಕೈಲಾದಷ್ಟು ಸಹಾಯ ಮಾಡಿ ಸುಮ್ಮನಿರಬಹುದಿತ್ತು.

ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಡೆಯ ಬಿಗ್ ಬಾಸ್ ನಲ್ಲಿ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಇವರು ಕೊನೆಯ ಸ್ಥಾನ ಗಳಿಸಿದ್ದರು. ಆದರೆ ಮನಸಿದ್ದರೆ ಮಾರ್ಗ ಎಂಬುವ ಗಾದೆಯನ್ನು ದಿವಾಕರ್ ಅವರು ನಿರೂಪಿಸಿದ್ದಾರೆ.

ದಿವಾಕರ್ ರವರು ತಮ್ಮ ಹಣ ವಷ್ಟೆ ಅಲ್ಲದೆ ಯಶವಂತಪುರದಲ್ಲಿ ನ ಪ್ರತಿ ಅಂಗಡಿಗೂ ತಾವೇ ಸ್ವತಹ ಹೋಗಿ ಕೊಡಗು ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವ ಸಲುವಾಗಿ ದೇಣಿಗೆಯನ್ನು ಸಂಗ್ರಹಿಸುತ್ತಿದ್ದಾರೆ. ಇವರ ದೊಡ್ಡ ಮನಸ್ಸು ಹೀಗೆ ಇರಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ.

ಧನ್ಯವಾದಗಳು ದಿವಾಕರ್ ಸರ್

Post Author: Ravi Yadav