ತಂದೆಯ ಹಾದಿಯಲ್ಲಿ ಮರಿ ಸಿಂಹ: ಮತ್ತೊಮ್ಮೆ ಮಿಂಚಿದ ಸಮಿತ್

ತಂದೆಯ ಹಾದಿಯಲ್ಲಿ ಮರಿ ಸಿಂಹ: ಮತ್ತೊಮ್ಮೆ ಮಿಂಚಿದ ಸಮಿತ್

0

ರಾಹುಲ್ ಡ್ರಾವಿಡ್ ರವರು ವಿಶ್ವಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಇವರ ಆಟಕ್ಕೆ ಅದೆಷ್ಟೋ ಜನ ಬೆರಗಾಗಿ ಹೋಗಿದ್ದಾರೆ. ಕ್ರಿಕೆಟ್ ನ ವಿವಿಧ ವಿಧಗಳಲ್ಲಿಯೂ ಸಹ ತಮ್ಮದೇ ಆದ ಛಾಪು ಮೂಡಿಸಿ ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾಗಿ ಎದ್ದು ನಿಂತವರು ರಾಹುಲ್ ದ್ರಾವಿಡ್.

ವಿಶ್ವ ಕಂಡ ಶ್ರೇಷ್ಠ ಆಟಗಾರ ಲ್ಲಿ ಒಬ್ಬರಾಗಿದ್ದರೂ ಸಾಮಾನ್ಯ ಆಟಗಾರರ ವ್ಯಕ್ತಿತ್ವವುಳ್ಳ ರಾಹುಲ್ ದ್ರಾವಿಡ್ ರವರ ನಡೆ-ನುಡಿಗಳು ಎಲ್ಲರಿಗೂ ಇಷ್ಟವಾಗುತ್ತವೆ.  ಇವರನ್ನು ಕ್ರಿಕೆಟ್ ಜಗತ್ತಿನ ಅಜಾತಶತ್ರು ಎಂದರೆ ತಪ್ಪಾಗಲಾರದು.ಅಷ್ಟಕ್ಕೂ ಈಗ ಅವರ ವಿಷಯಕ್ಕೆ ಏತಕ್ಕೆ ಎನ್ನುತ್ತಿರುವಿರಾ?

ದ್ರಾವಿಡ್ ರವರು ನಿವೃತ್ತಿ ಹೊಂದಿದ ಮೇಲೆ ಹಲವಾರು ಜನರು ಅವರ ಆಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ದ್ರಾವಿಡ್ ರವರ ಪುತ್ರರಾದ  ಸಮಿತ್  ದ್ರಾವಿಡ್ ರವರ ಆಟವನ್ನು ನೋಡಿದರೆ  ಇನ್ನು ಕೆಲವೇ ವರ್ಷಗಳಲ್ಲಿ ಅವರು  ಅಪ್ಪನ ಸ್ಥಾನ ತುಂಬುತ್ತಾರೆ ಎಂಬ ಭರವಸೆಗಳು ಮೂಡಿದೆ.  ಹಲವು ದಿನಗಳಿಂದ ಶ್ರೇಷ್ಠ ಪ್ರದರ್ಶನವನ್ನು ದೇಶಿ ಕ್ರಿಕೆಟ್ ನಲ್ಲಿ ನೀಡುತ್ತಿರುವ ಸಮಿತ್ ರವರು ಈಗ ಮತ್ತೊಮ್ಮೆ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಂಡರ್‌ 14 ಟೂರ್ನಿಯಲ್ಲಿ ಮಲ್ಯ ಅದಿತಿ ಇಂಟರ್’ನ್ಯಾಷನಲ್ ಸ್ಕೂಲ್’ನ ಸಮಿತ್‌, ಬೆತನೆ ಹೈಸ್ಕೂಲ್‌ ವಿರುದ್ಧ 81 ರನ್‌ ಬಾರಿಸಿದರು.  ಜತೆಗೆ ಬೌಲಿಂಗ್’ನಲ್ಲಿ 12 ರನ್‌ಗಳಿಗೆ 3 ವಿಕೆಟ್‌ ಕಬಳಿಸಿ ಗಮನ ಸೆಳೆದರು.ಇವರ ಆಲ್ರೌಂಡ್‌ ಆಟದ ನೆರವಿನಿಂದ ಮಲ್ಯ ಅದಿತಿ ಶಾಲೆ ಟೂರ್ನಿಯ  ಸೆಮಿಫೈನಲ್‌ ಪ್ರವೇಶಿಸಿತು.

ಬಹುಶಃ ಇವರು ಇನ್ನು ಕೇವಲ ಕೆಲವೇ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಸೇರಲಿದ್ದಾರೆ ಎಂದೆನಿಸುತ್ತಿದೆ.