ಬಿಜೆಪಿ-ಶಿವಸೇನೆಯ ಬಿಕ್ಕಟ್ಟಿನ ನಡುವೆ ಬಂದ ಚುನಾವಣಾ ಫಲಿತಾಂಶ ಶಿವಸೇನೆ ಮಾಡಿದ ದ್ರೋಹಕ್ಕೆ ತಕ್ಕ ಪಾಠ.

ಬಿಜೆಪಿ-ಶಿವಸೇನೆಯ ಬಿಕ್ಕಟ್ಟಿನ ನಡುವೆ ಬಂದ ಚುನಾವಣಾ ಫಲಿತಾಂಶ ಶಿವಸೇನೆ ಮಾಡಿದ ದ್ರೋಹಕ್ಕೆ ತಕ್ಕ ಪಾಠ.

0

ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜಕೀಯ ಇತಿಹಾಸದಲ್ಲಿ ಮೋದಿ-ಷಾ ಜೋಡಿ ಹೊಸ ಇತಿಹಾಸ ಬರೆಯಿತು. ನಾಲ್ಕು ವರ್ಷದ ನಂತರವೂ ಮೋದಿಯವರ ಜನಪ್ರಿಯತೆ ಹೆಚ್ಚಾಗುತ್ತಾ ಇದೆ. ಮುಂದಿನ ಚುನಾವಣೆಗೆ ಎಲ್ಲಾ ವಿಪಕ್ಷಗಳು ಒಟ್ಟಾಗಿ ಮೋದಿ ವಿರುದ್ದ ಸೆಣಸಾಡಲು ತಯಾರಾಗಿದೆ. ಮೋದಿಯವರ ಅಲೆಯಲ್ಲಿ ಎಲ್ಲಾ ವಿಪಕ್ಷಗಳು ಕೊಚ್ಚಿ ಹೋಗುತ್ತಿದೆ. ಜನತೆ ಈ ವಿಪಕ್ಷಗಳ ಎಲ್ಲಾ ಕುತಂತ್ರ ಅರಿತಜಕೊಂಡು ಭಾರತೀಯ ಜನತಾ ಪಕ್ಷವನ್ನು ಈಗಾಗಲೇ ಎಲ್ಲಾ ರಾಜ್ಯಗಳಲ್ಲಿ ಅಧಿಕಾರಕ್ಕೆ ತಂದಿದೆ.

ವಿಷಯವೇನು? ಯಾವ ಚುನಾವಣೆ?

ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಕೌನ್ಸಿಲ್ ಚುನಾವಣೆ ನಡೆದಿತ್ತು ಇದರ ಫಲಿತಾಂಶ ಹೊರಬಿದ್ದಿದೆ. ಇದರ ಅಂಕಿ ಅಂಶಗಳು ಇಡೀ ವಿಪಕ್ಷಗಳ ನಿದ್ದೆಗೆಡಿಸುವುದರಲ್ಲಿ ಅನುಮಾನವಿಲ್ಲ. ಲೋಕಸಭಾ ಚುನಾವಣೆ ನಂತರದಲ್ಲಿ ಶಿವಸೇನೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದೆ ಚುನಾವಣೆ ಎದುರಿಸುತ್ತಿತ್ತು ಎಲ್ಲದರಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಈ ಬಾರಿಯೂ ಫಲಿತಾಂಶ ಮೊದಲಿನ ಹಾಗೆ ಬಂದಿದೆ.

ನಾಗ್ಪುರದಲ್ಲಿ ೩೮ ಸೀಟಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ೩೦ ಸೀಟಗಳನ್ನು ಗೆಲ್ಲುವ ಮೂಲಕ ಇತರ ಎಲ್ಲಾ ಪಕ್ಷಗಳಿಗೆ ಶಾಕ್ ನೀಡಿದೆ. ಕಾಂಗ್ರೆಸ್ ಹಾಗೂ ಎನ್ ಸಿ ಪಿ ಗೆ ತಲಾ ೩ ಸೀಟಗಳು ಸಿಕ್ಕರೆ ಶಿವಸೇನೆಗೆ ಕೇವಲ ೪ ಸೀಟುಗಳು ಸಿಕ್ಕಿದೆ. ಕೆಲ ದಿನಗಳ ಹಿಂದೆ ನಡೆದಿದ್ದ ಅವಿಶ್ವಾಸ ಮತಯಾಚನೆ ಸಂಧರ್ಭದಲ್ಲಿ ಶಿವಸೇನೆ ಬೆಂಬಲ ಕೊಡುತ್ತೇವೆ ಎಂದು ಹೇಳಿ ಸಂಸತ್ತಿನಿಂದ ಹೊರನಡೆದಿತ್ತು. ಇದು ಅದು ಮಾಡಿದ ದ್ರೋಹಕ್ಕೆ ಸಿಕ್ಕ ಶಿಕ್ಷೆ ಎಂದೇ ಹೇಳಬಹುದು.