Personal Loan: ಇದೀಗ ಲೋನ್ ಕೊಡಲು ಮುಂದಾದ ದೊಡ್ಡ L & T ಕಂಪನಿ- ಅದೆಷ್ಟು ಸುಲಭ ಲೋನ್ ಪಡೆಯುವುದು

L & T Finance Personal Loan details explained including features, benefits, eligibility, processing charges, documents required and interest rate.

Personal Loan from L & T Finance: ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಲವನ್ನು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿಯಲ್ಲಿ ಹೊಸ ಹೊಸ ಸಂಸ್ಥೆಗಳು ಫೈನಾನ್ಸ್ ಸಂಸ್ಥೆಗಳ ರೂಪದಲ್ಲಿ ಕೂಡ ಫೈನಾನ್ಸ್ ಮಾರುಕಟ್ಟೆಗೆ ಕಾಲಿಡುತ್ತಿವೆ. ಅವುಗಳಲ್ಲಿ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರೋದು L & T ಫೈನಾನ್ಸ್ ಕಂಪನಿ ಬಗ್ಗೆ. ಮಾರುಕಟ್ಟೆಯಲ್ಲಿ ಇರುವಂತಹ ಲೀಡಿಂಗ್ NBFC ಕಂಪನಿಗಳಲ್ಲಿ ಇದು ಕೂಡ ಒಂದಾಗಿದ್ದು ಗ್ರಾಹಕರಿಗೆ ಪರ್ಸನಲ್ ಲೋನ್(personal loan) ಸೇರಿದಂತೆ ಸಾಕಷ್ಟು ವಿವಿಧ ಲೋನ್ ಗಳನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದೆ.

L & T Finance Personal Loan details explained including features, benefits, eligibility, processing charges, documents required and interest rate.
L & T Finance Personal Loan details explained including features, benefits, eligibility, processing charges, documents required and interest rate.

L & T ಫೈನಾನ್ಸ್ ಲೋನ್ ವಿವರ: L & T Personal Loan Details

ಈ ಲೋನ್ ಮೂಲಕ ನೀವು ನಿಮ್ಮ ವೈಯಕ್ತಿಕ ಖರ್ಚುಗಳಿಗೆ ಅಂದರೆ ಉದಾಹರಣೆಗೆ ಮೆಡಿಕಲ್ ಖರ್ಚುಗಳು, ಮದುವೆ ಖರ್ಚುಗಳು ಅಥವಾ ಮನೆಯ ನವೀಕರಣದ ಖರ್ಚುಗಳು ಸೇರಿದಂತೆ ಇನ್ನಿತರ ಅರ್ಜೆಂಟ್ ಖರ್ಚುಗಳನ್ನು ನೀವು ನಿಮ್ಮ ಅರ್ಹತೆಗೆ ತಕ್ಕಂತೆ L & T ಫೈನಾನ್ಸ್ ಸಂಸ್ಥೆಯ ಮೂಲಕ 50,000 ಗಳಿಂದ 7 ಲಕ್ಷಗಳವರೆಗೆ ಸಾಲ ರೂಪದಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.

L & T ಫೈನಾನ್ಸ್ ನಲ್ಲಿ ಲೋನ್ಗಾಗಿ ಅಪ್ಲೈ ಮಾಡೋದು ಹೀಗೆ? How to get a Loan from L & T Finance.

ಮೊದಲಿಗೆ ನೀವು L & T ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಹೋಗಬೇಕಾಗಿರುತ್ತದೆ. ಅಲ್ಲಿಗೆ ಹೋದಮೇಲೆ ಪರ್ಸನಲ್ ಲೋನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಪ್ರಥಮವಾಗಿ ನೀವು ನಿಮ್ಮ ಲೋನ್ ಪಡೆಯುವ ಅರ್ಹತೆಯನ್ನು ಚೆಕ್ ಮಾಡಬೇಕು. ಕೇಳಲಾಗುವಂತಹ ಪ್ರತಿಯೊಂದು ವೈಯಕ್ತಿಕ ಮಾಹಿತಿಗಳು ಹಾಗೂ ಡಾಕ್ಯುಮೆಂಟ್ ಗಳನ್ನು ಕೂಡ ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು. ಡಾಕುಮೆಂಟ್ಗಳನ್ನು ಹಾಗೂ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಅರ್ಜಿ ಕಂಪ್ಲೀಟ್ ಆಗುತ್ತದೆ ಹಾಗೂ ಲೋನ್ಗಾಗಿ ಕೆಲವೊಂದು ಸಮಯಗಳ ಕಾದ ನಂತರ ನಿಮ್ಮ ಹಣ ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ.

L & T ಫೈನಾನ್ಸ್ ಲೋನ್ ನ ಫೀಚರ್ಸ್ ಗಳು ಹಾಗೂ ಲಾಭಗಳು- features and benefits of L & T Personal Loan

  1. L & T ಫೈನಾನ್ಸ್ ಮೂಲಕ ಗ್ರಾಹಕರು ಪಡೆದುಕೊಳ್ಳುವಂತಹ ಮೊದಲ ಹಾಗೂ ಪ್ರಮುಖ ಲಾಭ ಏನೆಂದರೆ ಲೋನ್ ಹಣ ಅಪ್ರೂವ್ ಆಗುತ್ತಿದ್ದಂತೆ ನಿಮ್ಮ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
  2. ನೀವು ನಿಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸಾಲವನ್ನು ಕಟ್ಟುವಂತಹ ಅವಧಿಯ ನಿರ್ಧಾರವನ್ನು ಕೂಡ ಮಾಡಬಹುದಾಗಿದೆ. ಸಾಲವನ್ನು ರಿಪೇಮೆಂಟ್ ಮಾಡುವುದಕ್ಕೆ 12 ರಿಂದ 48 ತಿಂಗಳುಗಳ ಕಾಲ ಸಮಯಾವಕಾಶವನ್ನು ನೀಡಲಾಗುತ್ತದೆ.
  3. L & T ಫೈನಾನ್ಸ್ ನಲ್ಲಿ ಲೋನ್ ಪಡೆದುಕೊಳ್ಳಬೇಕಾದರೆ ಯಾವುದೇ ರೀತಿಯ Collateral ಅಥವಾ ಸುರಕ್ಷತೆಗಾಗಿ ಆಸ್ತಿಯನ್ನು ಅಡ ಇಡಬೇಕಾದ ಅಗತ್ಯ ಇರುವುದಿಲ್ಲ.
  4. ಇಲ್ಲಿ ಲೋನ್ ಪಡೆದುಕೊಳ್ಳಬೇಕಾದರೆ ದೊಡ್ಡ ಪ್ರಮಾಣದಲ್ಲಿ ಡಾಕ್ಯೂಮೆಂಟ್ ಗಳನ್ನು ಸಬ್ಮಿಟ್ ಮಾಡಬೇಕಾದ ಅಗತ್ಯ ಇರುವುದಿಲ್ಲ ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಗಮನಿಸಿ ಉತ್ತಮವಾದ ಬಡ್ಡಿ ದರವನ್ನು ನಿಮಗೆ ನೀವು ಪಡೆದುಕೊಳ್ಳುವ ಸಾಲದ ಮೇಲೆ ವಿಧಿಸಲಾಗುತ್ತದೆ.
  5. ಎಲ್ಲಕ್ಕಿಂತ ಪ್ರಮುಖವಾಗಿ ಈಗಾಗಲೇ ಗ್ರಾಹಕರಾಗಿರುವವರಿಗೆ ಪೂರ್ವ ಅನುಮೋದಿತ ಸಾಲವನ್ನು ಕೂಡ ನೀಡುವ ಮೂಲಕ ಅವರಿಗೆ ಇನ್ನಷ್ಟು ಲಾಭವನ್ನು ಸಂಸ್ಥೆ ತಂದುಕೊಡುತ್ತದೆ. L & T ಫೈನಾನ್ಸ್ ನಲ್ಲಿ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು.

ಇಲ್ಲಿ ಲೋನ್ ಪಡೆದುಕೊಳ್ಳಲು ನೀವು ಮೊದಲು ಭಾರತೀಯರಾಗಿರಬೇಕು ಹಾಗೂ ನಿಮ್ಮ ವಯಸ್ಸು 23 ರಿಂದ 58 ವರ್ಷದ ಒಳಗೆ ಇರಬೇಕು. ಉತ್ತಮವಾದ ಕ್ರೆಡಿಟ್ ಸ್ಕೋರ್ ಹಿಸ್ಟರಿ ಇರಬೇಕು ಹಾಗೂ ಕ್ರೆಡಿಟ್ ಸ್ಕೋರ್ ಕೂಡ ಚೆನ್ನಾಗಿರಬೇಕು ಮತ್ತು ನಿಮ್ಮ ಪ್ರತಿ ತಿಂಗಳ ಸಂಬಳ ಕನಿಷ್ಠ ಪಕ್ಷ ಹದಿನೈದು ಸಾವಿರ ಆಗಿರಬೇಕು. ಇವಿಷ್ಟು ಪ್ರಮುಖವಾದ ಅರ್ಹತೆಗಳನ್ನು ಸಾಲ ಪಡೆದುಕೊಳ್ಳುವವರು ಹೊಂದಿರಬೇಕು.

ಮತ್ತಷ್ಟು ಸುದ್ದಿಗಳು- Get Instant Loan: ಆಧಾರ್ ತೋರಿಸಿ 2 ಲಕ್ಷ ಸಾಲ ಸುಲಭವಾಗಿ ಪಡೆಯಿರಿ. ಅದು ಕೇವಲ ಐದೇ ನಿಮಿಷದಲ್ಲಿ.

L & T ನಲ್ಲಿ ಸಾಲವನ್ನು ಪಡೆಯಲು ಬೇಕಾಗುವ ಡಾಕ್ಯುಮೆಂಟ್ಗಳು- Required documents to get a Loan

ಐಡೆಂಟಿಟಿ ಪ್ರೂಫ್ ರೂಪದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ರೀತಿಯ ದಾಖಲೆಗಳು ಬೇಕಾಗುತ್ತದೆ. ಅಡ್ರೆಸ್ ಪ್ರೂಫ್ ರೂಪದಲ್ಲಿ ಎಲೆಕ್ಟ್ರಿಕ್ ಬಿಲ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್ ಇತ್ಯಾದಿಗಳು ಬೇಕಾಗುತ್ತವೆ. ಇನ್ನು ಇನ್ಕಮ್ ಪ್ರೂಫ್ ರೂಪದಲ್ಲಿ ಸಂಬಳವನ್ನು ಪಡೆಯುವಂತಹ ಉದ್ಯೋಗಿಗೆ ಮೂರು ತಿಂಗಳ ಸ್ಯಾಲರಿ ಸ್ಲಿಪ್, Form 16, ಸ್ಯಾಲರಿಯನ್ನು ತೋರಿಸುವಂತಹ ಮೂರು ತಿಂಗಳ ಬ್ಯಾಂಕ್ ಅನ್ನು ಕೂಡ ನೀಡಬೇಕಾಗುತ್ತದೆ. ಇನ್ನು ಸ್ವಂತ ಉದ್ಯಮವನ್ನು ಹೊಂದಿರುವವರು ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿರುವಂತಹ ದಾಖಲೆಗಳು, ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಕೂಡ ನೀಡಬೇಕಾಗುತ್ತದೆ ಮತ್ತು ಇದರ ಜೊತೆಗೆ ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ನೀಡಬೇಕು.

L & T ಫೈನಾನ್ಸ್ ಲೋನ್ ನಲ್ಲಿ ಇರುವಂತಹ ಪ್ರೊಸೆಸಿಂಗ್ ಫೀಸ್ ಹಾಗೂ ಇನ್ನಿತರ ಚಾರ್ಜಸ್ ಗಳ ಬಗ್ಗೆ ಮಾಹಿತಿ- Processing charges and Interest rate.

ಪ್ರೊಸೆಸಿಂಗ್ ಫೀಸ್ ವಿಚಾರದಲ್ಲಿ 2 ಪ್ರತಿಶತ ಹಾಗೂ ಅದರ ಜೊತೆಗೆ ಬೇರೆ ಚಾರ್ಜಸ್ ಗಳು ಅಪ್ಲೈ ಆಗುತ್ತವೆ. ಇನ್ನು ತಡವಾಗಿ ಪೇಮೆಂಟ್ ಮಾಡಿದ್ದಲ್ಲಿ 3% ಚಾರ್ಜ್ ವಿಧಿಸಲಾಗುತ್ತದೆ. ಒಂದು ವೇಳೆ ನೀವು ಭಾಗಶಃ ಹಣವನ್ನು ಮುಂಚಿತವಾಗಿ ಕಟ್ಟಿದರೆ 5 ಪ್ರತಿಶತ ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ ವರ್ಷಕ್ಕೆ ಎರಡು ಬಾರಿ 25% ಟ್ಯಾಕ್ಸ್ ಅನ್ನು ಕಟ್ಟಬೇಕಾಗಿರುತ್ತದೆ. ಡುಪ್ಲಿಕೇಟ್ NOC ಚಾರ್ಜಸ್ ಗಳು 250 ರೂಪಾಯಿ ಹಾಗೂ ಚಾರ್ಜಸ್ ಗಳು ಕೂಡ ಒಳಗೊಂಡಿರುತ್ತದೆ. ಇನ್ನು ಸಾಕಷ್ಟು ಚಾರ್ಜಸ್ ಗಳು ಇರುತ್ತವೆ ಇವುಗಳನ್ನು ನೀವು ಅಧಿಕೃತವಾಗಿ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದಾಗಿದೆ.