ಬಿಗ್ ನ್ಯೂಸ್: ಸ್ವಾತಂತ್ರ್ಯ ಸಂಗ್ರಾಮದಲ್ಲಿ RSS ನ ಕೊಡುಗೆ ಏನು? ಇಲ್ಲಿದೆ ಸತ್ಯ

ಬಿಗ್ ನ್ಯೂಸ್: ಸ್ವಾತಂತ್ರ್ಯ ಸಂಗ್ರಾಮದಲ್ಲಿ RSS ನ ಕೊಡುಗೆ ಏನು? ಇಲ್ಲಿದೆ ಸತ್ಯ

0

ಭಾರತಮಾತೆಯನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಹಲವಾರು ಕ್ರಾಂತಿವೀರರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ,  ಅವರೆಲ್ಲರಿಗೂ  ನಮನ  ಸಲ್ಲಿಸುತ್ತಾ ಈ ಲೇಖನವನ್ನುಆರಂಭಿಸುತ್ತಿದ್ದೇನೆ.

ಭಾರತಕ್ಕೆ ಸ್ವತಂತ್ರ ಬಂದಿದ್ದಂತೂ ನಿಜ ಆದರೆ ವಿಪರ್ಯಾಸವೆಂದರೆ ಹಲವಾರು ರಾಜಕೀಯ ಪಕ್ಷಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವು ಎಂದು ಬೀಗುತ್ತಿರುತ್ತವೆ, ಅಷ್ಟಕ್ಕೂ ಅದು ಅವರ ಕರ್ತವ್ಯ, ಸ್ವತಂತ್ರ ಹೋರಾಟವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಭಾರತಮಾತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ಆದರೆ ಪ್ರತಿ ಬಾರಿಯೂ ಸ್ವತಂತ್ರ ಚಳುವಳಿ ಹೆಸರು ಬಂದಾಗ ಕೆಲವು ರಾಜಕೀಯ ಪಕ್ಷಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡುಗೆ ಏನು ಎಂದು ಪ್ರಶ್ನಿಸುತ್ತಾರೆ. ಇಂದು ಸ್ವತಂತ್ರ ದಿನಾಚರಣೆಯ ಸಂಭ್ರಮದಲ್ಲಿ ನಾವು ಆ ಪ್ರಶ್ನೆಗಳಿಗೆಲ್ಲ ಉತ್ತರವನ್ನು ನೀಡುತ್ತಿದ್ದೇವೆ. ದಯವಿಟ್ಟು ಒಮ್ಮೆ ಸಂಪೂರ್ಣ ಓದಿ ಶೇರ್ ಮಾಡಿ ಪ್ರತಿಯೊಬ್ಬರಿಗೂ ತಲುಪಿಸಿ.

ಈ ಬಗ್ಗೆ ನ್ಯೂಸ್ 18 ಸಂಘದ ಪ್ರಚಾರಕರಾಗಿದ್ದ ಹಿರಿಯ ಪತ್ರಕರ್ತರು ಮತ್ತು ಲೇಖಕರಾದ ನರೇಂದ್ರ ಸಹಗಲ್ ರವರು ನ್ಯೂಸ್ 18 ಚಾನಲ್ಗೆ ನೀಡಿದ ಸಂದರ್ಶನದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ದ ಸ್ವತಂತ್ರ ಹೋರಾಟದ ಕುರಿತು ಮಾತನಾಡಿದ್ದಾರೆ.ಅವರ ಮಾತುಗಳನ್ನು ನೀವೇ ಕೆಳಗಡೆ ಓದಿ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವಾರು ಜನರು ಮತ್ತು ಸಂಘಗಳು ಪಾಲ್ಗೊಂಡಿದ್ದಾರೆ ಆದರೆ ದೌರ್ಭಾಗ್ಯ ವೆಂಬಂತೆ ಇತಿಹಾಸದಲ್ಲಿ ಕೇವಲ ಒಂದು ಕುಟುಂಬಕ್ಕೆ ಸಂಬಂಧಿಸಿದಂತೆ ಇದನ್ನು ತಿರುಚಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಕೂಡ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ.

ಸ್ವಾತಂತ್ರ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ದಂತೆಯೇ ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಸಹ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇದರ ಬಗ್ಗೆ ನಾನೇ ಸ್ವತಹ ಒಂದು ಪುಸ್ತಕ ಬರೆದಿದ್ದು ಆ ಪುಸ್ತಕದಲ್ಲಿ ಸಾಕ್ಷಿ ಸಮೇತವಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕೊಡುಗೆಯನ್ನು ವಿವರಿಸಿದ್ದೇನೆ ಎಂದಿದ್ದಾರೆ

ರಾಷ್ಟ್ರೀಯ ಸ್ವಯಂ ಸಂಘವು ತಮ್ಮ ಹೆಸರನ್ನು ಬಳಸಿಕೊಂಡು ಏನೂ ಮಾಡುತ್ತಿರಲಿಲ್ಲ, ಬದಲಾಗಿ ಕೇವಲ ರಾಷ್ಟ್ರದ ಹಿತಕ್ಕಾಗಿ ಕಾಂಗ್ರೆಸ್ ಪಕ್ಷದ ಪ್ರತಿ ಆಂದೋಲನದಲ್ಲಿ ಮತ್ತು ಇತರ ಆಂದೋಲನ ಗಳಲ್ಲಿಯೂ ಸಹ ಸ್ವಯಂಸೇವಕರು ಭಾಗವಹಿಸಿದ್ದಾರೆ. ಅದೇ ಕಾರಣಕ್ಕಾಗಿಯೇ ಸ್ವಯಂ ಸೇವಾ ಸಂಘದ ಅಧ್ಯಕ್ಷರಾದ ಡಾಕ್ಟರ ಕೇಶವ ಬಲಿರಾಂ ಹೆಡ್ಗೆವಾರ್ ಅವರು ವರ್ಷಾನಗಟ್ಟಲೇ ಜೈಲುವಾಸವನ್ನು ಅನುಭವಿಸಿದ್ದಾರೆ ಎಂದಿದ್ದಾರೆ.

ಭಾರತದ ಸ್ವಾತಂತ್ರ ಸಂಗ್ರಾಮದ ವೇಳೆ ಬರೋಬ್ಬರಿ 16,000 ಸ್ವಯಂಸೇವಕರು ತಮ್ಮ ಹೋರಾಟದಿಂದ ಜೈಲುಗಳಲ್ಲಿ ಬಂಧಿತರಾಗಿದ್ದರು ಎಂದು ವಿವರಿಸಿದ್ದಾರೆ.1942 ರ ಆಂದೋಲನದಲ್ಲಿ ಎಲ್ಲರಿಗಿಂತಲೂ ಬಹುಮುಖ್ಯ ಪಾತ್ರ ವಹಿಸಿದ್ದು ರಾಷ್ಟ್ರೀಯ ಸ್ವಯಂ ಸೇವಾ ಸಂಘ ವೇ ಹೊರತು ಬೇರೆ ಯಾವುದೇ ಕುಟುಂಬವಲ್ಲ ಆದರೆ ರಾಷ್ಟ್ರೀಯ ಸ್ವಯಂ ಸೇವಕರು ಎಲ್ಲಿಯೂ ತಮ್ಮ ಸಂಘದ ಹೆಸರನ್ನು ಹೇಳಿ ಹೋರಾಟದಲ್ಲಿ ಭಾಗವಹಿಸಿಲ್ಲ ಬದಲಾಗಿ ಒಬ್ಬ ಭಾರತೀಯರಾಗಿ ಭಾಗವಹಿಸಿದ್ದೇವೆ ಎಂದರು.

ಇಷ್ಟೆಲ್ಲಾ ಹೋರಾಟ ಮಾಡಿದ ಕಾರಣದಿಂದಲೇ ನೆಹರೂರವರು ಸಹ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸದಸ್ಯ ರನ್ನು ತಮ್ಮ ಗಣರಾಜ್ಯದ ಪೆರೇಡ್ಗೆ ಆಹ್ವಾನಿಸಿದ್ದರು. ಕೇವಲ ಒಂದು ದಿನದಲ್ಲಿ 3500 ಸ್ವಯಂಸೇವಕರು ಸಿದ್ಧವಾಗಿ ಪರೇಡ್ನಲ್ಲಿ ಪಾಲ್ಗೊಂಡಿದ್ದ ವು ಎಂದು ಹೇಳಿದ್ದಾರೆ.

ಭಾರತ ಮಾತೆಯನ್ನು ರಕ್ಷಿಸುವ ಸಲುವಾಗಿ ಇಷ್ಟೆಲ್ಲಾ ಹೋರಾಟ ಮಾಡಿದರೂ ಸಹ ಸ್ವಯಂಸೇವಕರು ಎಲ್ಲಿಯೂ ತಮ್ಮ ಸಂಘದ ಹೆಸರನ್ನು ಹೊರ ಬಿಟ್ಟಿಲ್ಲ. ಹೌದು ಇದೇ ಸರಿ ಎನಿಸುತ್ತದೆ ಯಾಕೆಂದರೆ ಅಖಂಡ ಭಾರತದಲ್ಲಿ ಯಾವುದೇ ಸಂಘದ, ಜಾತಿಯ ಅಥವಾ ಧರ್ಮದ ಹೆಸರು ಹೇಳುವ ಮುನ್ನ ನೀನು ಒಬ್ಬ ಭಾರತೀಯ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಅದಕ್ಕಾಗಿಯೇ ಇರಬೇಕು ಸ್ವಯಂಸೇವಕರು ಎಲ್ಲಿಯೂ ತಮ್ಮ ಸಂಘದ ಹೆಸರನ್ನು ಉಲ್ಲೇಖಿಸಿಲ್ಲ.

ಈ ಸತ್ಯದ ಅರಿವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ತಲುಪಿಸಿ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.