ಮೂರು ತಂಡಗಳಾಗಿ ವಿಭಜನೆಗೊಂಡ ಬಿಜೆಪಿ: ತಂಡಗಳ ನೇತೃತ್ವ ಯಾರದ್ದು ಗೊತ್ತಾ?

ಮೂರು ತಂಡಗಳಾಗಿ ವಿಭಜನೆಗೊಂಡ ಬಿಜೆಪಿ: ತಂಡಗಳ ನೇತೃತ್ವ ಯಾರದ್ದು ಗೊತ್ತಾ?

0

ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆಯು ನಡೆಯಲಿದೆ. ಈ ಹಿಂದಿನ ಎಲ್ಲಾ ಚುನಾವಣೆಗಳ ಗಿಂತ  ಬಹಳ ಪ್ರಾಮುಖ್ಯತೆ ಕಳೆದುಕೊಂಡಿರುವ ಈ ಬಾರಿಯ ಲೋಕಸಭಾ ಚುನಾವಣೆಗೆ  ಪ್ರತಿಯೊಂದು ಪಕ್ಷಗಳು ಭರದಸಿದ್ಧತೆಯನ್ನು ನಡೆಸಿವೆ.

ಅದೇ ರೀತಿ ಬಿಜೆಪಿ ಪಕ್ಷವು ಸಹ ಮೂರು ತಂಡಗಳಾಗಿ ವಿಭಜನೆಗೊಂಡಿದ್ದು ಇನ್ನು ಎರಡು ದಿನಗಳಲ್ಲಿ ರಾಜ್ಯ ಪ್ರವಾಸ ಆರಂಭಿಸಲಿವೆ. ಆ ತಂಡಗಳ ನೇತೃತ್ವ ಮತ್ತು ಯಾವ ಜಿಲ್ಲೆಯಲ್ಲಿ  ಯಾವ ತಂಡ ಪ್ರವಾಸ ನಡೆಸಲಿದೆ ಎಂಬುದರ ವಿವರಕ್ಕಾಗಿ ಕೆಳಗಡೆ ಓದಿ.ರಾಜ್ಯಧ್ಯಕ್ಷ ರಾದ ಶ್ರೀಯುತ ಯಡಿಯೂರಪ್ಪನವರು ಮೊದಲ ತಂಡದ ನೇತೃತ್ವವನ್ನು ವಹಿಸಿದ್ದು ಇನ್ನೆರಡು ತಂಡಗಳಿಗೆ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ರವರು ನಾಯಕರಾಗಿದ್ದಾರೆ.

ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಎನ್ ರವಿಕುಮಾರ್ ಅವರು ಇಂದು ಬಿಜೆಪಿ ಪಕ್ಷದ ಕಚೇರಿಯಲ್ಲಿ  ಯಡಿಯೂರಪ್ಪನವರ ನೇತೃತ್ವದಲ್ಲಿ ತಂಡಗಳ ಜವಾಬ್ದಾರಿಯನ್ನು ವಿವರಿಸಿದರು. ಈ ತಂಡಗಳು ಇನ್ನೆರಡು ದಿನಗಳಲ್ಲಿ ರಾಜ್ಯ ಪ್ರವಾಸವನ್ನು ಆರಂಭಿಸಲಿದ್ದು ಬಿಎಸ್ ವೈ ನೇತೃತ್ವದ ತಂಡ ಬೀದರ್ ನಿಂದ ಕಲಬುರಗಿ, ಬೆಂಗಳೂರು, ಬೆಂಗಳೂರು ನಗರ, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಯಾದಗಿರಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆಗಳ ಭಾಗಗಳಲ್ಲಿ ಪ್ರವಾಸ ಮಾಡಲಿದ್ದಾರೆ.

ಇನ್ನು ಜಗದೀಶ್ ಶೆಟ್ಟರ್ ತಂಡ ಮಧ್ಯ ಕರ್ನಾಟಕ ಭಾಗಗಳಲ್ಲಿ ಪ್ರವಾಸ ಮಾಡಲಿದ್ದು, ಈಶ್ವರಪ್ಪ ನೇತೃತ್ವದ ತಂಡ ಮೈಸೂರು, ಮಂಡ್ಯ, ಕರಾವಳಿ ಭಾಗಗಳಲ್ಲಿ ಪ್ರವಾಸ ನಡೆಸಲಿದ್ದಾರೆ.