ಮಸೀದಿಗಳಿಗೆ ಬಿಗ್ ಶಾಕ್: ಪ್ರಕರಣ ಸಾಬೀತಾದರೆ ಇರುವುದಿಲ್ಲ ಮೈಕ್ ಸೌಂಡ್

ಮಸೀದಿಗಳಿಗೆ ಬಿಗ್ ಶಾಕ್: ಪ್ರಕರಣ ಸಾಬೀತಾದರೆ ಇರುವುದಿಲ್ಲ ಮೈಕ್ ಸೌಂಡ್

0

ದೇಶದೆಲ್ಲೆಡೆ ಬಹುದಿನಗಳಿಂದ ಚರ್ಚೆಗೆ ಗ್ರಾಸವಾಗಿರುವ ವಿಷಯಗಳಲ್ಲಿ ಮಸೀದಿಗಳ ಧ್ವನಿವರ್ಧಕದ  ವಿಷಯವು  ಮುಂಚೂಣಿಯಲ್ಲಿ ಕಂಡುಬರುತ್ತದೆ.  ಇಷ್ಟು ದಿವಸ ಮುಸ್ಲಿಂ ಬಾಂಧವರನ್ನು ಕೇವಲ ತಮ್ಮ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದ ರಾಜಕೀಯ ಪಕ್ಷಗಳು ಪರಿಸರದ ಕುರಿತು ಯಾವುದೇ ಕಾಳಜಿಯನ್ನು ವಹಿಸಿರಲಿಲ್ಲ.

ಅಖಂಡ ಭಾರತದಲ್ಲಿ ಎಲ್ಲರೂ ಒಂದೇ ಎನ್ನುವ ವಾದವನ್ನು ರಾಜಕಾರಣಿಗಳು ಮರೆತಿದ್ದರು. ಇದೇ ಕಾರಣಕ್ಕಾಗಿ ಸಾರ್ವಜನಿಕರು ಧ್ವನಿವರ್ಧಕಗಳ ಬಳಕೆಯನ್ನು ಕಡಿಮೆ ಮಾಡಿ ,ಇದರಿಂದ ಶಬ್ದ ಮಾಲಿನ್ಯವು ಕಡಿಮೆಯಾಗುತ್ತದೆ ಎಂದು ಹಲವಾರು ಬಾರಿ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದರು ರಾಜಕೀಯ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಧ್ವನಿವರ್ಧಕಗಳನ್ನು ನಿಲ್ಲಿಸುವಂತೆ ಮುಸ್ಲಿಮರಿಗೆ ಆದೇಶಿಸಿದರೆ ತಮ್ಮ ಓಟ್ ಬ್ಯಾಂಕ್ ಗೆ ತೊಂದರೆಯಾಗುತ್ತದೆ  ಎಂದು ಯಾವುದೇ ರಾಜಕಾರಣಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅವರಿಗೀಗ ಬಹು ದೊಡ್ಡ ಶಾಕ್ ಆಗಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಸೀದಿಗಳಲ್ಲಿ ಪ್ರತಿದಿನ ಐದು ಬಾರಿ ಧ್ವನಿವರ್ಧಕವನ್ನು ಬಳಸುತ್ತಾರೆ.  ಇದನ್ನು ಏಕಕಾಲದಲ್ಲಿ ಸುತ್ತಮುತ್ತಲಿನ ಎಲ್ಲಾ ಮಸೀದಿಗಳಲ್ಲಿ ಬಳಸುವುದರಿಂದ ಶಬ್ದ ಮಾಲಿನ್ಯವಾಗುತ್ತದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಭಿಪ್ರಾಯ ಹೊರಹಾಕಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮಾಲಿನ್ಯ ಮಂಡಳಿಯು ಧ್ವನಿವರ್ಧಕಗಳಿಂದ ಹೊರಬರುವ ಶಬ್ದದ ಪರಿಶೀಲನೆ ನಡೆಸಿ ಒಂದು ವೇಳೆ ಇದರಿಂದ ಶಬ್ದ ಮಾಲಿನ್ಯವಾಗುತ್ತದೆ ಎಂದು ದೃಢಪಟ್ಟಲ್ಲಿ ಧ್ವನಿವರ್ಧಕಗಳನ್ನು ಬ್ಯಾನ್ ಮಾಡಲು ನಿರ್ಧರಿಸಿದೆ.