ಇದೇ ಮೊದಲ ಬಾರಿಗೆ ವಿಲನ್ ಆಗಿ ಕಾಣಿಸಿಕೊಳ್ಳಲಿರುವ ರೋಮ್ಯಾಂಟಿಕ್ ಹೀರೋ

ಇದೇ ಮೊದಲ ಬಾರಿಗೆ ವಿಲನ್ ಆಗಿ ಕಾಣಿಸಿಕೊಳ್ಳಲಿರುವ ರೋಮ್ಯಾಂಟಿಕ್ ಹೀರೋ

0

ಡೈನಮಿಕ್ ಸ್ಟಾರ್ ದೇವರಾಜ್ ಪುತ್ರರಾದ ಪ್ರಜ್ವಲ್ ದೇವರಾಜ್ ರವರ ಬಹುನಿರೀಕ್ಷಿತ ಚಿತ್ರ ವಾದ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರವು ಭಾರಿ ಸದ್ದು ಮಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಿದ್ದ ಪ್ರಜ್ವಲ್ ದೇವರಾಜ್ ರವರು ಪ್ರಜ್ವಲ್ ದೇವರಾಜ್ ರವರು ಯಾವುದೇ ಮಾಹಿತಿಯನ್ನು ಹೊರಬಿಟ್ಟಿರಲಿಲ್ಲ.

ಅದಕ್ಕೆ ಕಾರಣವೇನೆಂದರೆ ಕನ್ನಡದ ರೋಮ್ಯಾಂಟಿಕ್ ಹೀರೋಗಳಲ್ಲಿ ಇಂದಿಗೂ ನವ ಯುವಕನಂತೆ  ಕಾಣುವ ನಟರೊಬ್ಬರು ವಿಲನ್ ರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಯಾರು ಗೊತ್ತಾ?

ಇಲ್ಲಿಯವರೆಗೂ ರೋಮ್ಯಾಂಟಿಕ್ ಹೀರೋ ಆಗಿ ಮಿಂಚಿದ್ದ ಕರ್ನಾಟಕದ ಅಚ್ಚುಮೆಚ್ಚಿನ ನಟರಾದ ರಮೇಶ್ ಅರವಿಂದ್ ರವರು ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಷಯ ತಿಳಿದ ಮೇಲಂತೂ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕಾವು ಮತ್ತಷ್ಟು ಹೇರಿದೆ.