ಮೋದಿ ಅವರಿಗೆ ಬೆಂಬಲ ಘೋಷಿಸಿದ ಮುಸ್ಲಿಂ ಸಂಘಟನೆ

ಮೋದಿ ಅವರಿಗೆ ಬೆಂಬಲ ಘೋಷಿಸಿದ ಮುಸ್ಲಿಂ ಸಂಘಟನೆ

0

ಹೌದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ರವರಿಗೆ ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ಮುಸ್ಲಿಂ ಸಂಘಟನೆ.ಅಷ್ಟಕ್ಕೂ ಯಾವುದು ಆ ಮುಸ್ಲಿಂ ಸಂಘಟನೆ? ಯಾವ ಕಾರಣಗಳಿಗೆ ಬೆಂಬಲ ಸೂಚಿಸುತ್ತಿದೆ ಎಂಬ ಸಂಪೂರ್ಣ ವಿವರಕ್ಕಾಗಿ ಕೆಳಗಡೆ ಓದಿ.

ಇದು ವಿರೋಧಿಗಳಿಗೆ ಅರಗಿಸಿಕೊಳ್ಳಲಾಗದಂತಹ ವಿಷಯ, ಇಷ್ಟು ದಿನ ವಿರೋಧ ಪಕ್ಷದವರು ಮೋದಿಜಿ ಒಬ್ಬರು ಮುಸ್ಲಿಂ ವಿರೋಧಿ ಇವರು ಆರ್ ಎಸ್ ಎಸ್ ಸಂಘಟನೆಯ ಕೈಗೊಂಬೆ, ಆರ್ಎಸ್ಎಸ್ ಒಂದು ಉಗ್ರ ಸಂಘಟನೆ ಎಂದು ಕಟು ಶಬ್ದಗಳಿಂದ ಟೀಕಿಸುತ್ತಿರುವ ಅವರಿಗೆ ಈಗ ಮುಖದಮೇಲೆ ಹೊಡೆದಂತೆ ಆಗಿದೆ.

ಇಷ್ಟು ಸಾಲದು ಎಂಬಂತೆ ಈ ಮುಸ್ಲಿಂ ಸಂಘಟನೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ. ಅಷ್ಟಕ್ಕೂ ಆ ಯಾವುದು ಸಂಘಟನೆ ?ಅವರ ಮಾತುಗಳಲ್ಲೇ ಓದಿ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರನ್ನು ಬೆಂಬಲಿಸಲು ಭಾರತದಲ್ಲಿ ಶೇಕಡ 18ರ ಬೃಹತ್ ಮುಸ್ಲಿಂ ಸಂಘಟನೆ ಶಿಯಾ ಮುಸ್ಲಿಮರು ನಿರ್ಧರಿಸಿದ್ದಾರೆ.

ಇಷ್ಟೇ ಅಲ್ಲದೆ ಮೋದಿ ರವರ ಜೊತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ನಮ್ಮ ಸಹಕಾರವಿದೆ ಎಂದು ಶಿಯಾ ಸಮುದಾಯದ ಬುಕ್ಕಲ್ ನವಾಬ್ ಹೇಳಿದ್ದಾರೆ. ಮೋದಿ ರವರು ಮತ್ತೊಮ್ಮೆ ಪ್ರಧಾನಿ ಹುದ್ದೆಯನ್ನು ಅಲಂಕರಿಸುವುದನ್ನು ನಮ್ಮ ಸಮುದಾಯ ನೋಡಲು ಬಯಸುತ್ತದೆ, ಮೋದಿ ಮತ್ತು ಬಿಜೆಪಿ ರವರನ್ನು ಹೊರತುಪಡಿಸಿದರೆ ಬೇರೆ ಯಾವ ಪಕ್ಷವೂ ಶಿಯಾ ಮುಸ್ಲಿಮರ ಬಗ್ಗೆ ಯಾವುದೇ ಕಾಳಜಿಯನ್ನು ಇಲ್ಲಿವರೆಗೂ ತೋರಿಸಿಲ್ಲ.

ಆರ್ ಎಸ್ ಎಸ್ ಸಮುದಾಯವೊಂದು ಭಾರತದ ಪ್ರಮುಖ ಸಂಘಟನೆಯಾಗಿದ್ದು, ಅವರು ಯಾವುದೇ ಉಗ್ರ ಸಂಘಟನೆ ಯಾಗಿಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಇದೇ ಮೊದಲ ಬಾರಿಗೆ ಮುಸ್ಲಿಮರು ಆರೆಸ್ಸೆಸ್ ಸಂಘಟನೆಯ ಬಗ್ಗೆ ಬಹಿರಂಗವಾಗಿ ಬೆಂಬಲ ವಾದ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಹಿಂದಿನ ಯಾವುದೇ ಬಿಎಸ್ಪಿ ಹಾಗೂ ಎಸ್ಪಿ ಸರ್ಕಾರಗಳು ಶಿಯಾ ಮುಸ್ಲಿಮರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಎಂದು ಆರೋಪಿಸಿದ್ದಾರೆ.

ಹಿಂದೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಧರ್ಮವೆಂಬುದನ್ನು ನೋಡದೆ ಶಿಯಾ ಸಮುದಾಯದ ಮೆರವಣಿಗೆ ಮೇಲೆ ಇದ್ದ ನಿರ್ಬಂಧವನ್ನು ತೆಗೆದು ಹಾಕಿದ್ದರು, ಇಪ್ಪತ್ತು ವರ್ಷಗಳ ನಿರ್ಬಂಧವನ್ನು ತೆಗೆಯಲು ವಿರೋಧ ಪಕ್ಷಗಳು ವಿರೋಧಿಸಿದರು, ಆದರೆ ಇದ್ಯಾವುದಕ್ಕೂ ವಾಜಪೇಯಿ ರವರು ಜಗ್ಗಲಿಲ್ಲ ಎಂಬ ಮಾತನ್ನು ಹೇಳಿದರು.

ಭಾರತದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮುಸ್ಲಿಂ ಸಂಘಟನೆಯೊಂದು ಆರೆಸ್ಸೆಸ್ ಸಮುದಾಯವನ್ನು ಹೊಗಳುತ್ತಿರುವುದು ಕೇಳುತ್ತಿರುವುದು ಇದೇ ಮೊದಲು. ಯೋಗಿ ಸರ್ಕಾರವನ್ನು ಕೊಂಡಾಡಿದ ಶಿಯಾ ಮುಸ್ಲಿಮರು, ಈಗಲಾದರೂ ಕಣ್ಣುತೆರೆದುಕೊಂಡು ಮೋದಿ ರವರಿಗೆ ಬೆಂಬಲ ಘೋಷಿಸಿ ಭಾರತವನ್ನು ಮತ್ತೊಮ್ಮೆ ಮೋದಿರವರ ಕೈಗೆ ಇಡಲು ನಿರ್ಧರಿಸಿದೆ. ಇದು ವಿರೋಧಪಕ್ಷಗಳಿಗೆ ದೊಡ್ಡ ಹೊಡೆತ ವಾಗಿದ್ದು ಮುಸ್ಲಿಂ ಮತಗಳೆಲ್ಲವೂ ನಮಗೆ ಎಂದು ಬೀಗುತ್ತಿದ್ದ ಪಕ್ಷಗಳಿಗೆ ದಿಕ್ಕೇ ತೋಚದಂತಾಗಿದೆ. ಇಷ್ಟು ದಿವಸ ಮೋದಿ ರವರು ಮುಸ್ಲಿಂ ವಿರೋಧಿ ಎಂದು ಟೀಕೆ ಮಾಡುತ್ತಿದ್ದ ವಿರೋಧ ಪಕ್ಷಗಳಿಗೆ ಮುಸ್ಲಿಂ ಸಂಘಟನೆಯು ಈ ಹೇಳಿಕೆ ನೀಡಿದ್ದು ಮುಂದೇನು ಎಂಬ ಪರಿಸ್ಥಿತಿ ವಿರೋಧ ಪಕ್ಷಗಳಿಗೆ ಎದುರಾಗಿದೆ.