ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು: ಮೋದಿ ಅಲೆಯಲ್ಲ ಸುನಾಮಿ ಎಂಬುದು ಮತ್ತೊಮ್ಮೆ ಸಾಬೀತು

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು: ಮೋದಿ ಅಲೆಯಲ್ಲ ಸುನಾಮಿ ಎಂಬುದು ಮತ್ತೊಮ್ಮೆ ಸಾಬೀತು

0

ಇಡೀ ಭಾರತದಲ್ಲಿ ಮೋದಿ ಅಲೆ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ, ಆದರೆ ಕೆಲವು ಚುನಾವಣಾ ಪಲಿತಾಂಶ ಗಳನ್ನು ನೋಡಿದರೆ ಮೋದಿ ಅಲೆಯೋ ಕೇವಲ ಅಲೆಯಾಗಿ ಉಳಿದಿಲ್ಲ ಬದಲಾಗಿ ಸುನಾಮಿಯಾಗಿ ಪರಿವರ್ತನೆಗೊಂಡಿದೆ ಎಂಬಂತೆ ಕಂಡು ಬರುತ್ತಿದೆ.

ಇದೀಗ ಮತ್ತೊಂದು ಚುನಾವಣೆಯ ಪರಿ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿಯು ಭರ್ಜರಿಯಾಗಿ ಗೆಲುವು ಸಾಧಿಸಿದೆ.  ಹೌದು ಇಂದು ಪ್ರಕಟಗೊಂಡ ಮಹಾರಾಷ್ಟ್ರ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಎರಡು ನಗರಪಾಲಿಕೆ ಗಳಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ ಲೋಕಸಭಾ ಚುನಾವಣೆಗೆ ಚುನಾವಣೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಒಂದು ವೇಳೆ ಇದೇ ರೀತಿ ಪಲಿತಾಂಶ ಬಂದರೆ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಗೆ ಸುನಾಮಿ ಬಂದಾಗ ಕೊಚ್ಚಿಕೊಂಡು ಹೋಗುವಂತೆ ವಿರೋಧಪಕ್ಷಗಳು ಕೊಚ್ಚಿಕೊಂಡು ಹೋಗುತ್ತವೆ.

ಅಷ್ಟಕ್ಕೂ ಮಹಾರಾಷ್ಟ್ರ ಚುನಾವಣೆಯ ಫಲಿತಾಂಶ ವೇನು?

ಮಹಾರಾಷ್ಟ್ರದ ಜಲಗಾಂವ್ ಮತ್ತು ಸಾಂಗ್ಲಿ ನಗರಪಾಲಿಕೆ ಚುನಾವಣೆಯು ಇತ್ತೀಚೆಗೆ ನಡೆದಿತ್ತು.  ಇದರ ಫಲಿತಾಂಶ ಇಂದು ಹೊರ ಬಿದ್ದಿದ್ದು  ಬಿಜೆಪಿ ಪಕ್ಷವು ಎರಡು ನಗರಪಾಲಿಕೆ ಗಳಲ್ಲಿ ಬಹುಮತವನ್ನು ಸ್ಪಷ್ಟಪಡಿಸಿಕೊಂಡಿದೆ. ಕಳೆದ ಬಾರಿ ಜಲಗಾಂವ್ ನಲ್ಲಿ ನಗರಪಾಲಿಕೆ ಅಧಿಕಾರವನ್ನು ಉಳಿಸಿಕೊಂಡರೆ  ಇನ್ನೊಂದು ನಗರಪಾಲಿಕೆ ಯಾದ ಸಾಂಗ್ಲಿ-ಮೀರಜ್-ಕುಪ್ವಾಡ ನಗರಪಾಲಿಕೆಯನ್ನ ದೇಶದಲ್ಲೆಡೆ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕಾಂಗ್ರೆಸ್ ಪಕ್ಷದ ತೆಕ್ಕೆಯಿಂದ ಕಸಿದುಕೊಂಡಿದೆ.

ಈ 2 ನಗರ ಪಾಲಿಕೆ ಚುನಾವಣೆಗಳಲ್ಲಿ  ಬಿಜೆಪಿ ಪಕ್ಷವು ಕಳೆದ ಬಾರಿಗಿಂತ ಈ ಬಾರಿ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಸಫಲವಾಗಿದೆ. ಸಾಂಗ್ಲಿ-ಮೀರಜ್-ಕುಪ್ವಾಡ ನಗರಪಾಲಿಕೆಯಲ್ಲಿ ಕಳೆದ ಬಾರಿ ಶೂನ್ಯ ಸಂಪಾದನೆ ಮಾಡಿದ ಬಿಜೆಪಿ ಪಕ್ಷವು ಈ ಬಾರಿ ಸ್ಪಷ್ಟ ಬಹುಮತವನ್ನು ಪಡೆದಿದ್ದು ಕಳೆದ ಬಾರಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ.(ಕಳೆದ ಬಾರಿ 0 ಈ ಬಾರಿ 41) 

ಇನ್ನು, ಜಲಗಾಂವ್​ನಲ್ಲಿ ಕಳೆದ ಬಾರಿ ಬಿಜೆಪಿ ಗಳಿಸಿದ್ದು ಕೇವಲ 15 ಸೀಟು ಮಾತ್ರ. ಪಕ್ಷೇತರರು ಹಾಗೂ ಸಣ್ಣಪುಟ್ಟ ಪಕ್ಷಗಳ ಬೆಂಬಲದೊಂದಿಗೆ ಬಿಜೆಪಿಯು ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಆದರೆ ಈ ಬಾರಿ ಯಾವ ಪಕ್ಷದ ನೆರವೇ ಇಲ್ಲದೇ ಬಿಜೆಪಿಯೇ ಸ್ವಂತವಾಗಿ ಬಹುಮತ ಸಾಧಿಸಿದೆ.(ಕಳೆದ ಬಾರಿ 15 ಈ ಬಾರಿ 57) 

ಈ ಚುನಾವಣಾ ಫಲಿತಾಂಶವನ್ನು ನೋಡಿದರೆ ಮಹಾರಾಷ್ಟ್ರದಲ್ಲಿ ಮೋದಿ ಅಲೆಯು ಸುನಾಮಿಯಾಗಿ ಪರಿವರ್ತನೆ ಗೊಂಡಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಒಂದು ವೇಳೆ ನಿಮಗೂ ಹಾಗೆ ಅನಿಸಿದರೆ ಶೇರ್ ಮಾಡಿ ಬೆಂಬಲಿಸಿ