ರಾಜ್ಯಸಭಾ ಉಪಾಧ್ಯಕ್ಷ ಹುದ್ದೆ: ಬಿಜೆಪಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಶಿವಸೇನೆ

ಶಿವಸೇನೆಯ ನಡೆ ಯಾರಿಗೂ ಅರ್ಥವಾಗುತ್ತಿಲ್ಲ, ಒಂದು ಕಡೆ ಮೋದಿ ಸರ್ಕಾರವನ್ನು ಕೆಲವು ದಿನಗಳ ಹಿಂದೆ ವಿರೋಧಿಸಿದ್ದ ಶಿವಸೇನೆಯನ್ನು ಕಂಡಿದ್ದ ಕಾಂಗ್ರೆಸ್ ಬಹಳ ಉತ್ಸಾಹದಲ್ಲಿ ತೇಲುತ್ತಿತ್ತು. ಆದರೆ ಶಿವಸೇನೆ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿ ಮತ್ತೊಮ್ಮೆ ಬಿಜೆಪಿ ಪರವಾಗಿ ನಿಂತಿದೆ.

ರಾಜ್ಯಸಭಾ ಉಪಾಧ್ಯಕ್ಷರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ಬಿಜೆಪಿಯ ಪರಿತ್ಯಕ್ತ ಮಿತ್ರ ಪಕ್ಷವಾಗಿರುವ ಶಿವಸೇನೆ ನಿರ್ಧರಿಸಿದೆ.ಆ.9ರಂದು ನಡೆಯುವ ರಾಜ್ಯಸಭಾ ಉಪಾಧ್ಯಕ್ಷರ ಸ್ಥಾನ ಚುನಾವಣೆಗೆ ಎನ್‌ಡಿಎ ತನ್ನ ಅಭ್ಯರ್ಥಿಯಾಗಿ ಜೆಡಿಯು ಪಕ್ಷದ ಹರಿವಂಶ ನಾರಾಯಣ ಸಿಂಗ್‌ ಅವರನ್ನು ನಿಲ್ಲಿಸಿದೆ.

“ನಾವು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ’ ಎಂದು ಶಿವಸೇನೆಯ ಸಂಸದ ಅನಿಲ್‌ ದೇಸಾಯಿ ಹೇಳಿದ್ದಾರೆ.ಲೋಕಸಭೆಯಲ್ಲಿ ಈಚೆಗೆ ವಿರೋಧ ಪಕ್ಷಗಳು ಮೋದಿ ಸರಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯ ಮೇಲಿನ ಮತದಾನದಿಂದ ಶಿವಸೇನೆ ಹೊರಗುಳಿದಿತ್ತು.

ಮೂಲ: ಉದಯವಾಣಿ

Post Author: Ravi Yadav