Loan: ಸಿಬಿಲ್ ಸ್ಕೋರ್ ಇಲ್ಲದೆ ಲೋನ್ ಪಡೆಯಿರಿ- ಕಡಿಮೆ ಇದ್ರೂ ಹೀಗೆ ಮಾಡಿದ್ರೆ ಪಕ್ಕ ಲೋನ್ ಕೊಡ್ತಾರೆ.
Here is how you can get loan with Low Cibil Score Explained in Kannada
Get Low Cibil Score Loan: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ಯಾವುದೇ ರೀತಿಯಲ್ಲಿ ಪರ್ಸನಲ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ಬ್ಯಾಂಕಿಂಗ್ ಅಥವಾ ಫೈನಾನ್ಸಿಯಲ್ ಕಂಪನಿಗಳು ಪ್ರಮುಖವಾಗಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಚೆಕ್ ಮಾಡುತ್ತಾರೆ. ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ಮಾತ್ರ ಬ್ಯಾಂಕಿಂಗ್ ಕಂಪನಿಯವರಿಗೆ ನಿಮಗೆ ಅಸುರಕ್ಷಿತ ಸಾಲ ಆಗಿರುವಂತಹ ಪರ್ಸನಲ್ ಲೋನ್ ಅನ್ನು ನೀಡುವುದಕ್ಕೆ ಧೈರ್ಯ ಬರುತ್ತೆ.
Table of Contents
ಸಿಬಿಲ್ ಸ್ಕೋರ್ ಪ್ರಮುಖವಾಗಿ ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಅಂದರೆ ಈ ಹಿಂದೆ ನೀವು ಸಾಲವನ್ನು ಪಡೆದುಕೊಂಡಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ಕಟ್ಟಿದ್ದೀರಾ ಅಥವಾ ಸಾಲವನ್ನು ಪಡೆದುಕೊಂಡರೆ ಅದನ್ನು ಸರಿಯಾದ ರೀತಿಯಲ್ಲಿ ಕಟ್ಟಲು ನೀವು ಸಮರ್ಥರಾಗಿದ್ದೀರಾ ಎನ್ನುವುದನ್ನು ಸಾಬೀತುಪಡಿಸುತ್ತದೆ.
ಆದರೆ ಪ್ರತಿಯೊಂದು ಕಡೆಗಳಲ್ಲಿ ಕೂಡ ನಿಮ್ಮ ಸಿಬಿಲ್ ಸ್ಕೋರ್ ಅನ್ನೇ ನೋಡಿ ನಿಮಗೆ ಸಾಲವನ್ನು ನೀಡುತ್ತಾರೆ ಅನ್ನೋದು ತಪ್ಪು. ಕೆಲವೊಂದು ಕಡೆಗಳಲ್ಲಿ ಕಡಿಮೆ ಸಿಬಿಲ್ ಸ್ಕೋರ್ ಇದ್ರು ಕೂಡ ನಿಮಗೆ ಸಾಲ ಸಿಗುತ್ತೆ. ಹಾಗಿದ್ರೆ ಬನ್ನಿ ಈ ವಿಧದ ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಕಡಿಮೆ ಸಿಬಿಲ್ ಸ್ಕೋರ್ ಇದ್ರು ಸಾಲವನ್ನು ಪಡೆದುಕೊಳ್ಳುವ ವಿಧಾನ- How to get a Loan With Cibil Score
- ಪ್ರಮುಖವಾಗಿ ಯಾವುದೇ ರೀತಿಯ ಫೈನಾನ್ಸಿಯಲ್ ಕಂಪನಿಗಳು ಕೂಡ ಪ್ರಮುಖವಾಗಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ನೋಡುವ ಮೂಲಕ ನಿಮಗೆ ಸಾಲ ನೀಡಬಹುದಾ ಇಲ್ವಾ ಎಂಬುದನ್ನು ಧೃಡಪಡಿಸುತ್ತಾರೆ. ಕನಿಷ್ಠಪಕ್ಷ ಲೋನ್ ಪಡೆದುಕೊಳ್ಳುವುದಕ್ಕೆ ನೀವು 685 ಸಿಬಿಲ್ ಸ್ಕೋರ್ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಹೊಂದಿರಬೇಕಾಗಿರುತ್ತದೆ.
- ಒಂದು ವೇಳೆ ಸಾಲ ನೀಡುವ ಕಂಪನಿ ಅಥವಾ ವ್ಯಕ್ತಿ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಒಂದು ವೇಳೆ ಇತ್ತೀಚಿನ ದಿನಗಳಲ್ಲಿ ನಿಮಗೆ ಸಿಗುವಂತಹ ಆದಾಯ ಹೆಚ್ಚಾಗಿದ್ದರೆ ಅಥವಾ ಹೆಚ್ಚಿನ ಹಣಹರಿದು ಬರ್ತಾ ಇದ್ರೆ, ಆ ಸಂದರ್ಭದಲ್ಲಿ ಸಾಲ ನೀಡುವಂತಹ ನಿರ್ಧಾರ ಮಾಡಬಹುದು. ಇನ್ನು ಸಾಲ ನೀಡುವವರ ಬಳಿ ನೀವು ಖುದ್ದಾಗಿ ಹೋಗಿ ನಿಮಗೆ ಹೆಚ್ಚಿನ ಆದಾಯ ಹರಿದು ಬರುತ್ತಿದೆ ಎನ್ನುವಂತಹ ಮಾಹಿತಿಯನ್ನು ಸಾಕ್ಷಿ ಸಮೇತ ತೋರಿಸಿದರೆ ಆ ಸಂದರ್ಭದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಅವರು ಸಾಲ ನೀಡುವ ನಿರ್ಧಾರವನ್ನು ಮಾಡಬಹುದು.
- ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ನೀವು ಹೆಚ್ಚಿನ ಹಣವನ್ನು ಸಾಲ ರೂಪದಲ್ಲಿ ಕೇಳಿದರೆ ಸಾಲ ನೀಡುವಂತಹ ವ್ಯಕ್ತಿ ಅಥವಾ ಸಂಸ್ಥೆ ಮತ್ತೆ ನೀವು ಕಟ್ಟದೇ ಇರುವಂತಹ ಭೀ* ತಿಯಿಂದ ಸಾಲವನ್ನು ನೀಡದೇ ಇರಬಹುದು. ಈ ಸಂದರ್ಭದಲ್ಲಿ ನೀವು ಕಡಿಮೆ ಮೊತ್ತದ ಸಾಲವನ್ನು ಪರ್ಸನಲ್ ರೂಪದಲ್ಲಿ ಕೇಳಬೇಕಾಗಿರುತ್ತದೆ.
- ಈ ಸಂದರ್ಭದಲ್ಲಿ ನೀವು ಮಾಡಬಹುದಾದ ಮತ್ತೊಂದು ಕೆಲಸ ಏನೆಂದರೆ ನಿಮ್ಮ ಗೆಳೆಯ ಅಥವಾ ಪರಿಚಯಿಸ್ಥರನ್ನು ಗ್ಯಾರೆಂಟರ್ ರೂಪದಲ್ಲಿ ನೀವು ಪ್ರಸ್ತುತಪಡಿಸಬಹುದಾಗಿದೆ. ಖಂಡಿತವಾಗಿ ಈ ಸಂದರ್ಭದಲ್ಲಿ ಆ ಮತ್ತೊಬ್ಬ ವ್ಯಕ್ತಿ ನಿಮ್ಮ ಪರವಾಗಿ ಅಂದರೆ ಸಾಲದ ಪ್ರಕ್ರಿಯೆಯಲ್ಲಿ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಇನ್ನು ಅವರ ಬಳಿ ಕೂಡ ಒಂದು ಸ್ಥಿರವಾದ ಆದಾಯ ಮತ್ತು ಉತ್ತಮ ಕ್ರೆಡಿಟ್ ಸ್ಕೋರಿದ್ದರೆ ನಿಮಗೆ ಲೋನ್ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದನ್ನು ಕೂಡ ಓದಿ: Personal Loan: ಹತ್ತೇ ನಿಮಿಷದಲ್ಲಿ ಕೂತ ಜಾಗದಿಂದ 10 ಲಕ್ಷ ಸಾಲ ಪಡೆಯಿರಿ- ಅಷ್ಟು ಬೇಡ ಅಂದ್ರೆ ಅಂದ್ರೆ 5 ಲಕ್ಷ ಕೂಡ ಕೊಡ್ತಾರೆ
ನಿಮ್ಮ ಕ್ರೆಡಿಟ್ ರಿಪೋರ್ಟ್ ಮಿಸ್ಟೇಕ್ ಸರಿ ಮಾಡಿಸಿಕೊಳ್ಳಿ-
ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನದಾಗಿ ಕಂಡುಬಂದಿರುವ ಹಾಗೆ ಕ್ರೆಡಿಟ್ ರಿಪೋರ್ಟ್ ನಲ್ಲಿ ಕೂಡ ಕೆಲವೊಮ್ಮೆ ಮಿಸ್ಟೇಕ್ ಇರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಆಗಾಗ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸರಿಯಾದ ರೀತಿಯಲ್ಲಿ ಚೆಕ್ ಮಾಡುವುದು ಒಳ್ಳೆಯದು. ನೀವು ಸಾಲವನ್ನು ಪಡೆದುಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಅಥವಾ ಸಮಯದ ಒಳಗೆ ತೀರಿಸಿದಷ್ಟು ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ.
ಸಾಲವನ್ನು ಪಡೆದುಕೊಳ್ಳುವಾಗ NA & NH ಅನ್ನು ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ಪರಿಗಣಿಸುವಂತೆ ಕೇಳಬೇಕು
ಒಂದು ವೇಳೆ ನೀವು ಕಳೆದ 36 ತಿಂಗಳಿನಿಂದ ಯಾವುದೇ ರೀತಿಯ ಸಾಲದ ಟ್ರಾನ್ಸಾಕ್ಷನ್ ಅನ್ನು ಮಾಡದೆ ಹೋದಲ್ಲಿ NA & NH ಅಂದರೆ ಯಾವುದೇ ರೀತಿಯ ಚಟುವಟಿಕೆ ನಡೆದಿಲ್ಲ ಆಕ್ಟಿವ್ ಆಗಿಲ್ಲ ಎಂಬುದಾಗಿ ಹೇಳಲಾಗುತ್ತದೆ. ಇದು ಕೂಡ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವುದಕ್ಕೆ ಕಾರಣ ಆಗಿರಬಹುದು ಇದನ್ನು ಕೂಡ ನೀವು ಸಾಲವನ್ನು ನೀಡುವ ಸಂಸ್ಥೆಗೆ ವಿವರಿಸಿ ಹೇಳಬೇಕಾಗಿರುತ್ತದೆ.
CIBIL Score ಕಡಿಮೆಯಾಗಿದ್ರೂ ಕೂಡ ನಾವು ಸಾಲ ಪಡೆದುಕೊಳ್ಳಬಹುದಾ?- Can you get a Loan with Low Cibil Score
ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಸಾಲವನ್ನು ನೀಡುವಂತಹ ಸಂಸ್ಥೆಗಳು ಪ್ರಥಮವಾಗಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಚೆಕ್ ಮಾಡುತ್ತಾರೆ. ಸಾಕಷ್ಟು ಜನರು ಈ ಸಂದರ್ಭದಲ್ಲಿ ಯಾವುದೇ ರೀತಿಯ ಕ್ರೆಡಿಟ್ ಕಾರ್ಡ್ ಹೊಂದಿರುವುದಿಲ್ಲ ಅಥವಾ ಯಾವುದೇ ರೀತಿಯ ಸಾಲವನ್ನು ಪಡೆದುಕೊಂಡಿರುವುದಿಲ್ಲ ಹೀಗಾಗಿ ಅವರ ಕ್ರೆಡಿಟ್ ಹಿಸ್ಟರಿಯಲ್ಲಿ ಯಾವುದೇ ರೀತಿಯ ಟ್ರಾನ್ಸಾಕ್ಷನ್ ನಡೆದಿರುವುದಿಲ್ಲ.
ಈ ರೀತಿಯ ಜನರು ತಮ್ಮ ಇನ್ಕಮ್ ಪ್ರೂಫ್ ಅಥವಾ ಆದಾಯದ ಮೂಲವನ್ನು ಸಾಬೀತುಪಡಿಸುವ ಮೂಲಕವೂ ಸುಲಭ ರೂಪದಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ ಎಂಬುದು ನೀವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಗ್ಯಾರೆಂಟಾರ್ ಇಲ್ಲವೇ ಯಾವುದೇ ರೀತಿಯ ಆಸ್ತಿಯನ್ನು ಕೊಲೆಟರಲ್ ರೂಪದಲ್ಲಿ ಗಿರವಿ ಇಡುವ ಮೂಲಕ ಕೂಡ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಈ ಮೇಲೆ ತಿಳಿಸಿರುವ ಅಂತಹ ವಿಧಾನಗಳ ಮೂಲಕ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಸಾಲವನ್ನು ಪಡೆದುಕೊಳ್ಳುವುದಕ್ಕೆ ನೀವು ಸಕ್ಷಮರಾಗಿರುತ್ತೀರಿ. ಆದರೆ ಈಗ ನೀವು ತಲೆಕೆಡಿಸಿಕೊಳ್ಳಬೇಕಾಗಿರುವ ಪ್ರಮುಖ ವಿಚಾರ ಏನಂದರೆ ಮರುಪಾವತಿಗೆ ನಿಮ್ಮ ಬಳಿ ಸರಿಯಾದ ಹಣ ಇದೆಯೇ ಇಲ್ಲವೇ ಎನ್ನುವುದನ್ನು ಪ್ರಥಮವಾಗಿ ತಿಳಿದುಕೊಂಡ ನಂತರ ಲೋನ್ ಪಡೆದುಕೊಳ್ಳಿ. ಇಲ್ಲವಾದಲ್ಲಿ ಯಾವುದೇ ಆಸ್ತಿ ಅಥವಾ ಗೋಲ್ಡ್ ಅನ್ನು ಅಡವಿಟ್ಟು ಸಾಲವನ್ನು ಪಡೆದುಕೊಂಡಿದ್ದಲ್ಲಿ ನೀವು ಒಂದು ವೇಳೆ ಸಾಲವನ್ನು ಕಟ್ಟದೆ ಹೋದಲ್ಲಿ ಅಡ ಇಟ್ಟಿರುವಂತಹ ವಸ್ತುಗಳನ್ನು ಕಳೆದುಕೊಳ್ಳಬೇಕಾಗುತ್ತದೆ.