Loan: ಮಹಿಳೆಯರಿಗೆ ಇದೇ ಲೋನ್ ಕೊಡುವ ಯೋಜನೆ. ಹಲವಾರು ಆಯ್ಕೆಗಳು, ಅರ್ಜಿ ಹಾಕಿ ಲೋನ್ ಪಡೆಯಿರಿ

Below are types of Loan schemes available – Eligibility, Required Documents and Other details explained.

Loan: ನಮಸ್ಕಾರ ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಹಿಳೆಯರಿಗೆ ಪ್ರೋತ್ಸಾಹ ನೀಡುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಮಹಿಳೆಯರಿಗೆ ಲೋನ್ ಯೋಜನೆ ವಿಚಾರದಲ್ಲಿ ಕೂಡ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿರುವಂತಹ ಕೆಲಸದಲ್ಲಿ ಕೂಡ ಸರ್ಕಾರ ಯಶಸ್ವಿಯಾಗಿದೆ. ಸಮಾಜದಲ್ಲಿ ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿ ಮಾಡುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಈ ಮೂಲಕ ಮಾಡುತ್ತಿದೆ.

ಒಂದು ವೇಳೆ ನೀವು ಮಹಿಳೆಯರಾಗಿದ್ದಾರೆ ಹಾಗೂ ಈಗಾಗಲೇ ಒಂದು ಬಿಸಿನೆಸ್ ಅನ್ನು ಹೊಂದಿದ್ದು ಅದನ್ನು ವಿಸ್ತರಣೆ ಮಾಡುವಂತಹ ಕೆಲಸದಲ್ಲಿ ಇದ್ದರೆ ಅಥವಾ ಹೊಸ ವ್ಯಾಪಾರವನ್ನು ಪ್ರಾರಂಭ ಮಾಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ನಿಮಗೆ ಸರ್ಕಾರದಿಂದ ಸಾಕಷ್ಟು ಸಾಲರೂಪದ ಯೋಜನೆಗಳನ್ನು ಪರಿಶೀಲಿಸಲಾಗಿದೆ. ಕೇವಲ ಕಡಿಮೆ ಬಡ್ಡಿದರ ಮಾತ್ರವಲ್ಲದೆ ನಿಮಗೆ ಸಬ್ಸಿಡಿ ಕೂಡ ಈ ಲೋನ್ ಯೋಜನೆಗಳಲ್ಲಿ ದೊರಕುತ್ತದೆ. ಕೆಲವು ಯೋಜನೆಗಳ ಮೂಲಕ ನೀವು 50,000 ರೂಪಾಯಿಗಳ ಸಾಲು ಸೌಲಭ್ಯವನ್ನು ಪಡೆದುಕೊಂಡರೆ, ಇನ್ನು ಕೆಲವು ಯೋಜನೆಗಳಲ್ಲಿ ಒಂದು ಕೋಟಿ ರೂಪಾಯಿಗಳವರೆಗು ಕೂಡ ಸಾಲವನ್ನು ನೀಡಲಾಗುತ್ತದೆ. ಆದ್ದರಿಂದ ಒಂದಲ್ಲ ಒಂದು ಯೋಜನೆಯಿಂದ ನೀವು ಲಾಭ ಪಡೆಯಬಹುದಾಗಿದೆ, ಇದಕ್ಕಾಗಿ ಇರುವ ಎಲ್ಲ ಆಯ್ಕೆಗಳನ್ನು ತಿಳಿಯಲು ಸಂಪೂರ್ಣ ಓದಿ.

Below are types of Loan schemes available - Eligibility, Required Documents and Other details explained.
Below are types of Loan schemes available – Eligibility, Required Documents and Other details explained.

ಮಹಿಳೆಯರಿಗೆ ಯಾವೆಲ್ಲ ಸಾಲ ಸೌಲಭ್ಯಗಳು ಲಭ್ಯ ಇವೆ?- Loan Schemes

  1. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 10 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಸಿಗಲಿದೆ.
  2. ಸೆಂಟ್ ಕಲ್ಯಾಣಿ ಮಹಿಳಾ ಲೋನ್ ಸ್ಕೀಮ್ ಅಡಿಯಲ್ಲಿ ಒಂದು ಕೋಟಿ ರೂಪಾಯಿಗಳ ವರೆಗೂ ಸಾಲ ಸೌಲಭ್ಯ ಸಿಗಲಿದೆ.
  3. ಮಹಿಳಾ ಸಮೃದ್ಧಿ ಯೋಜನೆ ಅಡಿಯಲ್ಲಿ 1.25 ಲಕ್ಷಗಳ ವರೆಗೆ ಲೋನ್ ಪಡೆದುಕೊಳ್ಳಬಹುದು.
  4. ದೇನಾ ಶಕ್ತಿ ಲೋನ್ ಯೋಜನೆ ಅಡಿಯಲ್ಲಿ 20 ಲಕ್ಷ ರೂಪಾಯಿಗಳ ವರೆಗೆ ಲೋನ್ ಪಡೆದುಕೊಳ್ಳಬಹುದಾಗಿದೆ.
  5. ಮಹಿಳಾ ಸ್ವರ್ಣಿಮಾ ಲೋನ್ ಯೋಜನೆ ಅಡಿಯಲ್ಲಿ 2 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದಾಗಿದೆ.
  6. ಭಾರತೀಯ ಮಹಿಳಾ ಬ್ಯಾಂಕ್ ಬಿಸಿನೆಸ್ ಲೋನ್ ಯೋಜನೆ ಅಡಿಯಲ್ಲಿ 20 ಕೋಟಿ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  7. ಉದ್ಯೋಗಿನಿ ಲೋನ್ ಯೋಜನೆ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಧಾನ ಮಂತ್ರಿ ಮುದ್ರಾ ಲೋನ್ ಯೋಜನೆ(PM Mudra Loan Scheme)

ಕೇಂದ್ರ ಸರ್ಕಾರದಿಂದ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯವಾಗಿರುವಂತಹ ಯೋಜನೆಗಳಲ್ಲಿ ಮುದ್ರಾ ಲೋನ್ ಯೋಜನೆ ಒಂದಾಗಿ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ನೀವು ಯಾವುದೇ ರೀತಿಯ ವ್ಯಾಪಾರವನ್ನು ಪ್ರಾರಂಭಿಸಬೇಕು ಎನ್ನುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ನೀವು 10 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ವಾರ್ಷಿಕ ಎಂಟರಿಂದ ಹನ್ನೆರಡು ಪ್ರತಿಶತ ಬಡ್ಡಿದರವನ್ನು ಈ ಸಾಲದ ಮೇಲೆ ವಿಧಿಸಲಾಗುತ್ತದೆ.

ಇದನ್ನು ಕೂಡ ಓದಿ: Personal Loan: ಲೋನ್ ಕ್ಷೇತ್ರದಲ್ಲಿ TATA ಖಡಕ್ ಎಂಟ್ರಿ- ಸುಲಭವಾಗಿ 35 ಲಕ್ಷದ ಲೋನ್. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.

ಈ ಲೋನ್ ಪಡೆದುಕೊಳ್ಳುವಾಗ ಗಮನವಹಿಸಬೇಕಾಗಿರುವ ಪ್ರಮುಖ ಅಂಶಗಳು
  1. ಯಾವುದೇ ಬ್ಯಾಂಕಿನಲ್ಲಿ ಬೇಕಾದರೂ ನೀವು ಈ ಲೋನ್ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದ್ದು ಯಾವುದೇ ರೀತಿಯ ಪ್ರೋಸೆಸಿಂಗ್ ಶುಲ್ಕವನ್ನು ಯೋಜನೆ ಮೇಲೆ ಪಡೆದುಕೊಳ್ಳಲಾಗುವುದಿಲ್ಲ.
  2. ಒಂದು ವೇಳೆ ನೀವು ಸಾಲವನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ಕಷ್ಟವನ್ನು ಕಾಣುತ್ತಿದ್ದರೆ ನೀವು ಲೋನ್ ಕಟ್ಟುವಂತಹ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಬಹುದಾಗಿದೆ.
  3. ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಕೂಡ ಮೂರು ವಿಧಾನಗಳಿದ್ದು ಅದರಲ್ಲೂ ಬೇಸಿಕ್ ಶಿಶು ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಲೋನ್ ನಲ್ಲಿ ನಿಮಗೆ 12 ತಿಂಗಳುಗಳಿಗೆ ಎರಡು ಪ್ರತಿಶತ ಸಬ್ಸಿಡಿ ದರದಲ್ಲಿ ಲೋನ್ ಸಿಗುತ್ತದೆ.
  4. ಈ ಲೋನ್ ಪಡೆದುಕೊಳ್ಳಲು ನೀವು ಭಾರತೀಯರಾಗಿರಬೇಕು ಹಾಗೂ ಪ್ರಮುಖ ದಾಖಲೆಗಳಾಗಿರುವಂತಹ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ನೀಡಬೇಕು.

ಸೆಂಟ್ ಕಲ್ಯಾಣಿ ಮಹಿಳಾ ಲೋನ್ ಸ್ಕೀಮ್

ಹೊಸದಾಗಿ ವ್ಯಾಪಾರವನ್ನು ಮಾಡುವಂತಹ ಮಹಿಳೆಯರಿಗಾಗಿ ಯೋಜನೆಯನ್ನು ತೆರೆಯಲಾಗಿದೆ. ಒಂದು ಕೋಟಿ ರೂಪಾಯಿಗಳವರೆಗಿನ ಪಡೆದುಕೊಳ್ಳಬಹುದಾಗಿದ್ದು, ಬಡ್ಡಿಯ ವಿಚಾರಕ್ಕೆ ಬಂದ್ರೆ ಕೇವಲ 8.70 ರಿಂದ 8.95 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ. ಇನ್ನು ಈ ಯೋಜನೆಯಲಿ ಕೆಲವೊಂದು ಪ್ರಮುಖ ವಿಚಾರಗಳನ್ನು ಕೂಡ ನೀವು ಪರಿಗಣಿಸಬೇಕಾಗುತ್ತದೆ.

  1. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಈ ಲೋನ್ ಯೋಜನೆಯ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
  2. ಭಾರತೀಯ ಮಹಿಳಾ ಉದ್ಯಮಿಗಳು ಮಾತ್ರ ಈ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ.
  3. ಇಲ್ಲಿ ಯಾವುದೇ ರೀತಿಯ ಪ್ರೋಸೆಸಿಂಗ್ ಫೀಸ್ ಇರುವುದಿಲ್ಲ ಹಾಗೂ ಯಾವುದೇ ರೀತಿಯ ಗ್ಯಾರಂಟರ್ ಅವಶ್ಯಕತೆ ಕೂಡ ಇರುವುದಿಲ್ಲ.

ಮಹಿಳಾ ಸ್ವರ್ಣಿಮಾ ಲೋನ್ ಯೋಜನೆ

ಈ ವಿಶೇಷ ಮಹಿಳಾ ಲೋನ್ ಯೋಜನೆಯ ಮೂಲಕ ಮಹಿಳೆಯರು 2 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಮೇಲೆ ವಾರ್ಷಿಕ 5 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ. 18 ರಿಂದ 55 ವರ್ಷದ ಒಳಗಿನ ಮಹಿಳೆಯರು ಈ ಲೋನ್ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಕೂಡ ಕೆಲವೊಂದು ಪ್ರಮುಖ ಅಂಶಗಳ ಬಗ್ಗೆ ಗಮನ ವಹಿಸಬೇಕಾದ ಅಗತ್ಯ ಇದೆ.

  1. ಈ ಯೋಜನೆಯಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಲೋನ್ ನೀಡಲಾಗುತ್ತದೆ ಹಾಗೂ ಅವರ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಗಳನ್ನು ಮೀರಿರಬಾರದು.
  2. ಲೋನ್ಗಾಗಿ ಅರ್ಜಿ ಸಲ್ಲಿಸುವವರು ಉದ್ಯಮಿ ಆಗಿರಬೇಕು.
  3. ಅರ್ಜಿ ಸಲ್ಲಿಸುವಂತಹ ಮಹಿಳಾ ಉದ್ಯಮಿ ವಯಸ್ಸು 18 ರಿಂದ 56 ವರ್ಷಗಳ ಒಳಗೆ ಇರಬೇಕು.

ಮಹಿಳಾ ಲೋನ್ ಗಳಿಗಾಗಿ ಬೇಕಾಗಿರುವಂತಹ ಪ್ರಮುಖ ಡಾಕ್ಯುಮೆಂಟ್ಗಳು- Documents required to Get a Loan

  1. ಪ್ರಮುಖವಾಗಿ ಮಹಿಳೆಯರಾಗಿರಬೇಕು ಹಾಗೂ ಅವರ ವಯಸ್ಸು ಕೆಲವೊಮ್ಮೆ ಮಿನಿಮಮ್ 18 ಇರಬೇಕು ಇಲ್ಲವೇ ಕೆಲವೊಂದು ಯೋಜನೆಗಳಲ್ಲಿ 21 ಆಗಿರುತ್ತದೆ.
  2. ಪ್ರಮುಖ ಡಾಕ್ಯುಮೆಂಟ್ ಗಳರೂಪದಲ್ಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಇರಲೇಬೇಕು.
  3. ನೀವು ಹೊಸದಾಗಿ ವ್ಯಾಪಾರವನ್ನು ಪ್ರಾರಂಭಿಸುವುದಕ್ಕೆ ಮಾತ್ರವಲ್ಲದೆ ಇರುವಂತಹ ವ್ಯಾಪಾರವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡುವುದಕ್ಕೆ ಕೂಡ ಈ ಸಾಲವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.