ಅಟಲ್ ಜೀಯ ಶ್ರದ್ಧಾಂಜಲಿ ಸಮಯದಲ್ಲಿ ಫಾರೂಖ್ ಅಬ್ದುಲ್ಲಾ ಏನು ಮಾಡಿದರು? ಒಮ್ಮೆ ಓದಿ

ಅಟಲ್ ಜೀಯ ಶ್ರದ್ಧಾಂಜಲಿ ಸಮಯದಲ್ಲಿ ಫಾರೂಖ್ ಅಬ್ದುಲ್ಲಾ ಏನು ಮಾಡಿದರು? ಒಮ್ಮೆ ಓದಿ

0

ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಮಾರಂಭ ದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂ ಅಲ್ಲಿ ಸೋಮವಾರ ನಡೆಸಲಾಯಿತು. ಈ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಸಂಘ ಪ್ರಮುಖರಾದ ಮೋಹನ್ ಭಾಗವತ್ ವಿಪಕ್ಷಗಳ ನಾಯಕ ಗುಲಾಂ ನಬೀ ಆಜಾದ್ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ಭಾಗಿಯಾಗಿದ್ದರು.

ಸಭೆಯನ್ನು ಕುರಿತು ಮಾತಾಡುವ ಸಂಧರ್ಭದಲ್ಲಿ ಫಾರೂಖ್ ಅಬ್ದುಲ್ಲಾ ವಾಜಪೇಯಿ ಅವರನ್ನು “ದಿಲೋ ಕಾ ಮಾಲಿಕ್” ಎಂದು ಸಂಬೋಧಿಸಿದ್ದಾರೆ. ದಿಲೋ ಕಾ ಮಾಲಿಕ್ ಅಂದರೆ ಹೃದಯಗಳ ಮಾಲಿಕ ಹೃದಯವಂತ ಎಂದರ್ಥ. ಜನರು ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಸಂದೇಶ ನೀಡಿದರು.

ಇದೇ ಸಂಧರ್ಭದಲ್ಲಿ ಫಾರೂಖ್ ಅಬ್ದುಲ್ಲಾ ಭಾರತ್ ಮಾತಾ ಕೀ ಜೈ ಹಾಗೂ ಜೈ ಹಿಂದ್ ಘೋಷಣೆ ಕೂಡಾ ಕೂಗಿದರು.

ತಮ್ಮ ಭಾಷಣದಲ್ಲಿ ಅವರು ವಾಜಪೇಯಿ ಅವರು ಅಟಲ್ ರಂತಹ ಹೃದಯವಂತ ಯಾರೂ ಇರಲಿಲ್ಲ, ಅವರು ಜಾತಿ, ಧರ್ಮ, ಪ್ರಾಂತ್ಯಗಳಲ್ಲಿ ದೋಷ, ವ್ಯತ್ಯಾಸ ಕಾಣುತ್ತಿರಲಿಲ್ಲ. ಶಕ್ತಿಯಿಂದಲ್ಲದೆ ಪ್ರೀತಿಯಿಂದ ಜನರನ್ನು ಸೆಳೆಯುತ್ತಿದ್ದರು. ಒಗಟ್ಡಿನಿಂದಲೇ ಈ ದೇಶ ಮುಂದೆ ಸಾಗಬಹುದೆಂದು ಅವರಿಗೆ ಅಂದೇ ಗೊತ್ತಿತ್ತು. ಅವರು ಅದನ್ನೇ ನಂಬಿದ್ದರು‌. ಈ ದೇಶವನ್ನು ಯಾರೂ ಬೀಳಿಸಲಸಾಧ್ಯ, ಬೀಳಿಸುವಂತಹ ದೇಶ ಯಾವುದೂ ಹುಟ್ಟಿ ಲ್ಲ. ಈ ದೇಶ ನನ್ನದು, ನಿನ್ನದು ಅಲ್ಲ ಎಲ್ಲರದೂ ಎಂದು ಹೇಳಿದ್ದರು.

ವಿಶ್ವಕ್ಕೆ ಭಾರತದ ತಾಕತ್ತು ತೋರಿಸಿದವರು ಅಟಲ್ ಬಿಹಾರಿ ವಾಜಪೇಯಿ, ಅವರ ನೆನಪು ಇರಬೇಕೆಂದರೆ ಪ್ರೀತಯನ್ನು ಹಂಚಿ, ಅದೇ ಅವರಿಗೆ ಕೊಡುವ ಶ್ರದ್ಧಾಂಜಲಿ ಹಾಗೂ ಗೌರವವಾಗಿದೆ. ನಾನು ಸಾಯುವ ತನಕವೂ ಅವರ ದಾರಿಯಲ್ಲೇ ಸಾಗುವೆ ಎಂದು ಹೇಳಿದರು.