ಲೋಕಸಭಾ ಚುನಾವಣೆಗೆ ಆರ್ ಎಸ್ ಎಸ್ ನಿಂದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಲೋಕಸಭಾ ಚುನಾವಣೆಗೆ ಆರ್ ಎಸ್ ಎಸ್ ನಿಂದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

0

ಮುಂಬರುವ 2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷ ಈಗಾಗಲೇ ತನ್ನ ರೂಪರೇಷೆಗಳನ್ನು ಸಿದ್ಧಪಡಿಸಿದೆ. ಇತ್ತ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ತರಲು ಸಕಲ ಸಿದ್ಧತೆಗಳನ್ನು ಮಾಡಿಸಿಕೊಳ್ಳುತ್ತಿರುವ ಆರ್ ಎಸ್ ಎಸ್ ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ  ರಾಜ್ಯದ  ವಿವಿಧ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಮತ್ತು ಮುಂದಿನ ಲೋಕಸಭಾ ಚುನಾವಣೆಗೆ  ಅಭ್ಯರ್ಥಿಗಳನ್ನು ಶಿಫಾರಸು ಮಾಡುವ ಮೂಲಕ ಬಿಜೆಪಿ ನಾಯಕರಿಗೆ ಆರ್ ಎಸ್ ಎಸ್ ಸೂಚನೆ ನೀಡಿದೆ ಎನ್ನಲಾಗಿದೆ.

ಕಣದಲ್ಲಿ ಕೆಲವು ಘಟಾನುಘಟಿಗಳು ಇದ್ದರೆ, ಕೆಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಅಷ್ಟಕ್ಕೂ ಯಾರು ಯಾವ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದು ಎಂಬುದನ್ನು  ತಿಳಿಯಲು ಕೆಳಗಡೆ ಸಂಪೂರ್ಣ ಓದಿ, ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಿನಲ್ಲಿ ತಿಳಿಸಿ.

ಮೊದಲು ಲೋಕಸಭಾ ಉಪ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ತಿಳಿಯೋಣ !! 

ಸದ್ಯದಲ್ಲಿ ನಡೆಯುವ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು, ಮಾನ್ಯ ಶ್ರೀ ಯಡಿಯೂರಪ್ಪನವರು ಮತ್ತು ಬಿಜೆಪಿ ನಾಯಕರ ದಂಡು ಶುಕ್ರವಾರ ಆರ್ ಎಸ್ ಎಸ್ ನಾಯಕರ ಜೊತೆ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಶ್ರೀರಾಮುಲು ಶಾಸಕರಾದ ನಂತರ ರಾಜಿನಾಮೆ ನೀಡಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಶ್ರೀರಾಮುಲು ರವರ ಸಹೋದರಿ ಜೆ ಶಾಂತ ಹೆಸರನ್ನು ಬಿಜೆಪಿ ನಾಯಕರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ ಇದಕ್ಕೆ ಆರೆಸ್ಸೆಸ್ ನಾಯಕರು ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಎರಡನೇ ಸ್ಥಾನ ಮಂಡ್ಯ ಲೋಕಸಭಾ ವಿಧಾನಸಭಾ ಕ್ಷೇತ್ರ, ಈ ಕ್ಷೇತ್ರಕ್ಕೆ ಜನಪ್ರಿಯ ನಾಯಕರಾದ ವಿದ್ಯಾ ನಾಗೇಂದ್ರ ಅವರನ್ನು ಸ್ಪರ್ಧಿಸಲು ಆರೆಸ್ಸೆಸ್ ಒಪ್ಪಿಗೆ ನೀಡಿದೆ.

 

ಕಾವೇರಿದ ಮತ್ತು ಮಾಜಿ ಮುಖ್ಯಮಂತ್ರಿ ಶ್ರೀಯುತ ಯಡಿಯೂರಪ್ಪನವರ ಕ್ಷೇತ್ರವಾದ ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ಪುತ್ರರಾದ ವಿಜಯೇಂದ್ರ ರವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಆರೆಸ್ಸೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಿಜಯೇಂದ್ರ ಅವರು ಗೆಲ್ಲುವ ಫೇವರೇಟ್ ಎನಿಸಿದ್ದಾರೆ.

ಆರ್ ಎಸ್ ಎಸ್ ಸಂಘಟನೆ ಶಿಫಾರಸು ಮಾಡಿದ 2019 ರ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ.

ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಬದಲು ಡಿವಿಎಸ್ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆರ್ ಎಸ್ ಎಸ್ ಸೂಚನೆ ನೀಡಿದ್ದು, ಶೋಭಾ ಕರಂದ್ಲಾಜೆ ರವರಿಗೆ ವಿಧಾನಸಭಾ ಪರಿಷತ್ ಸದಸ್ಯ ಸ್ಥಾನವನ್ನು ನೀಡಲು ನಿರ್ಧರಿಸಲಾಗಿದೆ.

ಇನ್ನು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಕ್ಕೆ ದಾಸರಹಳ್ಳಿ ಮುನಿರಾಜು, ಚಿತ್ರದುರ್ಗ ಕ್ಷೇತ್ರಕ್ಕೆ ಜನಾರ್ಧನ ಸ್ವಾಮಿ, ತುಮಕೂರು ಕ್ಷೇತ್ರಕ್ಕೆ ಜಿ.ಎಸ್.ಬಸವರಾಜು, ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿರುವ ಡಿ.ಎಸ್.ವೀರಯ್ಯ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಚಾಮರಾಜನಗರಕ್ಕೆ ಶಿವಣ್ಣ ಬದಲು ನಂಜುಂಡ ಸ್ವಾಮಿ, ಸುನೀಲ್ ವಲ್ಯಾಪುರೆ ಹೆಸರನ್ನು ಗುಲ್ಬರ್ಗಾ ಕ್ಷೇತ್ರಕ್ಕೆ ಹಾಸನ ನವಿಲೆ ಪ್ರಕಾಶ್ ಅವರಿಗೆ ಅವಕಾಶ ನೀಡಬೇಕು ಅಂತ ಆರ್.ಎಸ್.ಎಸ್ ಸೂಚನೆ ನೀಡಲಾಗಿದೆ ಎನ್ನಲಾಗಿದ್ದು. ಉಳಿದಂತೆ ಹಾಲಿ ಬಿಜೆಪಿ ಲೋಕಸಭಾ ಸದ್ಯಸರಿಗೆ ಟಿಕೇಟ್ ನೀಡಬೇಕು, ಎಂಬುದನ್ನು ನಿರ್ಧರಿಸಲಾಗಿದೆ.