ಹುತಾತ್ಮ ಯೋಧರ ಕುಟುಂಬದವರಿಗೆ ಸಹಾಯ ಮಾಡಲು ಯಾಕೆ ಹೀಗೆ ಮಾಡಬಾರದು?

ಹುತಾತ್ಮ ಯೋಧರ ಕುಟುಂಬದವರಿಗೆ ಸಹಾಯ ಮಾಡಲು ಯಾಕೆ ಹೀಗೆ ಮಾಡಬಾರದು?

0

ದೇಶದ ನೂರಿಪ್ಪತ್ತು ಕೋಟಿ ಜನ ಯಾವುದೇ ಶತ್ರುಗಳ ಭಯವಿಲ್ಲದೆ ದಿನಗಳನ್ನು ಕಳೆಯುತ್ತಿದ್ದಾರೆ ಅದಕ್ಕೆ ಕಾರಣವೇನೆಂದರೆ ನಮ್ಮೆಲ್ಲರ ಹೆಮ್ಮೆಯ ಭಾರತೀಯ ಸೈನಿಕರು. ದೇಶಕ್ಕಾಗಿ ಮತ್ತು ದೇಶದ ಜನರಿಗಾಗಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ದೇಶದ ಯಾವುದೇ ಮೂಲೆಗಳಲ್ಲಿಯೂ ಶತ್ರುಗಳನ್ನು ಮಟ್ಟ ಹಾಕುತ್ತಿರುವ  ಹೆಮ್ಮೆಯ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಈ ಲೇಖನವನ್ನು ಅರ್ಪಿಸಲು ಬಯಸುತ್ತಿದ್ದೇವೆ.

ವೀರ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ, ಇಂತಹ ಯೋಧರಿಗೆ ನಾವು ಮಾಡುತ್ತಿರುವುದಾದರೂ ಏನು?  ಕೇವಲ ರಾಜಕೀಯ ದುರುದ್ದೇಶಗಳಿಂದ  ಯೋಧರನ್ನು ಕಾಶ್ಮೀರದಲ್ಲಿ ಭಯೋತ್ಪಾದಕರು ಎಂದು ಕರೆದಿದ್ದಾರೆ.ಪಟ್ಟಿ ಮಾಡುತ್ತಾ ಹೋದರೆ  ಇಂತಹ ಎಷ್ಟೋ ವಿಷಯಗಳು ಸಿಗುತ್ತವೆ.

ಆದರೆ ಈ ಲೇಖನದ ಉದ್ದೇಶವೇ ಬೇರೆಯಾಗಿದೆ. ದಯವಿಟ್ಟು ಸಂಪೂರ್ಣ ಓದಿ ನಿಮ್ಮ ಬೆಂಬಲ ವಿದ್ದಲ್ಲಿ ಎಲ್ಲಾ ಕರ್ನಾಟಕದ ಲೋಕಸಭಾ ಸಂಸದರಿಗೂ  ತಲುಪುವವರೆಗೂ ಶೇರ್ ಮಾಡಿ, ಒಬ್ಬರಾದರೂ ಇದರ ಪರವಾಗಿ ಧ್ವನಿಯೆತ್ತಿ ದೇಶದ ಸೈನಿಕರಿಗೆ ಸಹಾಯ ವಾದಲ್ಲಿ ನಮ್ಮೆಲ್ಲರ ಜೀವನ ಸಾರ್ಥಕವಾದಂತೆ.

ಅಷ್ಟಕ್ಕೂ ಏನಿದು ಹೊಸ ಅಭಿಯಾನ?

ದೇಶದ ಗಡಿಗಳಲ್ಲಿ ಹಲವಾರು ಯೋಧರು ಹೋರಾಡುತ್ತಾ ವೀರಮರಣವನ್ನು ಹೊಂದುತ್ತಿದ್ದಾರೆ, ಯೋಧರ ಮರಣದ ನಂತರ ಅವರ ಕುಟುಂಬವು ಅನಾಥವಾಗುತ್ತದೆ. ಅವರ ಕುಟುಂಬಕ್ಕೆ ಸರ್ಕಾರ ಹಲವು ಪರಿವಾರಗಳನ್ನು  ನೀಡಿದರು ಅದು ಸಾಕಾಗುವುದಿಲ್ಲ ಎಂಬುದು ಅವರಿಗೂ ತಿಳಿದಿರುವ ವಿಷಯ.

ಹೀಗೆ ಮಾಡಿದರೆ ಹೇಗೆ? 

ಕೇಂದ್ರ ಸರ್ಕಾರವು ಒಂದು ಆದೇಶವನ್ನು ಹೊರಡಿಸಿ ದೇಶದ ಪ್ರತಿಯೊಂದು ಪ್ರಜೆಯನ್ನು ತಲುಪುವಂತೆ ಮಾಡಿ, ಅವರ ಬಳಿ ನೀವು ಸೇನೆಗೆ ಸಹಾಯ ಮಾಡಲು ಇಚ್ಛಿಸುವವರೇ ಎಂದು  ಅವರ ಬ್ಯಾಂಕ್ ಅಕೌಂಟಿನ  ನಂಬರ್ ತೆಗೆದುಕೊಂಡು ಪ್ರತಿಯೊಬ್ಬ ಯೋಧನು ವೀರಮರಣವನ್ನು ಹೊಂದಿದಾಗ  ಪ್ರತಿಯೊಬ್ಬರ ಬ್ಯಾಂಕ್ ಅಕೌಂಟಿನಿಂದ ಕೇವಲ ಒಂದು ರೂಪಾಯಿ ತೆಗೆದುಕೊಂಡು ಅದನ್ನು ಯೋಧನ ಕುಟುಂಬಕ್ಕೆ  ಪರಿಹಾರವಾಗಿ  ನೀಡುವ ಯೋಜನೆಯನ್ನು ಜಾರಿಗೆ ತಂದಲ್ಲಿ ವೀರ ಯೋಧನ ಕುಟುಂಬಕ್ಕೆ ಇದು ಸಹಕಾರಿಯಾಗಲಿದೆ ಎಂಬುದು ನಮ್ಮ ಅಭಿಪ್ರಾಯ.

ಹಲವು ಸಬ್ಸಿಡಿಗಳನ್ನು ಜನರು ತಮಗೆ ಬೇಡ ಎಂದು ಹಿಂದಿರುಗಿಸಿದ್ದಾರೆ ಇನ್ನು ಸೇನೆಯ ಹುತಾತ್ಮ ಯೋಧರಿಗೆ ಒಂದು ರೂಪಾಯಿ ನೀಡಲು ಹಿಂಜರಿಯುವವರೇ? ಖಂಡಿತ ಇಲ್ಲ ಎಂಬುದು ನಮ್ಮ ವಾದ. ಒಂದು ವೇಳೆ ನೀವು ಸಹ ಯೋಜನೆಯ ಅಡಿಯಲ್ಲಿ ಒಂದು ರೂಪಾಯಿ ನೀಡಲು ಸಿದ್ದವಿದ್ದರೆ ದಯವಿಟ್ಟು ಶೇರ್ ಮಾಡಿ ಪ್ರತಿಯೊಬ್ಬರಿಗೂ ತಲುಪಿಸಿ.

-ಮಂಜು