ಶುರುವಾಗಿದೆ 2019ಕ್ಕೆ ಬಿಜೆಪಿ ಪಕ್ಷದ ತಯಾರಿ – ಮೊದಲ ದಿನದ ವಿವರ

ಶುರುವಾಗಿದೆ 2019ಕ್ಕೆ ಬಿಜೆಪಿ ಪಕ್ಷದ ತಯಾರಿ – ಮೊದಲ ದಿನದ ವಿವರ

0

ಹೌದು 2019ರ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಉಳಿದಿದೆ ಆದರೆ ಚುನಾವಣಾ ಕಾವು ಮಾತ್ರ ಇದಾಗಲೇ ಏರಿದಂತೆ ಕಾಣುತ್ತದೆ. ಕೆಲವು ದಿನಗಳ ಹಿಂದಷ್ಟೇ ತೃತೀಯ ರಂಗ ಸೃಷ್ಟಿಯಾಗಿತ್ತು ಮತ್ತು ಬಿಜೆಪಿ ಯನ್ನು ಮಣಿಸಲು ಎಲ್ಲ ರೂಪುರೇಷೆಯನ್ನು ಸಿದ್ಧ ಪಡಿಸಲು ತಯಾರಾಗಿದ್ದವು.

ತೃತೀಯ ರಂಗದ ಮೊದಲೇ ಪ್ಲಾನ್ ಗೆ ಬ್ರೇಕ್ ಹಾಕಿದ್ದು ಹಾಗಿದೆ ಒಮ್ಮೆ ಓದಿ 

ಇದಾದ ಬೆನ್ನಲ್ಲೇ ಮೋದಿ ೨೦೧೯ರ ಚುನಾವಣಾಗೆ ಪ್ಲಾನ್ ತಯಾರು ಮಾಡಲು ಸಿದ್ದರಾಗಿ ಇದರ ಹೊಣೆಯನ್ನು ಅಮಿತ್ ಶಾ ಹೆಗಲಿಗೆ ಹೊರಿಸಿದ್ದಾರೆ. ನೀನು ದೇಶದಲ್ಲಿ ನನ್ನನ್ನು ಗೆಲ್ಲಿಸು ನಾನು ದೇಶವನ್ನು ವಿಶ್ವ ಮಟ್ಟದಲ್ಲಿ ಗೆಲ್ಲಿಸುತ್ತೇನೆ ಎಂದು ಮೋದಿ ರವರು ಚಾಣಕ್ಯನಿಗೆ ಚುನಾವಣಾ ಜವಾಬ್ದಾರಿಯನ್ನು ಹೊರಿಸಿದರು.

ಅಷ್ಟಕ್ಕೂ ಚಾಣಕ್ಯನ ತಂತ್ರಗಳು ಯಾವುವು?

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಹೀನಾಯವಾಗಿ ಮಣಿಸಿ ಅಧಿಕಾರಕ್ಕೆ ಬಂದ ಬಳಿಕ ಮೋದಿರವರ ವಿದೇಶಾಂಗ ನೀತಿ, ದೇಶದ ಅರ್ಥ ವ್ಯವಸ್ಥೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಹಲವು ಸಾಧನೆಗಳನ್ನು ಮಾಡಿದೆ ಅವನೆಲ್ಲ ಹೊರಗೆ ತಂದು ಜನ ಸಾಮಾನ್ಯರಿಗೆ ತಿಳಿಸುವುದು.

ದೇಶದಲ್ಲಿ ಕಪ್ಪುಹಣದ ಪ್ರಭಾವಳಿಯನ್ನು ತಗ್ಗಿಸಲು 2016ರ ನವೆಂಬರ್ ನಲ್ಲಿ ನೋಟು ನಿಷೇಧ ಘೋಷಣೆ ಮಾಡಲಾಗಿತ್ತು. ಇದರಿಂದ ಕೆಲವು ದಿನಗಳ ಕಾಲ ಜನ ಸಾಮಾನ್ಯರು ತೊಂದರೆ ಅನುಭವಿಸಿದರು ಆದರೆ ಕೆಲವು ದಿನಗಳ ನಂತರ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದಿದ್ದವು ಮತ್ತು ಇದರಿಂದಾಗಿ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಿದಂತಾಗಿದೆ. ಇದರ ಜತೆಗೆ ಹತ್ತ ವರ್ಷಗಳಿಂದ ಕಗ್ಗಂಟಾಗಿ ಉಳಿದಿದ್ದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ(ಜಿಎಸ್ ಟಿ)ಯನ್ನು ಜಾರಿ ಮಾಡಿದ್ದು ಕೇಂದ್ರ ಸರ್ಕಾರ ಸಾಧನೆಯಾಗಿದೆ.

ಕಳೆದ ಬಾರಿ ಬಿಜೆಪಿ ಪಕ್ಷದ ಆಪ್ ಕಿ ಬಾರ್ ಮೋದಿ ಸರ್ಕಾರ್ ಎಂಬ ಘೋಷಣೆ ವಾಕ್ಯ ಬಾರಿ ಸದ್ದು ಮಾಡಿತ್ತು ಈ ಬಾರಿ ಆ ವ್ಯಾಖ್ಯಾನವನ್ನು ಬದಲಾಗಿಸಲಾಗಿದೆ. ಇನ್ನು ಮುಂದೆ ಅಭಿಮಾನು ಗಳು ಆಪ್ ಕಿ ಮೋದಿ ಸರ್ಕಾರ ಎನ್ನುವ ಹಾಗಿಲ್ಲ ಬದಲಾಗಿ 2019ರಲ್ಲೂ ಮೋದಿ ಸರ್ಕಾರ್( 2019 ಮೇ ಭೀ ಮೋದಿ ಸರ್ಕಾರ್) ಎಂಬ ಘೋಷವಾಕ್ಯ ಬಳಸಲು ನಿರ್ಧರಿಸಲಾಗಿದೆ.