ಬಾಂಗ್ಲಾ ದೇಶೀ ಲೇಖಕಿ ಮಮತಾ ಬ್ಯಾನರ್ಜಿ ಚಳಿ ಬಿಡಿಸಿದ್ದು ಹೇಗೆ ಗೊತ್ತಾ?

ಬಾಂಗ್ಲಾ ದೇಶೀ ಲೇಖಕಿ ಮಮತಾ ಬ್ಯಾನರ್ಜಿ ಚಳಿ ಬಿಡಿಸಿದ್ದು ಹೇಗೆ ಗೊತ್ತಾ?

0

ಮಮತಾ ಬ್ಯಾನರ್ಜಿ ಬಂಗಾಳದ ಮುಖ್ಯಮಂತ್ರಿ ರಾಷ್ಟ್ರೀಯ ನಾಗರಿಕ ನೋಂದಣಿ ಕುರಿತು ಬಿಜೆಪಿಯ ಕೈವಾಡ ಇದೆ ಎಂದು ಆರೋಪಿಸಿದರು. ಜನರನ್ನು ಒಡೆದು ಆಳುವ ರಾಜಕಾರಣ ಮೋದಿ‌ ಸರಕಾರ ಮಾಡುತ್ತಿದೆ. ತಮ್ಮದೇ ದೇಶದಲ್ಲಿ ಜನರನ್ನು ನಿರಾಶ್ರಿತರನ್ನಾಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಮಯ ದ್ವಿಮುಖ ನೀತಿಗೆ ತಸ್ಲೀಮಾ ನಸ್ರೀನ್ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ಈ ನೀತಿಯಿಂದ ದೇಶದಲ್ಲಿ ರಕ್ತಪಾತ ಉಂಟಾಗುತ್ತದೆ, ಆಂತರಿಕ ಯುದ್ದ ಶುರುವಾಗುತ್ತದೆ ಎಂದು ಕೇಂದ್ರಕ್ಕೆ ಮಮತಾ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ಆಶ್ರಯ ಪಡೆದಿರುವ ತಸ್ಲೀಮಾ ನಸ್ರೀನ್ ಮಮತಾ ಬ್ಯಾನರ್ಜಿಯ ಈ ತರ್ಕವನ್ನು ಪ್ರಶ್ನಿಸಿದ್ದಾರೆ. ತಸ್ಲೀಮಾ ನಸ್ರೀನ್ ೨೦೦೭ರಲ್ಲಿ ಬರೆದ ಲಜ್ಜಾ ಪುಸ್ತಕ ಮುಸಲ್ಮಾನ ಸಮುದಾಯದಿಂದ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿತ್ತು.

ಸಾಮಾಜಿಕ ಜಾಲತಾಣ ಟ್ವಿಟರ್ ಅಲ್ಲಿ “ಅಸ್ಸಾಂ ಅಲ್ಲಿ ೪೦ಲಕ್ಷ ಬಂಗಾಳಿ ಮಾತಾಡುವ ಬಾಂಗ್ಲಾ ಮುಸಲ್ಮಾನರ ಬಗ್ಗೆ ಕರುಣೆ ತೋರಿಸುವ ಮಮತಾ ಅವರಿಗೆ ನಾಳೆ ಆಶ್ರಯ ನೀಡಬಹುದು, ಅದೇ ಕರುಣೆ ಬಾಂಗ್ಲಾದಿಂದ ಬಂದ ನನ್ನನ್ನು ಪಶ್ಚಿಮ ಬಂಗಾಳದಿಂದ ವಿರೋಧಿ ಪಕ್ಷ ಹೊರದಬ್ಬುವಾಗ ಏಕೆ ತೋರಿಸಲಿಲ್ಲ” ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದು ಟ್ವೀಟ್ ಅಲ್ಲಿ “ಮಮತಾ ಗೆ ಬಂಗಾಳಿ ಮಾತಾಡುವ ಅಲ್ಲಿನ ನಾಗರೀಕರಿಗೆ ಹಾಗೂ ಮನೆ ಇಲ್ಲದವರ ಮೇಲೆ ಯಾವ ಕರುಣೆಯೂ ಇಲ್ಲ, ಅದು ಇದ್ದಿದ್ದರೆ ನನ್ನನ್ನು ಬಂಗಾಳದಲ್ಲಿ ಇರಲು ಬಿಡುತ್ತಿದ್ದರು” ಎಂದು ಟಾಂಗ್ ನೀಡಿದ್ದಾರೆ.

ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಕೂಡಾ ಇವರಿಗೆ ಇದೆ. ೨೦೦೪ರಲ್ಲಿ ಭಾರತದ ಆಶ್ರಯ‌ ಪಡೆದು ಕೋಲ್ಕತಾದಲ್ಲಿ ಇರಲಾರಂಭಿಸಿದರು. ೨೦೦೭ರಲ್ಲಿ ಪುಸ್ತಕದ ವಿಷಯದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಿಂದ ಅವರನ್ನು ಪಶ್ಚಿಮ ಬಂಗಾಳದಿಂದ ಗಡಿ ಪಾರು ಮಾಡಲಾಯಿತು.

ಹಿಂದೂ ಪಕ್ಷ ಬಿಜೆಪು ದೇಶವನ್ನು ಓಡೆಯುತ್ತಿದೆ, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಮತಾ ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ತಸ್ಲೀಮಾ ನಸ್ರೀನ್ ಸಹಯಾ ಕೇಳಿದಾಗ ಮಮತಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕಳೆದ ವರ್ಷ ತಸ್ಲೀಮಾ ನಸ್ರೀನ್ ಪುಸ್ತಕ ಮುದ್ರಣ ಹಾಗೂ ತಾನು ಬರೆದ ಲೇಖನೆಯ ದಾರವಾಹಿ ಕೂಡಾ ಪ್ರಸಾರವಾಗಲು ಬಿಡಲಿಲ್ಲ, ಇಂದು ಬಾಂಗ್ಲಾದೇಶದವರ ಮೇಲೆ ಕರುಣೆ ತೋರಿಸುತ್ತಿದ್ದಾರೆ ಎಂದು ಮಮತಾ ದ್ವಿಮುಖ ನೀತಿ ವಿರುದ್ದ ಕಿಡಿ ಕಾರಿದ್ದಾರೆ.