ಲೋಕಸಭಾ ಚುನಾವಣೆ: ರಣ ಕಹಳೆ ಮೊಳಗಿಸಿದ ಬಿ ಸ್ ವೈ

ಲೋಕಸಭಾ ಚುನಾವಣೆ: ರಣ ಕಹಳೆ ಮೊಳಗಿಸಿದ ಬಿ ಸ್ ವೈ

0

ಲೋಕಸಭಾ ಚುನಾವಣೆಗೆ ಇನ್ನು 9 ತಿಂಗಳು ಇರುವಂತೆಯೇ ಎಲ್ಲ ಪಕ್ಷಗಳು ತಮ್ಮ ತಮ್ಮ ಪ್ಲಾನ್ ಗಳನ್ನು ಮಾಡುತ್ತಿದ್ದಾರೆ.ಇತ್ತ ಪ್ರತಿ ಪಕ್ಷಗಳು ತೃತೀಯ ರಂಗ, ಪ್ರಧಾನಿ ಅಭ್ಯರ್ಥಿ ಎಂದು ತಯಾರಾಗುತ್ತಿದ್ದರೆ ಬಿ ಜೆ ಪಿ ಪಕ್ಷ ಹೊರ ರಾಜ್ಯಗಳಲ್ಲಿ ಭರ್ಜರಿ ತಯಾರಿ ನಡೆಸಿದ್ದರು ಕರ್ನಾಟಕ ರಾಜ್ಯದಲ್ಲಿ ಯಾವುದೇ ಸಿದ್ಧತೆಗಳನ್ನು ನಡೆಸುತ್ತಿರಲಿಲ್ಲ. ಆದರೆ ಈಗ ಬಿ ಜೆ ಪಿ ಪಕ್ಷದ ಅಭಿಮಾನಿಗಳಿಗೊಂದು ಸಂತಸದ ವಿಷಯ ನೀಡಿದ್ದಾರೆ ಬಿ ಸ್ ವೈ.

ವಿಧಾನ ಸಭಾಚುನಾವಣೆಯಲ್ಲಿ ಮಿಷನ್ 150 ಎಂಬ ಗುರಿಯಾಗಿಟ್ಟುಕೊಂಡು ಬರೋಬ್ಬರಿ 104 ಸ್ಥಾನಗಳನ್ನುನಗಳನ್ನು ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಬಿ ಜೆ ಪಿ ಪಕ್ಷ ಮುಂದಿನ ಲೋಕಸಭಾ ಚುನಾವಣೆಯ ಜವಾಬ್ದಾರಿಯನ್ನು ರೈತ ನಾಯಕರಾದ ಬಿ ಸ್ ವೈ ಗೆ ನೀಡಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ.ತಮ್ಮ ಹೆಗಲ ಮೇಲಿರುವ ಜವಾಬ್ದಾರಿಯಣ್ಣಿ ನಿಭಾಯಿಸುವ ಉತ್ಸಹದಿಂದ ಬಿ ಸ್ ವೈ ರವರು ಲೋಖಾಸಭೆ ಚುನಾವಣೆಗೆ ರಣ ಕಹಳೆಯನ್ನು ಮೊಳಗಿಸಿದ್ದಾರೆ.

ಕಾರ್ಯಕರ್ತರಿಗೆ ಕರೆನೀಡಿರುವ ಬಿ ಸ್ ವೈ ರವರು  ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಮೋದಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲು ರಾಜ್ಯದ ಪ್ರತಿ ಮನೆ ಮನೆಗೆ ಪ್ರಚಾರ ಮಾಡುವಂತೆ ಬಿ ಸ್ ವೈ ರವರು ಸೂಚನೆ ನೀಡಿದ್ದು ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ಗುರಿಯನ್ನು ಹೊಂದಿರುವ ಬಿ.ಎಸ್ ಯಡಿಯೂರಪ್ಪ ಮಿಷನ್ 20+ ಯೋಜನೆ ರೂಪಿಸಿದ್ದಾರೆ. ಹಾಗಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಗಮನ ಹರಿಸಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣಾ ಸಮರದ ಸಂಪೂರ್ಣ ಜವಾಬ್ದಾರಿ ಬಿ.ಎಸ್ ಯಡಿಯೂರಪ್ಪ ಹೆಗಲಿಗೆ ಅಮಿತ್ ಶಾ ಹೊರಿಸಿದ್ದು, ಶಾ ಸೂಚನೆಯಂತೆ ಚುನಾವಣೆ ತಯಾರಿ ಮಾಡಿಕೊಳ್ಳಲಾಗಿದೆ.