ಸ್ವಾತಂತ್ರ್ಯ ದಿನದಂದು ದೇಶದ ಜನತೆಗೆ ಪ್ರಧಾನಿ ಭರ್ಜರಿ ಗಿಫ್ಟ್ ನೀಡಿದ ಮೋದಿ

ನರೇಂದ್ರ ಮೋದಿ ಅವರು ಇಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಭಾಷಣವನ್ನು ಮಾಡುತ್ತಿರುವಾಗ  ಬೃಹತ್ ಯೋಜನೆಯೊಂದನ್ನು  ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಜನರಿಗೆ ಘೋಷಿಸಿದ್ದಾರೆ. ಸದಾ ಒಂದಲ್ಲ ಒಂದು ಯೋಜನೆಗಳಿಂದ ದೇಶವನ್ನು ಮುನ್ನಡೆಸುತ್ತಿರುವ  ಮೋದಿ ರವರ ಜನಪ್ರಿಯ ಯೋಜನೆಗಳ ಸಾಲಿಗೆ ಈ ಯೋಜನೆಯು ಸಹ ಸೇರಲಿದೆ.

ಭಾರತದಲ್ಲಿನ ಜನಸಂಖ್ಯೆಯ ಬಗ್ಗೆ ನಿಮಗೆ ತಿಳಿದಿದೆ, ಇಷ್ಟು ಜನಸಂಖ್ಯೆ ಇದ್ದರೂ ಸಹ ನಾವು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ನೆರೆಯ ದೇಶವಾದ ಚೀನಾವು ಇಡೀ ವಿಶ್ವದಲ್ಲಿ ಜನಸಂಖ್ಯೆಯನ್ನು ಬಹಳ  ಸ್ಪಷ್ಟವಾಗಿ ಬಳಸಿಕೊಂಡು ವಿಶ್ವದೆಲ್ಲೆಡೆ ಮಾನ್ಯತೆ ಗಳಿಸಿದೆ. ಇದೇ ಉದ್ದೇಶದಿಂದ ಮೋದಿ ರವರು  ಪ್ರತಿಯೊಬ್ಬರ  ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತಹ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ.

ಅಷ್ಟಕ್ಕೂ ಆ ಯೋಜನೆ ಯಾವುದು? ಅದರಿಂದ ಆಗುವ ಲಾಭಗಳೇನು?

ಭಾರತದಲ್ಲಿನ ಐದು ಕೋಟಿ ಬಡ ಕುಟುಂಬಗಳಿಗೆ ಬರೋಬ್ಬರಿ 50 ಕೋಟಿ ಜನರಿಗೆ ತಲುಪುವಂತಹ  ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್ ಯೋಜನೆಯನ್ನು  ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಮೋದಿ ರವರು ಘೋಷಿಸಿದ್ದಾರೆ. ಇಂದು ನಮ್ಮ ಮೋದಿ ರವರು ವಿಶ್ವದಲ್ಲೇ ಅತಿದೊಡ್ಡ ಯೋಜನೆಯನ್ನು  ಜಾರಿಗೆ ತಂದಿದ್ದಾರೆ.  ಈ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬಕ್ಕೂ 5 ಲಕ್ಷ ಮೌಲ್ಯದ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ.

ಇನ್ನು ಮುಂದೆ ನೀವು ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ ಪೇ ಮಾಡುವ ಅಗತ್ಯವೇ ಬರಬಾರದು ಎಂಬ ಮುಖ್ಯ ಉದ್ದೇಶದಿಂದ ಈ ಆರೋಗ್ಯ ವಿಮೆಯನ್ನು  ಜಾರಿಗೊಳಿಸಿರುವ ಮೋದಿ ರವರು ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಕೆಲವೊಂದು ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಬಿಲ್ ಪೇ ಮಾಡುವಂತಹ ಆರೋಗ್ಯ ವಿಮೆಯನ್ನು ಜಾರಿಗೆ ತಂದಿದ್ದಾರೆ.

 

Post Author: Ravi Yadav