Loan: ಅತಿ ಸುಲಭವಾಗಿ 3 ಲಕ್ಷ ಲೋನ್ ಪಡೆಯುವುದು ಹೇಗೆ? How to get a loan easily
Here is the complete details about paytm loan and steps to get approval from Paytm Explained in Kannada
PayTm Loan: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಕೆಲವೊಂದು ಸಮಯದಲ್ಲಿ ಅರ್ಜೆಂಟ್ ಆಗಿ ಹಣ ಬೇಕಾಗುತ್ತದೆ. ಎಂತಹ ದುಡ್ಡಿರುವವರು ಕೂಡ ಕೆಲವೊಂದು ಸಮಯದಲ್ಲಿ ಕೈಯಲ್ಲಿ ದುಡ್ಡು ಇರುವುದಿಲ್ಲ, ಅದಕ್ಕಾಗಿಯೇ ಕೆಲವೊಂದು ಕಂಪನಿ ಗಳು ಕೇವಲ ನಿಮಿಷಗಳಲ್ಲಿ ದುಡ್ಡು ನೀಡುವ ರೀತಿಯ ಯೋಜನೆಗಳನ್ನು ಜಾರಿಗೆ ತಂದಿವೆ. ಅದೇ ಕಾರಣಕ್ಕಾಗಿ, PAYTM ಸಂಸ್ಥೆ ಕೂಡ, ಇತರರಿಗೆ ಪೈಪೋಟಿ ನೀಡಲು ಈ ರೀತಿಯ ಯೋಜನೆಯೊಂದಿಗೆ ಗ್ರಾಹಕರಿಗೆ ಲೋನ್ ನೀಡಲು ನಿರ್ಧಾರ ಮಾಡಿದೆ. ಈ ಯೋಜನೆಯ ಕುರಿತು ನಿಮಗೆ ಸಂಪೂರ್ಣ ಮಾಹಿತಿಯನ್ನು ಇಂದು ನಾವು ನೀಡುತ್ತೇವೆ.
ನಿಮ್ಮ ಬಳಿ ಕೇವಲ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಸೆಲ್ಫಿ ಫೋಟೋ ಇದ್ದರೇ ಸಾಕು, ನಿಮ್ಮ ಅಕೌಂಟ್ ಗೆ ನೇರವಾಗಿ ಎರಡು ಲಕ್ಷ ರೂಪಾಯಿ ಬೀಳುತ್ತದೆ. ಒಂದು ವೇಳೆ ನಿಮಗೂ ಕೂಡ ಹಣದ ಅಗತ್ಯ ಇದ್ದಲ್ಲಿ, ಈ ಕೂಡಲೇ ಈ ರೀತಿಯ ಯೋಜನೆಯನ್ನು ಬಳಸಿಕೊಂಡು PAYTM ನಿಂದ ಹಣವನ್ನು ಪಡೆಯಿರಿ. ಈ ಲೇಖನದಲ್ಲಿ ನೀವು ಹೇಗೆ Paytm ಅಪ್ ಬಳಸಿಕೊಂಡು ಲೋನ್ ಅನ್ನು ಪಡೆಯಬಹುದು ಎಂಬುದನ್ನು ವಿವರವಾಗಿ ತಿಳಿಸಲಾಗಿದೆ. Here is how you can get your loan approved from Paytm within few minutes.
ಇದನ್ನು ಕೂಡ ಓದಿ; ಹಬ್ಬದ ಸಮಯದಲ್ಲಿ ಲೋನ್ ನಲ್ಲಿ ಭರ್ಜರಿ ಆಫರ್- ಮೊಬೈಲ್ ನಲ್ಲಿ 5 ಲಕ್ಷದ ವರೆಗೂ ಸಾಲ ಪಡೆಯಿರಿ. ಬ್ಯಾಂಕ್ ಅನ್ನೋದೇ ಬೇಡ.
ಸ್ನೇಹಿತರೇ ಮೊದಲನೆಯಾಗಿ ನೀವು ನಿಮ್ಮ ಬಳಿ ನಾವು ಈ ಕೆಳಗೆ ಹೇಳುವ ಎಲ್ಲಾ ಡಾಕ್ಯುಮೆಂಟ್ ಗಳನ್ನೂ ಸಿದ್ಧಪಡಿಸಿಕೊಳ್ಳಿ. ಇದಾದ ಬಳಿಕ ನೀವು ನಾವು ಹೇಳುವ ರೀತಿ ಅರ್ಜಿ ಸಲ್ಲಿಸಿದರೆ ಖಂಡಿತಾ ನಿಮಗೆ Paytm ಕಡೆ ಇಂದ ಲೋನ್ ಸಿಗುತ್ತದೆ. ಅದು ಕೇವಲ 15 ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬರುತ್ತದೆ.
Paytm ನಿಂದ ವೈಯಕ್ತಿಕ ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು – Required Documents to Get Loan from Paytm.
- ಆಧಾರ್ ಕಾರ್ಡ್
- PAN ಕಾರ್ಡ್
- ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿರಬೇಕು
- ನಿಮ್ಮ ಒಂದು ಬ್ಯಾಂಕ್ ಖಾತೆಗೆ ನಿಮ್ಮ ಫೋನ್ ನಂಬರ್ ಲಿಂಕ್ ಆಗಿರಬೇಕು.
- Paytm ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡಿರಬೇಕು.
- ನಿಮ್ಮ ಸೆಲ್ಫಿ ಫೋಟೋ.
Paytm ಅಪ್ಲಿಕೇಶನ್‌ನಿಂದ ಸಾಲವನ್ನು ಹೇಗೆ ತೆಗೆದುಕೊಳ್ಳಬಹುದು? How to get a loan from Paytm.
ಸ್ನೇಹಿತರೆ ನಿಮಗೆ ಒಂದು ವೇಳೆ ಈ ಸಾಲದ ಅಗತ್ಯತೆ ಇದ್ದರೇ, ಮೊದಲು ನೀವು Paytm ಅಪ್ಲಿಕೇಶನ್ ಅಲ್ಲಿ ಗೂಗಲ್ ಪ್ಲೇ ಸ್ಟೋರ್ ಇಂದ ಇನ್ಸ್ಟಾಲ್ ಮಾಡಿಕೊಳ್ಳಿ. ಹಾಗೂ ನೀವು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಕಿ ಒಂದು ಖಾತೆಯನ್ನು ರಚಿಸಿಕೊಳ್ಳಿ. ಇದರ ಜೊತೆಗೆ ನಾವು ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ನೆನಪಿರಲಿ ಸ್ನೇಹಿತರೇ, ಇಲ್ಲಿ ಬೇರೆ ಬ್ಯಾಂಕ್ ನ ರೀತಿ ಹೆಚ್ಚಿನ ದಾಖಲೆಗಳನ್ನು ಕೇಳುವುದಿಲ್ಲ. ಇವೆಲ್ಲ ಆದ ಬಳಿಕ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಇಷ್ಟೆಲ್ಲ ಆದಮೇಲೆ, ನಾವು ಕೆಳಗೆ ತಿಳಿಸಿರುವಂತೆ, ನೀವು ಲೋನ್ ಗೆ ಅರ್ಜಿ ಸಾಕು. ನೇರವಾಗಿ ಬ್ಯಾಂಕ್ ಖಾತೆಗೆ ಅಕೌಂಟ್ ಗೆ ಬೀಳುತ್ತದೆ.
ಸ್ನೇಹಿತರೇ, ಈ ಅರ್ಜಿ ಹಾಕುವ ಮುನ್ನ ಈ ಅರ್ಹತೆಗಳನ್ನು ನೀವು ಹೊಂದಿರಬೇಕು. – Eligibility to get a Loan from Paytm.
- ನೀವು ಭಾರತೀಯ ಪ್ರಜೆಯಾಗಿರಬೇಕು. ಹೌದು ನಿಮಗೆ ಭಾರತೀಯ ಪೌರತ್ವ ಇರಬೇಕು.
- ನಿಮ್ಮ ವಯಸ್ಸು ಕನಿಷ್ಠ 21 ವರ್ಷ ವಯಸ್ಸು ಆಗಿರಬೇಕು.
- ನಾವು ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇರಬೇಕು.
- ನೀವು ಕನಿಷ್ಠ ಎರಡು ವರ್ಷ ಕೆಲಸ ಮಾಡಿರಬೇಕು ಅಥವಾ ಚಿಕ್ಕ ವ್ಯಾಪಾರ ಹೊಂದಿರಬೇಕು( ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ)
- ನೀವು ಕನಿಷ್ಠ ತಿಂಗಳಿಗೆ 12 ಸಾವಿರ ದುಡಿಯುತ್ತಿರಬೇಕು. (ಇದಕ್ಕೆ ಬೇರೆ ಪರಿಹಾರ ಕೂಡ ಇದೆ).
- ನಿಮ್ಮ ಬಳಿ ಒಂದು ಸ್ಮಾರ್ಟ್ ಫೋನ್ ಇರಬೇಕು, ಯಾಕೆಂದರೆ, ಮೊಬೈಲ್ ನಿಂದ ಮಾತ್ರ ಅರ್ಜಿ ಹಾಕಲು ಸಾಧ್ಯವಾಗುತ್ತದೆ. (Paytm ಅಪ್ಲಿಕೇಶನ್ ಇಂದ ಹಾಕಬೇಕು.
- ಕಳೆದ ಆರು ತಿಂಗಳಿನಲ್ಲಿ ನೀವು ಯಾವುದೇ ಲೋನ್ ಪಡೆದಿರಬಾರದು.
Paytm ಅಪ್ಲಿಕೇಶನ್ ನಲ್ಲಿ ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕುವುದು ಹೇಗೆ? How to apply for loan using Paytm Application.
- ಮೊದಲನೆಯದಾಗಿ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ Paytm ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ, Google Play Store ನಲ್ಲಿ ಇದು ಉಚಿತವಾಗಿ ಲಭ್ಯವಿದೆ.
- ನಿಮ್ಮ ಮೊಬೈಲ್ ಈ ನಂಬರ್ ಬಳಸಿ ಮೊಬೈಲ್ ಸೈನ್ ಅಪ್ ಮಾಡಿಕೊಳ್ಳಿ, ನೆನಪಿರಲಿ ಈ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.
- ನೀವು ಈ ಕೆಲಸ ಮಾಡಿದ ಬಳಿಕ ಮೊಬೈಲ್ ಅಯಪ್ ಓಪನ್ ಮಾಡಿ, ಅದರ ಮುಖಪುಟದಲ್ಲಿ ಪರ್ಸನಲ್ ಲೋನ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
- ಅದನ್ನು ಕ್ಲಿಕ್ ಮಾಡಿದ ಬಳಿಕ ನಿಮಗೆ ಯಾವ ರೀತಿಯ ಸಾಲ ಬೇಕು ಎಂದು ಆಯ್ಕೆ ಮಾಡಬೇಕು – ಉದಾಹರಣೆಗೆ ವೈಯಕ್ತಿಕ ಸಾಲ (Personal Loan), ಪ್ರಯಾಣ, ಶಿಕ್ಷಣ, ನವೀಕರಣ ಇತ್ಯಾದಿಗಳಂತಹ ಯಾವ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತೀರಿ ಎಂಬುದನ್ನು ನಮೂದಿಸಬಹುದು.
- ಇದಾದ ನಂತರ ನಿಮ್ಮ ಹುಟ್ಟಿದ ದಿನಾಂಕ, ಪ್ಯಾನ್ ಕಾರ್ಡ್ ಸಂಖ್ಯೆ (PAN CARD), ಇಮೇಲ್ ಐಡಿ (EMAIL ID) ವಿಳಾಸದಂತಹ (ADDRESS) ಹಾಗೂ ಇತರ ಮಾಹಿತಿಯನ್ನು ಇಲ್ಲಿ ಹಾಕಬೇಕಾಗುತ್ತದೆ.
- ಎಲ್ಲಾ ಕೇಳಿದ ಮಾಹಿತಿಯನ್ನು ನಮೂದಿಸಿದ ನಂತರ, ನೀವು ಷರತ್ತುಗಳ ಮೇಲೆ ಕ್ಲಿಕ್ ಮಾಡಿ ಮತ್ತು NExt ಬಟನ್ ಕ್ಲಿಕ್ ಮಾಡಿ.
- ಇದಾದ ಬಳಿಕ ನೀವು ಕೆಲಸ ಮಾಡುವ ಮಾಹಿತಿಯನ್ನು ಕೇಳಲಾಗುತ್ತದೆ.
- ಇಲ್ಲಿ ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಿ, ನಿಮ್ಮ ವಾರ್ಷಿಕ ಆದಾಯ ಎಷ್ಟು ಅಂದರೆ ಸಂಬಳದ ರೀತಿಯಲ್ಲಿ ನಿಮಗೆ ಎಷ್ಟು ಹಣ ಬರುತ್ತದೆ, ನಿಮಗೆ ಸಾಲ ಎಷ್ಟು ಬೇಕು ಹಾಗೂ ಕೊನೆಯದಾಗಿ ನಿಮ್ಮ ಉದ್ಯೋಗದ ವಿವರಗಳನ್ನು ಇಲ್ಲಿ ನಮೂದಿಸಬೇಕು.
- ಎಲ್ಲಾ ದಾಖಲೆಯಾಗಳನ್ನು ಎಂಟರ್ ಮಾಡಿ ಮಾಡಿದ ನಂತರ ನೀವು ಮುಂದುವರಿಸು ಬಟನ್ ಅನ್ನು ಕ್ಲಿಕ್ ಮಾಡಬೇಕು.
- ಇಷ್ಟು ಆದ ಬಳಿಕ Paytm ನಿಮ್ಮ CIBIL ಸ್ಕೋರ್ ಅನ್ನು ಪರಿಶೀಲನೆ ಮಾಡುತ್ತದೆ. ಇದಾದ ಬಳಿಕ ನಿಮಗೆ ಕ್ರೆಡಿಟ್ ಮಿತಿಯನ್ನು ನೀಡಲಾಗುತ್ತದೆ, ಆ ಹಣದ ಮೊತ್ತ ನಿಮಗೆ ಸರಿ ಅನಿಸಿದರೆ, ನೀವು ಮುಂದುವರಿಯಬಹುದು.
- ನಿಮಗೆ ಒಂದು ವೇಳೆಗೆ ಅಲ್ಲಿ ನೀಡುವ ಸಾಲದ ಮೊತ್ತ ಸರಿ ಅನಿಸಿದರೆ ನೀವು ಅಲ್ಲಿ ನೀವು ಷರತ್ತುಗಳ ನಿಯಮಗಳನ್ನು ಒಪ್ಪಿಕೊಳ್ಳಬೇಕು ಮತ್ತು Next ಕ್ಲಿಕ್ ಮಾಡಿ.
- ಕೊನೆಯದಾಗಿ Submit ಕ್ಲಿಕ್ ಮಾಡಿ, ನಿಮ್ಮ ಸಾಲವನ್ನು ಅನುಮೋದಿಸಿದ ತಕ್ಷಣ, ಸಾಲದ ಹಣವನ್ನು 5 ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.