Loan: ಹಬ್ಬದ ಸಮಯದಲ್ಲಿ ಲೋನ್ ನಲ್ಲಿ ಭರ್ಜರಿ ಆಫರ್- ಮೊಬೈಲ್ ನಲ್ಲಿ 5 ಲಕ್ಷದ ವರೆಗೂ ಸಾಲ ಪಡೆಯಿರಿ. ಬ್ಯಾಂಕ್ ಅನ್ನೋದೇ ಬೇಡ.

Here is the complete details of Paytm Business Loan- Below is the procedure to get a loan

Loan: ನಮಸ್ಕಾರ ಸ್ನೇಹಿತರೆ ವ್ಯಾಪಾರ ಮಾಡುವಂತಹ ಯಾವ ವ್ಯಕ್ತಿ ತಾನೇ ಲೋನ್ ಬೇಡ ಅಂತ ಹೇಳ್ತಾನೆ ನೀವೆ ಹೇಳಿ. ಅದರಲ್ಲೂ ವ್ಯಾಪಾರಿಗಳಿಗೆ ಆಗಾಗ ಬಿಸಿನೆಸ್ ಲೋನ್ ಬೇಕಾಗುತ್ತಲೇ ಇರುತ್ತದೆ. ಬ್ಯಾಂಕುಗಳು ಸಾಕಷ್ಟು ಪ್ರಕ್ರಿಯೆಗಳ ನಂತರವಷ್ಟೇ ಲೋನ್ ಗಳನ್ನು ನೀಡುತ್ತವೆ ಹೀಗಾಗಿ ಲೋನ್ ಗಳನ್ನು ತಮಗೆ ಬೇಕಾಗಿರುವಂತಹ ಸಮಯಕ್ಕೆ ಕೂಡಲೇ ಪಡೆದುಕೊಳ್ಳುವುದು ಅಷ್ಟೊಂದು ಸುಲಭ ವಾಗಿರುವುದಿಲ್ಲ. ವ್ಯಾಪಾರಿಗಳ ಈ ಕಷ್ಟವನ್ನು ದೂರ ಮಾಡಲು ನಾವು ಇವತ್ತಿನ ಲೇಖನಿಯಲ್ಲಿ ಒಂದು ಉಪಾಯವನ್ನು ಹೇಳಲು ಹೊರಟಿದ್ದೇವೆ.

ಲೋನ್ ಬೇಕು ಎಂದಾಕ್ಷಣ ಪ್ರತಿಯೊಂದು ಅಪ್ಲಿಕೇಶನ್ಗಳನ್ನು ಕೂಡ ನಂಬಲು ಸಾಧ್ಯವಿಲ್ಲ ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಂದು ಆಪ್ಲಿಕೇಶನ್ಗಳು ಗ್ರಾಹಕರಿಗೆ ಲೋನ್ ಕೊಡುವ ನೆಪದಲ್ಲಿ ಮೋಸ ಮಾಡುತ್ತಿರುವುದನ್ನು ಕೂಡ ನಾವು ಕಾಣಬಹುದಾಗಿದೆ. ಆದರೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಅಧಿಕೃತವಾಗಿ ಪರಿಗಣಿಸಿರುವಂತಹ ಲೋನ್ ಅಪ್ಲಿಕೇಶನ್ ಬಗ್ಗೆ ಮಾತನಾಡೋಕೆ ಹೊರಟಿರೋದು. ಇಲ್ಲಿ ನಿಮಗೆ ಮೂರು ಲಕ್ಷ ರೂಪಾಯಿಗಳ ವರೆಗೂ ಪರ್ಸನಲ್ ಲೋನ್(personal loan) ಹಾಗೂ 5 ಲಕ್ಷಗಳವರೆಗೂ ಕೂಡ ಬ್ಯುಸಿನೆಸ್ ಲೋನ್(business loan) ಪಡೆದುಕೊಳ್ಳಬಹುದಾಗಿದೆ. ಹೌದು ನಾವ್ ಮಾತನಾಡುತ್ತಿರುವುದು ಪೇಟಿಎಂ(Paytm) ಮೂಲಕ ಪಡೆದುಕೊಳ್ಳುವಂತಹ ಲೋನ್ ಬಗ್ಗೆ.

ಇದನ್ನು ಕೂಡ ಓದಿ: ಇನ್ನು ಮತ್ತಷ್ಟು ಹಬ್ಬ- ಲೋನ್ ವಿಭಾಗಕ್ಕೆ FlipKart ಎಂಟ್ರಿ- ಮೊಬೈಲ್ ನಲ್ಲಿ ಅರ್ಜಿ ಹಾಕಿದರೆ ಲೋನ್ ಕೊಡ್ತಾರೆ.

Paytm ಬ್ಯುನೆಸ್ ಲೋನ್ ಅಂದ್ರೆ ಏನು? what is Paytm Business Loan

ಯಾವುದೇ ಓಡಾಟ ನಡೆಸಿದ ಹಾಗೂ ಯಾವುದೇ ಜಂಜಾಟ ಇಲ್ಲದೆ ನೀವು Paytm ಮೂಲಕ ಪಡೆದುಕೊಳ್ಳಬಹುದಾದಂತಹ ಬಿಜಿನೆಸ್ ಲೋನ್ ಇದಾಗಿದೆ. ಈ ಮೂಲಕ ನೀವು ಅಪ್ಲೈ ಮಾಡಿದರೆ ಪ್ರೋಸೆಸ್ ಮುಗಿದ ನಂತರ ಕೂಡಲೇ ನಿಮ್ಮ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಒಂದು ವೇಳೆ ಈ ಸಂದರ್ಭದಲ್ಲಿ ನಿಮಗೆ ಯಾವುದೇ ಸಮಸ್ಯೆ ಕಂಡು ಬಂದರೂ ಕೂಡ ಕಸ್ಟಮರ್ ಕೇರ್ ಮೂಲಕ ನೀವು ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ.

Paytm ಬಿಜಿನೆಸ್ ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ಈ ವಿಚಾರಗಳನ್ನು ಪ್ರಮುಖವಾಗಿ ಗಮನಿಸಿ.

Paytm Business ಟ್ರಾನ್ಸಾಕ್ಷನ್ ಅನ್ನು ಇಲ್ಲಿ ಪ್ರಮುಖವಾಗಿ ಗಮನಿಸಲಾಗುತ್ತದೆ. ಈ ಆಧಾರದ ಮೇಲೆ ನಿಮಗೆ ಎಷ್ಟು ಹಣವನ್ನು ಬಿಜಿನೆಸ್ ಲೋನ್ ರೂಪದಲ್ಲಿ ನೀಡಲಾಗುತ್ತದೆ ಎಂಬುದಾಗಿ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಇಲ್ಲಿ 5 ಲಕ್ಷಗಳವರೆಗೂ ಕೂಡ ಹಣವನ್ನು ನೀಡುವಂತಹ ಅವಕಾಶ ಇರುತ್ತೆ. ಎಲ್ಲಕ್ಕಿಂತ ಪ್ರಮುಖವಾಗಿ ನೀವು ಪಡೆದುಕೊಳ್ಳುವಂತಹ ಲೋನಿನ ಮೇಲಿನ ಬಡ್ಡಿ ದರವನ್ನು ಪ್ರತಿದಿನ ಕಟ್ಟಬೇಕಾಗುತ್ತದೆ. ಉದಾಹರಣೆಗೆ 1 ಲಕ್ಷಗಳ ಮೇಲೆ ಎರಡು ಪ್ರತಿಶತ ಬಡ್ಡಿದರ ಅಂದ್ರೆ ಪ್ರತಿ ತಿಂಗಳು ನೀವು 2,000 ಕಟ್ಟಬೇಕಾಗುತ್ತದೆ. ಅಂದರೆ ಪ್ರತಿದಿನ 66.67 ರೂಪಾಯಿಗಳು ನಿಮ್ಮ ಖಾತೆಯಿಂದ ಬಡ್ಡಿ ದರದ ರೂಪದಲ್ಲಿ ಕಡಿತಗೊಳ್ಳುತ್ತದೆ. ಎಲ್ಲಕ್ಕಿಂತ ಮೊದಲಿಗೆ Paytm Business Loan ಅಪ್ಲಿಕೇಶನ್ ನಲ್ಲಿ ನಿಮ್ಮ ಖಾತೆ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

Paytm ನಿಂದ ಬಿಜಿನೆಸ್ ಲೋನ್ ಪಡೆದುಕೊಳ್ಳುವ ವಿಧಾನ- How to get a Loan from Paytm

ಮೊದಲಿಗೆ ನೀವು ಪ್ಲೇ ಸ್ಟೋರ್ ನಲ್ಲಿ ಅಧಿಕೃತ Paytm Business Loan ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳ ಬೇಕು ಹಾಗೂ ಖಾತೆಯನ್ನು ನಿರ್ಮಾಣ ಮಾಡಬೇಕು. ಅಪ್ಲಿಕೇಶನ್ ಅನ್ನು ಓಪನ್ ಮಾಡಿದ ನಂತರ ಅಲ್ಲಿರುವಂತಹ Loan And Credit ವಿಭಾಗದಲ್ಲಿ ನಿಮಗೆ ಬಿಜಿನೆಸ್ ಲೋನ್ ಪಡೆದುಕೊಳ್ಳುವುದಕ್ಕೆ ಆಪ್ಷನ್ ಸಿಗುತ್ತದೆ. ಅದಾದ ನಂತರ ನೀವು ಎಷ್ಟು ಲೋನ್ ಪಡೆದುಕೊಳ್ಳಲು ಅರ್ಹರಾಗಿದ್ದೀರಿ ಎಂಬುದನ್ನು ಕೂಡ ತಿಳಿಸಲಾಗುತ್ತದೆ. 5000 ದಿಂದ ಪ್ರಾರಂಭಿಸಿ 5 ಲಕ್ಷ ರೂಪಾಯಿಗಳ ವರೆಗೂ ಕೂಡ ನೀವು ಲೋನ್ ಹಣವನ್ನು ಪಡೆದುಕೊಳ್ಳಬಹುದು. ಎಲ್ಲಿ ಆಯ್ಕೆ ಮಾಡಿದ ನಂತರ ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳನ್ನು ನೀಡಿ ಹಾಗೂ ಮಾಹಿತಿಗಳನ್ನು ಒದಗಿಸಿ KYC ಅನ್ನು ಕೂಡ ಪೂರ್ಣಗೊಳಿಸಬೇಕಾಗಿರುತ್ತದೆ. ಎಲ್ಲ ಪ್ರಕ್ರಿಯೆಗಳನ್ನು ಪ್ರೋಸೆಸ್ ಮಾಡಿದ ನಂತರ ಅಪ್ರೂವ್ ಆದ ನಂತರ ನಿಮ್ಮ ಖಾತೆಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗುತ್ತದೆ.

Paytm Business Loan ಮೇಲೆ ಎಷ್ಟು ಬಡ್ಡಿ ದರವನ್ನು ಪಡೆದುಕೊಳ್ಳಲಾಗುತ್ತದೆ – Interest rate on Loan

ಪೇಟಿಎಂ ಮೂಲಕ ಪಡೆದುಕೊಳ್ಳಲಾಗುವಂತಹ ಬಿಸಿನೆಸ್ ಲೋನ್ ನ ಬಡಿದರೆ ಸಾಕಷ್ಟು ವಿಚಾರಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಎಲಕ್ಕಿಂತ ಪ್ರಮುಖವಾಗಿ ನಿರ್ಧಾರ ಆಗೋದು ನಿಮ್ಮ ಕ್ರೆಡಿಟ್ ಸ್ಕೋರ್(credit score) ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

Paytm Business Loan ಪಡೆದುಕೊಳ್ಳಲು ಬೇಕಾಗಿರುವ ಅಗತ್ಯವಾದ ಡಾಕ್ಯುಮೆಂಟ್ಗಳು.- Required documents to get a Loan

ಮೊದಲಿಗೆ ನಿಮ್ಮ ಗುರುತು ಪತ್ರದ ರೂಪದಲ್ಲಿ ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್ ರೀತಿಯ ಯಾವುದು ಡಾಕ್ಯುಮೆಂಟ್ಗಳು ಕೂಡ ನಡೆಯುತ್ತದೆ. ಎರಡನೆಯದಾಗಿ ಅಡ್ರೆಸ್ ಪ್ರೂಫ್ ಕೂಡ ಇದೇ ರೀತಿ ದಾಖಲೆಗಳ ಮೂಲಕ ನೀಡಬೇಕಾಗಿರುತ್ತದೆ. ಕಳೆದ ಕೆಲವು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ನಿಮ್ಮ ಸ್ಯಾಲರಿ ಸ್ಲಿಪ್ ಮೂಲಕ ಆದಾಯದ ಸರ್ಟಿಫಿಕೇಟ್ ಕೂಡ ನೀಡಬೇಕಾಗಿರುತ್ತದೆ. ನೀವು ಯಾವ ಬಿಸಿನೆಸ್ ಮಾಡುತ್ತಿದ್ದೀರಿ ಎನ್ನುವುದಕ್ಕೆ ಅದಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ನೀಡಬೇಕಾಗುತ್ತದೆ. ಇನ್ಕಮ್ ಟ್ಯಾಕ್ಸ್ ರಿಟರ್ನ್ ಫಾರ್ಮ್ 16ರ ಅವಶ್ಯಕತೆ ಕೂಡ ಇರುತ್ತದೆ. KYC ಮಾಡಿಸುವುದಕ್ಕಾಗಿ ಕೊನೆಗೆ ಪಾನ್ ಕಾರ್ಡ್(PAN Card ) ಅವಶ್ಯಕತೆ ಇರುತ್ತದೆ. ಇವಿಷ್ಟು ಡಾಕ್ಯೂಮೆಂಟ್ಗಳ ಮೂಲಕ ನೀವು ಸುಲಭ ರೂಪದಲ್ಲಿ ಲೋನ್ ಪಡೆದುಕೊಳ್ಳಬಹುದು.