ನೇರವಾಗಿ ಅಖಾಡಕ್ಕಿಳಿದ ಮೋದಿ: ಮೊದಲ ಬಾರಿಗೆ ಅಧಿಕೃತ ಪತ್ರಿಕಾಗೋಷ್ಠಿ ಕರೆದು ಮಾಡಿದ್ದೇನು?

ನೇರವಾಗಿ ಅಖಾಡಕ್ಕಿಳಿದ ಮೋದಿ: ಮೊದಲ ಬಾರಿಗೆ ಅಧಿಕೃತ ಪತ್ರಿಕಾಗೋಷ್ಠಿ ಕರೆದು ಮಾಡಿದ್ದೇನು?

0

ನರೇಂದ್ರ ಮೋದಿ ರವರು ಅಧಿಕಾರಕ್ಕೆ ಏರಿದ ಮೇಲೆ ಇದುವರೆಗೂ ಯಾವುದೇ ಅಧಿಕೃತ ಪತ್ರಿಕಾಗೋಷ್ಠಿಯನ್ನು ಕರೆದಿಲ್ಲ. ಅವರು ಯಾಕೆ ಪತ್ರಿಕಾಗೋಷ್ಠಿಯನ್ನು ಕರೆಯುವುದಿಲ್ಲ ಎಂಬ ಕಾರಣವನ್ನು ನಾವು ಹುಡುಕಿ ಒಂದು ಲೇಖನವನ್ನು ಸಹ ಬರೆದಿದ್ದವು. ಆದರೆ ನಾಲ್ಕು ವರ್ಷಗಳ ಅಧಿಕಾರದ ಅವಧಿಯಲ್ಲಿ ಇದೇ ಮೊತ್ತಮೊದಲ ಬಾರಿಗೆ ಮೋದಿ ಅವರು ಅಧಿಕೃತ ಪತ್ರಿಕಾಗೋಷ್ಠಿಯೊಂದನ್ನು ಕರೆದಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು?

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ತಿಂಗಳುಗಳು ಬಾಕಿ ಇದೆ ಪ್ರತಿಯೊಂದು ಪಕ್ಷವೂ ತಮ್ಮದೇ ಆದ ಕಸರತ್ತಿನಲ್ಲಿ ತೊಡಗಿವೆ. ಇತ್ತ ಮೋದಿಜಿ ರವರಿಗೆ ಇರುವುದೊಂದೇ ತೊಂದರೆ ಅದುವೇ ತಮ್ಮ ಯೋಜನೆಗಳನ್ನು  ಜನರಿಗೆ ತಲುಪಿಸುವುದು.  ಒಂದು ಕಡೆ ವಿರೋಧ ಪಕ್ಷಗಳೆಲ್ಲವೂ ಮೋದಿ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದರೆ  ಇನ್ನೊಂದು ಕಡೆ ಬಿಜೆಪಿ ಸರ್ಕಾರವು ತನ್ನ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಮಾಡುತ್ತಿದೆ.

ಇಷ್ಟು ದಿವಸ ಬಿಜೆಪಿ ಪಕ್ಷದ ಚಾಣಕ್ಯ ಮತ್ತು ಪ್ರತಿಯೊಂದು ರಾಜ್ಯದ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿದಿದ್ದರು ಆದರೆ ಈಗ ಸ್ವತಹ ಮೋದಿ ರವರ ಕಣಕ್ಕೆ ಇಳಿದಿದ್ದಾರೆ. ಅಷ್ಟಕ್ಕೂ ಅವರು ಪತ್ರಿಕಾಗೋಷ್ಠಿಯನ್ನು ಕರೆದ ಕಾರಣವೇನು ಮತ್ತುಪತ್ರಿಕಾಗೋಷ್ಠಿಯಲ್ಲಿ ಏನು ಮಾತನಾಡಿದರು ಎಂಬುದನ್ನು ತಿಳಿಯಲು ಕೆಳಗಡೆ ಓದಿ.

ಮುಟ್ಟು ಮೊದಲಬಾರಿಗೆ ಪ್ರಾದೇಶಿಕ ಮಾಧ್ಯಮಗಳಾದ ಮರಾಠಿ ಗುಜರಾತ್ ಮತ್ತು ತಮಿಳು ಪತ್ರಿಕಾಗೋಷ್ಠಿ ಕರೆದ ನರೇಂದ್ರ ಮೋದಿ ರವರು ಕೇವಲ ತಮ್ಮ ಯೋಜನೆಗಳ ಬಗ್ಗೆ ಮಾತನಾಡಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಉತ್ತರವನ್ನು ನೀಡದೆ ಎಂದಿನಂತೆ ತಮ್ಮ ಚಾಣಕ್ಯ ತೆಯ ಮಾತುಗಳಿಂದ ಕೇವಲ ತಮ್ಮ ಯೋಜನೆಗಳ ಬಗ್ಗೆ ಮಾತನಾಡಿ ಜನರಿಗೆ ತಲುಪಿಸಲು ಕೋರಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ರವರು ಹೆಚ್ಚು ಪತ್ರಿಕಾಗೋಷ್ಠಿಗಳನ್ನು  ಕರೆಯಲಿದ್ದು  ಪ್ರಾದೇಶಿಕ ಮುದ್ರಣ ಮಾಧ್ಯಮಗಳಿಗೆ ಹೆಚ್ಚು ಆದ್ಯತೆಯನ್ನು ನೀಡಲಿದ್ದಾರೆ ಎಂಬುದು ತಿಳಿದು ಬಂದಿದೆ.