ಅನಂತ್ ಕುಮಾರ್ ಅವರ ವಿರುದ್ಧ ಟೀಕೆಗಳನ್ನು ಮಾಡಿದ ಮೀಡಿಯಾಗಳು ಈಗ ಎಲ್ಲಿದ್ದೀರಾ?

ಅನಂತ್ ಕುಮಾರ್ ಅವರ ವಿರುದ್ಧ ಟೀಕೆಗಳನ್ನು ಮಾಡಿದ ಮೀಡಿಯಾಗಳು ಈಗ ಎಲ್ಲಿದ್ದೀರಾ?

0

ಅನಂತ್ ಕುಮಾರ್ ಹೆಗಡೆ ಹೆಸರು ಕೇಳಿದರೆ ಸಾಕು ಹಲವರಲ್ಲಿ ಚೈತನ್ಯ ಮೂಡುವುದು. ಸದಾ ಸತ್ಯಾಂಶಗಳ ಬಗ್ಗೆ ಮಾತನಾಡುವ ಅನಂತ್ ಕುಮಾರ್ ಹೆಗಡೆ ರವರಿಗೆ ಬದ್ಧ ವಿರೋಧಿ ಗಳೆಂದರೆ ಮಾಧ್ಯಮದವರು.  ಪ್ರತಿಯೊಂದು ಹೇಳಿಕೆಯನ್ನು ವಿವಾದಾತ್ಮಕ ಹೇಳಿಕೆ ಎಂದು ಮಾಧ್ಯಮದವರು ಬೊಬ್ಬೆ ಹೊಡೆಯುತ್ತಾರೆ.

ದೇಶದ ಪರ ಹಿಂದುತ್ವದ ಪರ ಯಾವುದೇ ಹೇಳಿಕೆಗಳನ್ನು ಆಗಲಿ ಅನಂತ್ ಕುಮಾರ್ ಅವರು ನೀಡಿದ ತಕ್ಷಣ  ಅದನ್ನು ಹೇಳಿಕೆ ಯನ್ನಾಗಿ ತೋರಿಸದೆ ಹೇಳಿಕೆಯ ಬದಲು ವಿವಾದಾತ್ಮಕ ಹೇಳಿಕೆ ಎಂಬಂತೆ ಹಲವರು ಬಿಂಬಿಸುತ್ತಾರೆ.

ಕೆಲವರಂತೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟಿವಿಗಳಲ್ಲಿ ಅದೇ ವಿಷಯವನ್ನು ಮುಂದಿಟ್ಟುಕೊಂಡು ಗಂಟೆಗಟ್ಟಲೆ ಚರ್ಚೆ ನಡೆಸಿ ಜನರಿಗೆ ಅದು ನಿಜವಾಗಲೂ ವಿವಾದಾತ್ಮಕ ಹೇಳಿಕೆ ಎಂಬಂತೆ ಅರ್ಥೈಸಲು ಮಾಡುವ ಕಸರತ್ತುಗಳೂ ಅಷ್ಟಿಷ್ಟಲ್ಲ. ಆದರೆ ಈಗ ಮೀಡಿಯಾದವರು ಈಗ ಎಲ್ಲಿದ್ದಾರೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.ಸಂಪೂರ್ಣ ವಿಷಯವನ್ನು ತಿಳಿಯಲು ಕೆಳಗಡೆ ಓದಿ.

ಅಷ್ಟಕ್ಕೂ ವಿಷಯದ ಮೂಲವೇನು?

ಭಾರತದಲ್ಲಿ ಹಲವಾರು ಮಹಾನುಭಾವರು ಜನಿಸಿದ್ದಾರೆ. ಇಡಿ ವಿಶ್ವವೇ ಅವರಿಗಾಗಿ ತಲೆಬಾಗಿದೆ, ಆ ಮಹಾನ್  ವ್ಯಕ್ತಿಗಳ ಸಾಲಿನಲ್ಲಿ  ನಮಗೆ ವಿವೇಕಾನಂದ ಮತ್ತು ಬಸವಣ್ಣನವರ ಹೆಸರುಗಳು ಸಹ ಕೇಳಿ ಬರುತ್ತವೆ. ಹಲವಾರು ಸಮುದಾಯದವರು ಬಸವಣ್ಣನವರನ್ನು ದೇವರಂತೆ ಪೂಜಿಸುತ್ತಾರೆ. ವಿವೇಕಾನಂದ ರವರಿಗೆ ಇಡಿ ವಿಶ್ವವೇ ತಲೆಬಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಮಹಾನ್ ವ್ಯಕ್ತಿಗಳು ಆಜಾತ ಶತ್ರು ಗಳು,  ಇಲ್ಲಿಯವರೆಗೂ ಯಾರೂ ಇವರನ್ನು ನಿಂದಿಸುವುದನ್ನು ನಾನು ನೋಡಿಲ್ಲ.

ಆದರೆ ಪ್ರೊಫೆಸರ್ ಕೆ ಭಗವಾನ್ ರವರು ಮಾಧ್ಯಮಗಳ ಮುಂದೆ ವಿವೇಕಾನಂದ ಮತ್ತು ಬಸವಣ್ಣನವರನ್ನು ಕೊಲ್ಲಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ?  ಅಜಾತ ಶತ್ರು ಗಳನ್ನು ಯಾರು ಕೊಲ್ಲುತ್ತಾರೆ?

ಮಾಧ್ಯಮದವರಿಗೆ ನಮ್ಮ ಪ್ರಶ್ನೆಗಳು? 

ಇದು ವಿವಾದಾತ್ಮಕ ಹೇಳಿಕೆ ಅಲ್ಲವೇ? ಇದರ ವಿರುದ್ಧ ನೀವು ಪ್ರಕರಣ ದಾಖಲಿಸುವುದಿಲ್ಲವೇ? ಒಂದು ವೇಳೆ ಇದೇ ಮಾತನ್ನು ಅನಂತ್ ಕುಮಾರ್ ಹೆಗಡೆ ಅಥವಾ ಬಿಜೆಪಿ ಶಾಸಕರಾದ ಯತ್ನಾಳ್ ಅವರು ಹೇಳಿದ್ದರೆ ಅದು ನಿಮಗೆ ಹೇಳಿಕೆಯಾಗಿ ಕಾಣುತ್ತಿತ್ತೇ ಅಥವಾ ವಿವಾದಾತ್ಮಕ ಹೇಳಿಕೆ ಯಾಗಿ ಕಾಣುತ್ತಿತ್ತೇ? ಇದರ ವಿರುದ್ಧ ನೀವು ಯಾವುದೇ ಗಂಟೆಗಟ್ಟಲೆ ಚರ್ಚೆಗಳನ್ನು ನಡೆಸುವುದಿಲ್ಲವೇ? ಚರ್ಚೆ ನಡೆಸದೆ ಇರಲು ಟಿ ಆರ್ ಪಿ ಕಾರಣವೇ?