ಅಜಾತಶತ್ರುವಿಗೆ ಸಂದ ದೊಡ್ಡ ಗೌರವ – ಛತ್ತೀಸ್ ಗಢ ಸರ್ಕಾರ ಮಾಡಿದ್ದಾದರೂ ಏನು?

ಅಜಾತಶತ್ರುವಿಗೆ ಸಂದ ದೊಡ್ಡ ಗೌರವ – ಛತ್ತೀಸ್ ಗಢ ಸರ್ಕಾರ ಮಾಡಿದ್ದಾದರೂ ಏನು?

0

ಮಧ್ಯಪ್ರದೇಶದಿಂದ ಛತ್ತೀಸ್ ಗಢವು ಹೊರಗೆ ಬಂದು ಪ್ರತ್ಯೇಕ ರಾಜ್ಯವಾಗಲು ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ವಾಜಪೇಯಿರವರ ಪಾತ್ರ ಬಹುಮುಖ್ಯವಾಗಿತ್ತು.  ಅದೇ ಕಾರಣದಿಂದ ವಾಜಪೇಯಿರವರಿಗೆ  ಛತ್ತೀಸ್ ಗಢವು ಒಂದು ದೊಡ್ಡ ಗೌರವವನ್ನು ನೀಡಲು ಮುಂದಾಗಿದೆ.

ಛತ್ತೀಸ್ ಗಢ ಮುಖ್ಯಮಂತ್ರಿಗಳಾದ ರಮಣ್ ಸಿಂಗ್ ರವರು ಛತ್ತೀಸ್ ಗಢದ ರಾಜಧಾನಿ ಯಾದ ನಯ ರಾಯ್ಪುರವನ್ನು’ಅಟಲ್ ನಗರ’ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದಾರೆ.

ಭಾರತದ ಸುಸಜ್ಜಿತ ನಗರ ಎಂದೇ ಖ್ಯಾತಿ ಪಡೆದಿರುವ ನಯಾ ರಾಯ್ಪುರ ಹೆಸರನ್ನು ಮಾಜಿ ಪ್ರಧಾನಿ ವಾಜಪೇಯಿರವರಿಗಾಗಿ ಹೆಸರು ಬದಲಾಯಿಸಲು ನಿರ್ಧರಿಸುವುದು ಅವರಿಗೆ ಸಂದ ದೊಡ್ಡ ಗೌರವರಗಳ ಸಾಲಿಗೆ ಮತ್ತೊಂದು ಗೌರವ ಸೇರ್ಪಡೆಯಾಗಲಿದೆ

ಭಾರತದ ಅತ್ಯುತ್ತಮ ನಗರಗಳಲ್ಲೊಂದಾದ ನಯಾ ರಾಯ್ಪುರ ಸುಸಜ್ಜಿತ ನಗರವೆಂಬ ಹೆಗ್ಗಳಿಕೆ ಗಳಿಸಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಬೇರ್ಪಟ್ಟಾಗಲೂ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆವರು ರಾಯ್ಪುರಕ್ಕೆ ಬಂದು ಹೊಸ ನಗರ ಕಟ್ಟುವುದು ಹೇಗೆಂಬ ಬಗ್ಗೆ ಅಭ್ಯಸಿಸಿ ಹೋಗಿದ್ದರಂತೆ! ಅತೀ ಕಡಿಮೆ ಅವಅಧಿಯಲ್ಲಿ ಒಂದು ಆಧುನಿಕ ನಗರವನ್ನು ಇಷ್ಟೆಲ್ಲ ಸುಸಜ್ಜಿತವಾಗಿ ಕಟ್ಟಬಹುದು ಎಂಬುದಕ್ಕೆ ರಾಯ್ಪುರ ಒಂದು ಉದಾಹರಣೆ ಎಂದು ನಾಯ್ಡು ಅವರೇ ಹೇಳಿದ್ದರು.