ಅಟಲ್‌ ಅಪ್ಪ-ಮಗ ಒಂದೇ ಸಾರಿ ಕಾಲೇಜಿಗೆ ಹೋಗ್ತಿದ್ರು!

ಲಖನೌ[ಆ.18] ಹೌದು, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರು ಕಾನ್ಪುರದಲ್ಲಿ ಕಾನೂನು ವಿದ್ಯಾಭ್ಯಾಸ ಪಡೆಯುತ್ತಿದ್ದಾಗ, ಅವರ ತಂದೆಯೂ ಅದೇ ತರಗತಿಯಲ್ಲಿ ವ್ಯಾಸಂಗ ಮಾಡಿದ್ದರಂತೆ!

2001-03ರಲ್ಲಿ ಪ್ರಧಾನಿಯಾದ ಬಳಿಕ ವಾಜಪೇಯಿಯವರು ತಮ್ಮ ಶೈಕ್ಷಣಿಕ ವಿಷಯಗಳ ಕುರಿತು ಸ್ವತಃ ಬರೆದ ಲೇಖನದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಕಾನ್ಪುರದ ಡಿಎವಿ ಕಾಲೇಜ್‌ನಲ್ಲಿ ವಾಜಪೇಯಿ ಕಾನೂನು ಅಧ್ಯಯನ ಮಾಡಲು ನಿರ್ಧರಿಸಿದ್ದರು. ಆಗ ತಮ್ಮ 30 ವರ್ಷಗಳ ಶಿಕ್ಷಕ ಸೇವೆಯಿಂದ ನಿವೃತ್ತಿಯಾಗಿದ್ದ ಅವರ ತಂದೆ ಪಂಡಿತ್‌ ಕೃಷ್ಣ ಬಿಹಾರಿಲಾಲ್‌ ವಾಜಪೇಯಿ ಕೂಡ ಕಾನೂನು ಪದವಿಗೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದರು.

ವಾಜಪೇಯಿ ಅವರಿಗೆ ಆಗ 21 ವರ್ಷಗಳಾಗಿದ್ದರೆ, ತಂದೆಗೆ 50 ವರ್ಷಕ್ಕೂ ಹೆಚ್ಚಾಗಿತ್ತು. ಒಂದೇ ತರಗತಿಯಲ್ಲಿದ್ದುದರಿಂದ ತಂದೆ ಬರದಿದ್ದರೆ ಮಗನ ಬಳಿ, ಮಗ ಬರದಿದ್ದರೆ ತಂದೆ ಬಳಿ ವಿಚಾರಿಸುತ್ತಿದ್ದರಂತೆ. ಹೀಗಾಗಿ ಕ್ರಮೇಣ ತರಗತಿ ವಿಭಾಗ ಬದಲಾಯಿಸಿದ್ದರಂತೆ!

Creadits: Suvarna News

Post Author: Ravi Yadav