Get Instant Loan: ಆಧಾರ್ ತೋರಿಸಿ 2 ಲಕ್ಷ ಸಾಲ ಸುಲಭವಾಗಿ ಪಡೆಯಿರಿ. ಅದು ಕೇವಲ ಐದೇ ನಿಮಿಷದಲ್ಲಿ.
How to Get Instant Loan from Hero Fincorp and what are the benefits, EMI details and Interest details explained in Kannada
Get Instant Loan: ನಮಸ್ಕಾರ ಸ್ನೇಹಿತರೇ ಸಾಕಷ್ಟು ಪರಿಸ್ಥಿತಿಗಳಲ್ಲಿ ಪರ್ಸನಲ್ ಅಗತ್ಯತೆ ಪ್ರತಿಯೊಬ್ಬರಿಗೂ ಕೂಡ ಇರುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಹಾಗೂ ಇನ್ನಿತರ ಪ್ರಮುಖ ದಾಖಲೆಗಳ ಮೂಲಕ ಯಾವ ರೀತಿಯಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. ಹೌದುನೋ ಮಾತಾಡ್ತಿರೋದು ಹೀರೋ ಫಿನ್ಕಾರ್ಪ್(Hero Fincorp) ಮೂಲಕ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ. ಬನ್ನಿ ಹಾಗಿದ್ರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Table of Contents
Hero Fincorp Loan ಲಾಭಗಳು – Benefits of getting Instant loan from Hero Fincorp
ಹೀರೋ ಫಿನ್ಕಾರ್ಪ್ ನಲ್ಲಿ ಆಧಾರ್ ಕಾರ್ಡ್ ಮೂಲಕ ನೀವು ಸುಲಭ ರೂಪದಲ್ಲಿ 2 ಲಕ್ಷ ರೂಪಾಯಿಗಳವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಯಾವುದೇ ರೀತಿಯ ಕೊಲೆಟರಲ್ ಅನ್ನು ಸೆಕ್ಯೂರಿಟಿ ರೂಪದಲ್ಲಿ ಇಡಬೇಕಾದ ಅಗತ್ಯವಿಲ್ಲ. ಆಕರ್ಷಕ ಬಡ್ಡಿ ದರಗಳನ್ನು ಕೂಡ ನೀವು ಕಾಣಬಹುದು. ಮರುಪಾವತಿ ಮಾಡುವುದಕ್ಕೆ ಕೂಡ ಸುಲಭ ರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತದೆ. ನಿಮಗೆ ಲೋನ್ ಅಪ್ರೂವ್ ಆದ 24 ಗಂಟೆಗಳ ಒಳಗಾಗಿ ನಿಮ್ಮ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಆಧಾರ್ ಕಾರ್ಡ್ ಮೂಲಕ ಸಾಲ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು – Eligibility to get Loan
ಮೊದಲಿಗೆ ವಯಸ್ಸು 21ರಿಂದ 58 ವರ್ಷದ ನಡುವೆ ಇರಬೇಕು ಹಾಗೂ ಸಾಲ ಪಡೆದುಕೊಳ್ಳುವವರು ಭಾರತೀಯರಾಗಿರಬೇಕು. ಉದ್ಯೋಗವನ್ನು ಹೊಂದಿರುವವರು ಹಾಗೂ ಸ್ವಂತ ಉದ್ಯಮವನ್ನು ಹೊಂದಿರುವವರು ಈ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದೆ. ಸಂಬಳವನ್ನು ಪಡೆದುಕೊಳ್ಳುವವರು ಆರು ತಿಂಗಳ ಕೆಲಸದ ಅನುಭವವನ್ನು ಹೊಂದಿರಬೇಕು ಹಾಗೂ ಸ್ವಂತ ಉದ್ಯಮವನ್ನು ಹೊಂದಿರುವವರು ಎರಡು ವರ್ಷಗಳ ಬಿಸಿನೆಸ್ ಅನುಭವವನ್ನು ಹೊಂದಿರಬೇಕು. ನಿಮಗೆ ಲೋನ್ ಮರುಪಾವತಿ ಮಾಡುವುದಕ್ಕೆ 60 ತಿಂಗಳು ವರೆಗೂ ಕೂಡ ಸಮಯಾವಕಾಶವನ್ನು ನೀಡಲಾಗುತ್ತದೆ. ಮ್ಯಾಕ್ಸಿಮಮ್ 5 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಸಾಲವನ್ನು ಪಡೆದುಕೊಳ್ಳುವುದಕ್ಕೆ ತಿಂಗಳ ಆದಾಯ ಕನಿಷ್ಠ ಪಕ್ಷ ಹದಿನೈದು ಸಾವಿರ ಇರಬೇಕು.
ಶುಲ್ಕ ಹಾಗೂ ಬಡ್ಡಿ ಮತ್ತು ಹಣ ಕಟ್ಟುವಂತಹ ಅವಧಿ – EMI options and interest rates
ಉದಾಹರಣೆಗೆ ಇಲ್ಲಿ ನೀವು 2 ಲಕ್ಷ ರೂಪಾಯಿಗಳವರೆಗು ಲೋನ್ ಪಡೆದುಕೊಂಡರೆ ಬಡ್ಡಿ ರೂಪದಲ್ಲಿ ನಿಮ್ಮ ಬಳಿ 11 ರಿಂದ 35 ಪ್ರತಿಶತ ಬಡ್ಡಿದರವನ್ನು ವಸೂಲಿ ಮಾಡಲಾಗುತ್ತದೆ. ಇನ್ನು ಲೋನಿನ ಪ್ರೊಸೆಸಿಂಗ್ ಫೀಸ್ ಕೂಡ 2.5 ರಿಂದ 3.5 ಪ್ರತಿಶತ ಆಗಿರುತ್ತದೆ. ಉದಾಹರಣೆಗೆ 2 ಲಕ್ಷ ಪಡೆದುಕೊಂಡಿದ್ದರೆ ನಿಮಗೆ EMI ರೂಪದಲ್ಲಿ ಒಂದರಿಂದ ಐದು ವರ್ಷಗಳವರೆಗೂ ಕೂಡ ಅವಧಿಯನ್ನು ನೀಡಲಾಗುತ್ತದೆ. ಒಂದು ವರ್ಷಕ್ಕೆ ನೀವು ಲೋನ್ ಪಡೆದುಕೊಂಡಿದ್ದರೆ ಆಗ ತಿಂಗಳಿಗೆ 17,676 ರೂಪಾಯಿ ಕಟ್ಟಬೇಕು, ಎರಡು ವರ್ಷಕ್ಕೆ ಆದರೆ ತಿಂಗಳಿಗೆ ರೂ.9,322 ಗಳನ್ನು ಕಟ್ಟಬೇಕು, ಮೂರು ವರ್ಷಕ್ಕೆ 6548, ನಾಲ್ಕು ವರ್ಷಕ್ಕೆ 5169 ಹಾಗೂ ಐದು ವರ್ಷಕ್ಕೆ 4348 ರೂಪಾಯಿಗಳನ್ನು ಇಎಂಐ ರೂಪದಲ್ಲಿ ಕಟ್ಟಬೇಕಾಗುತ್ತದೆ.
Hero Fincorp ನಲ್ಲಿ ಆಧಾರ್ ಕಾರ್ಡ್ ಬಳಸಿಕೊಂಡು 2 ಲಕ್ಷ ಲೋನ್ ಗೆ ಅರ್ಜಿ ಹಾಕುವುದು ಹೇಗೆ? – how to submit an application to Get Instant Loan
ಮೊದಲಿಗೆ ನೀವು ಹೀರೋ ಫಿನ್ಕಾರ್ಪ್ ನ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕಾಗಿರುತ್ತದೆ ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ನಿಮಗೆ ಬೇಕಾಗಿರುವಂತಹ ಪರ್ಸನಲ್ ಲೋನ್ ಡೀಟೇಲ್ ಬಗ್ಗೆ ಸಂಪೂರ್ಣ ವಿವರವನ್ನು ನೀಡಬೇಕಾಗುತ್ತದೆ. ಕೇಳದಾಗುವಂತಹ ಡಾಕ್ಯುಮೆಂಟ್ ಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು. ಇದನ್ನೆಲ್ಲ ಕಂಪ್ಲೀಟ್ ಮಾಡಿದ ನಂತರ ನಿಮ್ಮ ಲೋನ್ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ. ಎಲ್ಲವನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ ಹೀರೋ ಫಿನ್ಕಾರ್ಪ್ ನಿಮ್ಮ ಆಧಾರ್ ಕಾರ್ಡ್ ಆಧಾರದ ಮೇಲೆ 24 ಗಂಟೆಗಳ ಒಳಗೆ ನೀವು ನೀಡಿರುವಂತಹ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡುತ್ತದೆ.
ಇದನ್ನು ಕೂಡ ಓದಿ: Loan: ಅತಿ ಸುಲಭವಾಗಿ 3 ಲಕ್ಷ ಲೋನ್ ಪಡೆಯುವುದು ಹೇಗೆ? How to get a loan easily