ಬೊಬ್ಬೆ ಹೊಡೆಯಬೇಡಿ,ಸುಳ್ಳು ಮಾಧ್ಯಮಗಳನ್ನು ನಂಬಬೇಡಿ: ಬಿಎಸ್ ವೈ

ಹೌದು ಯಡಿಯೂರಪ್ಪನವರು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ,  ಇತ್ತೀಚಿಗಷ್ಟೇ ಕೆಲವು ಮಾಧ್ಯಮಗಳು ಭಾರತದ ರಕ್ಷಣಾ ಸಚಿವರಾದ ಸೀತಾರಾಮನ್ ರವರು ಬೆಂಗಳೂರಿನಲ್ಲಿ ನಡೆಯಬೇಕಿದ್ದ ವಾಯುಪಡೆಯ ಪ್ರದರ್ಶನವನ್ನು ಮುಂದಿನ ಲೋಕಸಭಾ ದೃಷ್ಟಿಯಿಂದ ಉತ್ತರ ಪ್ರದೇಶಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಸುದ್ದಿ ಪ್ರಕಟಿಸಿದ್ದರು.

ಆದರೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಸರ್ಕಾರದಿಂದ ಬಂದಿಲ್ಲ, ಇದು ಕೇವಲ ಊಹಾಪೋಹಗಳು. ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ರವರು ವಾಯುಪಡೆಯ ಪ್ರದರ್ಶನವನ್ನು ಲಕ್ನೋದಲ್ಲಿ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ  ಇಲ್ಲಿಯವರೆಗೂ  ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಇದನ್ನೇ ಮುಂದಿಟ್ಟುಕೊಂಡ ಮಾಧ್ಯಮಗಳು ಬೆಂಗಳೂರಿಂದ ವಾಯುಪಡೆ ಶಿಫ್ಟ್ ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಇದಕ್ಕೆ ಕಾಂಗ್ರೆಸ್ ನಾಯಕರು ಸಹ ಸೊಪ್ಪು ಹಾಕಿ ತಾಕತ್ತಿದ್ದರೆ ಬಿಜೆಪಿ ನಾಯಕರು ವಾಯುಪಡೆ ಪ್ರದರ್ಶನವನ್ನು ಬೆಂಗಳೂರಿಗೆ ಮರು ತನ್ನಿ ಎಂದು ಸವಾಲು ಹಾಕಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ರವರು ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಸಹ ಸುದ್ದಿಗಳನ್ನು ಹಬ್ಬಿಸುತ್ತಿದ್ದರು.  ಆದರೆ ಇದರ ಬಗ್ಗೆ ತುಟಿ ಬಿಚ್ಚಿ ರುವ ಯಡಿಯೂರಪ್ಪನವರು  ಮಾಧ್ಯಮದವರ ಮಾತಿಗೆ ಮತ್ತು ಕಾಂಗ್ರೆಸ್ ನಾಯಕರ ಮಾತಿಗೆ ಯಾವುದೇ ಅರ್ಥವಿಲ್ಲ ಸುಮ್ಮನೆ ಬೊಬ್ಬೆ ಹೊಡೆಯಬೇಡಿ ಭಾರತದ ಹೆಮ್ಮೆಯ ವಾಯುಪಡೆಯ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಜನರಿಗೆ ಆಶ್ವಾಸನೆ ನೀಡಿದ್ದಾರೆ.

Post Author: Ravi Yadav