Personal Loan: ಹಬ್ಬದ ಸಮಯದಲ್ಲಿ ಸಿಹಿ ಸುದ್ದಿ ಕೊಟ್ಟ ಕೋಟಕ್ ಬ್ಯಾಂಕ್. ವೈಯಕ್ತಿಕ ಸಾಲ ಮತ್ತಷ್ಟು ಸುಲಭ.
ಕೋಟಕ್ ಮಹಿಂದ್ರ ಬ್ಯಾಂಕ್ ಪರ್ಸನಲ್ ಲೋನ್ ವಿಶೇಷತೆಗಳು | Top reasons to get Personal Loan from Kotak Mahindra Bank.
Personal Loan: ನಮಸ್ಕಾರ ಸ್ನೇಹಿತರೇ ನಾವೆಲ್ಲರೂ ಕೂಡ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆಗೆ ಲಿಂಕ್ ಆಗಿದ್ದೇವೆ. ಕೆಲವೊಮ್ಮೆ ನಾವು ನಮ್ಮ ಅಗತ್ಯತೆಗಳಿಗಾಗಿ ಬ್ಯಾಂಕುಗಳಿಂದ ಪರ್ಸನಲ್ ಲೋನ್(personal loan) ಸೇರಿದಂತೆ ಬೇರೆ ಬೇರೆ ರೀತಿಯ ಸಾಲವನ್ನು ಕೂಡ ಪಡೆದುಕೊಳ್ಳುತ್ತೇವೆ. ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಕೋಟಕ್ ಮಹೀಂದ್ರಾ ಬ್ಯಾಂಕ್(Kotak Mahindra Bank) ನೀಡುವ ಫ್ರೀ ಅಪ್ರೂವ್ ಪರ್ಸನಲ್ ಲೋನ್ ಬಗ್ಗೆ. ಒಂದು ವೇಳೆ ನೀವು ಕೂಡ ಇಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವ ಆಸಕ್ತಿಯನ್ನು ಹೊಂದಿದ್ದರೆ ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.
ಸ್ನೇಹಿತರೆ, ದಿನೇ ದಿನೇ ಲೋನ್ ಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಅದೇ ಕಾರಣಕ್ಕೆ ಇದೀಗ ದೇಶದ ಪ್ರತಿಷ್ಠಿತ ಸಂಸ್ಥೆಯಾದ FlipKart ಇದೀಗ ಲೋನ್ ಕೊಡಲು ಮುಂದಾಗಿದೆ. ಒಂದು ವೇಳೆ ದಿಡೀರ್ ಎಂದು ನಿಮಗೆ ಹಣದ ಅವಶ್ಯಕತೆ ಇದ್ದರೇ, ಈ ಲೇಖನದ ಕೊನೆಯಲ್ಲಿ ಈ FlipKart ಸಂಸ್ಥೆಯ ಲೋನ್ ಬಗ್ಗೆ ಮಾಹಿತಿ ನೀಡಲಾಗಿದ್ದು, ಮೊಬೈಲ್ ಇಂದ ಅರ್ಜಿ ಹಾಕಿದರೆ ಸಾಕು ನಿಮಗೆ ಲೋನ್ ಸಿಗುತ್ತದೆ.
ಕೋಟಕ್ ಮಹಿಂದ್ರ ಬ್ಯಾಂಕ್ ಪರ್ಸನಲ್ ಲೋನ್ ವಿಶೇಷತೆಗಳು | Top reasons to get Personal Loan from Kotak Mahindra Bank.
ಹೆಚ್ಚು ಡಾಕ್ಯುಮೆಂಟ್ಗಳು ಬೇಕಾಗಿಲ್ಲ: ಕೆಲವೇ ಕೆಲವು ನಿಯಮಿತ ಡಾಕ್ಯುಮೆಂಟ್ಗಳು ನಿಮ್ಮ ಬಳಿ ಇದ್ದರೆ ಸಾಕು, ಕೋಟಕ್ ಮಹೀಂದ್ರ ಬ್ಯಾಂಕ್ ನಲ್ಲಿ ನೀವು ಸುಲಭ ರೂಪದಲ್ಲಿ ಪರ್ಸನಲ್ ಲೋನ್ ಅನ್ನು ಕ್ಷಣಮಾತ್ರದಲ್ಲಿ ಪಡೆದುಕೊಳ್ಳಬಹುದಾಗಿದೆ.
ವೇಗವಾದ ಫಂಡ್ ಟ್ರಾನ್ಸ್ಫರ್: ನಿಮಗೆ ಅನುಮೋದನೆ ಆಗಿರುವಂತಹ ಸಾಲದ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಅಪ್ರೂವ್ ಆದ ಕೆಲವೇ ಕ್ಷಣಗಳಲ್ಲಿ ಕೋಟಕ್ ಮಹಿಂದ್ರ ಬ್ಯಾಂಕ್ ನಿಮ್ಮ ಖಾತೆಗೆ ಹಣವನ್ನು ಕ್ಷಣಮಾತ್ರದಲ್ಲಿ ವರ್ಗಾವಣೆ ಮಾಡುವ ಕೆಲಸವನ್ನು ಮಾಡುತ್ತದೆ.
ಕಠಿಣವಾದ ಪರಿಶೀಲನೆ ಇಲ್ಲ; ಬೇರೆ ಬ್ಯಾಂಕುಗಳಲ್ಲಿ ಪರ್ಸನಲ್ ನೀಡುವಾಗ ಸಾಕಷ್ಟು ಬ್ಯಾಗ್ರೌಂಡ್ ಚೆಕ್ ಮಾಡುತ್ತಾರೆ ಯಾಕೆಂದರೆ ಇದೊಂದು ಅಸುರಕ್ಷಿತ ಲೋನ್ ಆಗಿದ್ದು ಈ ಸಂದರ್ಭದಲ್ಲಿ ಹಣವನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟು ಪ್ರಮುಖವಾಗಿರುತ್ತದೆ. ಆದರೆ ಕೋಟಕ್ ಮಹೀಂದ್ರಾ ಬ್ಯಾಂಕ್ ಪರ್ಸನಲ್ ಲೋನ್ ವಿಚಾರದಲ್ಲಿ ಇದಕ್ಕೆ ತದ್ವಿರುದ್ಧವಾಗಿದೆ.
ಸಾಲದ ಬಡ್ಡಿ: ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಪ್ರಿ ಅಪ್ರೂವ್ ಆಗಿರುವಂತಹ ಪರ್ಸನಲ್ ಲೋನ್ ಮೇಲೆ ಕೇವಲ 10.99 ಪ್ರತಿಶತ ಬಡ್ಡಿ ದರವನ್ನು ವಿಧಿಸುವುದರ ಮೂಲಕ ನಿಮಗೆ ಸುಲಭ ರೀತಿಯಲ್ಲಿ EMI ಅನ್ನು ಕಟ್ಟುವುದಕ್ಕೆ ಸಾಧ್ಯವಾಗುವ ರೀತಿಯಲ್ಲಿ ಮಾಡಲಾಗುತ್ತದೆ.
ಸಾಲ ಕಟ್ಟುವಂತಹ ಅವಧಿ: ಒಮ್ಮೆ ಸಾಲವನ್ನು ಪಡೆದುಕೊಂಡ ನಂತರ ನೀವು ಇಲ್ಲಿ 60 ತಿಂಗಳ ಒಳಗೆ ಸಾಲವನ್ನು ಕಟ್ಟುವಂತಹ ಅವಧಿಯ ಆಯ್ಕೆಯನ್ನು ಕೂಡ ಮಾಡಿಕೊಳ್ಳಬಹುದು. ಈ ಮೂಲಕ ನಿಮಗೆ ಸಾಲ ಕಟ್ಟುವುದಕ್ಕೆ ಕೂಡ ಸಾಕಷ್ಟು ಸಮಯಗಳ ಅವಧಿ ಸಿಗುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯುವುದಕ್ಕೆ ಇರುವ ಅರ್ಹತೆಗಳು | Eligibility to get a Personal Loan From Kotak Mahindra Bank.
ಇಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವವರು ಬ್ಯಾಂಕಿನ ಗ್ರಾಹಕರಾಗಿರಬೇಕು. ಡೀಫಾಲ್ಟರ್ ಆಗಿರಬಾರದು ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್(credit score) ಕೂಡ ಚೆನ್ನಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಇರುವಂತಹ ನಿಮ್ಮ ಖಾತೆಯಲ್ಲಿ ಪ್ರತಿ ತಿಂಗಳ ಮೇಂಟೇನ್ ಮಾಡಬೇಕಾಗಿರುವಂತಹ ಮಿನಿಮಮ್ ಬ್ಯಾಲೆನ್ಸ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ?? How to apply for Personal Loan from Kotak
ಮೊದಲಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ಆನ್ಲೈನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಓಪನ್ ಮಾಡಬೇಕು ಹಾಗೂ Pre approved personal loan ಗಾಗಿ ಅರ್ಜಿ ಸಲ್ಲಿಸಬೇಕು. ನೀವು ಪಡೆದುಕೊಳ್ಳಬೇಕಾಗಿರುವ ಲೋನ್ ಹಣ ಮತ್ತು ಅದನ್ನು ಪಾವತಿಸಬೇಕಾಗಿರುವಂತಹ ಸಮಯದ ವಿವರಗಳನ್ನು ಕೂಡ ಪರಿಶೀಲಿಸಬೇಕಾಗುತ್ತದೆ. ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಇದನ್ನು ಪರಿಶೀಲಿಸಿದ ನಂತರ ನೇರವಾಗಿ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತದೆ. ಈ ಮೂಲಕ ನೀವು ಸುಲಭವಾಗಿ ಪರ್ಸನಲ್ ಅನ್ನು ಕೋಟಕ್ ಮಹಿಂದ್ರ ಬ್ಯಾಂಕ್ ಮೂಲಕ ಪಡೆದುಕೊಳ್ಳಬಹುದು.