Personal Loan: ಇಡೀ ದೇಶದಲ್ಲಿ ಅತಿ ಕಡಿಮೆ ಬಡ್ಡಿ ದರಕ್ಕೆ ಹಾಗೂ ಅತಿ ಸುಲಭವಾಗಿ ಲೋನ್ ನೀಡುವ ಟಾಪ್ 5 ಬ್ಯಾಂಕ್ ಗಳು.

ಕಡಿಮೆ ಬಡ್ಡಿಯಲ್ಲಿ ಪರ್ಸನಲ್ ಲೋನ್ ನೀಡ್ತಾ ಇರುವಂತಹ 5 ಪ್ರಮುಖ ಬ್ಯಾಂಕುಗಳು | Top 5 Banks with Low interest Rate on Personal Loan

Personal Loan: ನಮಸ್ಕಾರ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಅತ್ಯಂತ ಆಕಸ್ಮಿಕವಾಗಿ ಹಣದ ಅವಶ್ಯಕತೆಯನ್ನು ಹೊಂದಿರುವಂತಹ ಪರಿಸ್ಥಿತಿಯನ್ನು ಕಾಣುತ್ತಾರೆ. ಈ ಪರ್ಸನಲ್ ಲೋನ್(personal Loan) ಅನ್ನುವಂತಹ ಕ್ಯಾಟಗರಿ ಕೂಡ ಇದೇ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಅರ್ಜೆಂಟ್ ಆಗಿರುವಂತಹ ಸಂದರ್ಭದಲ್ಲಿ ಈ ಪರ್ಸನಲ್ ಲೋನ್ಗಳ ಅಗತ್ಯತೆ ಹೆಚ್ಚಾಗಿರುತ್ತದೆ.

ಬ್ಯಾಂಕಿಂಗ್ ಭಾಷೆಯಲ್ಲಿ ಇಂತಹ ಪರ್ಸನಲ್ ಲೋನ್ ಗಳನ್ನು ಅಸುರಕ್ಷಿತ ಲೋನ್(Unsecured Loan) ಎಂಬುದಾಗಿ ಕರೆಯಲಾಗುತ್ತದೆ. ಇದೇ ಕಾರಣಕ್ಕಾಗಿ ನಿಮ್ಮ ಕ್ರೆಡಿಟ್ ಸ್ಕೋರ್(Credit Score) ಸ್ಕೋರ್ ಚೆನ್ನಾಗಿದ್ರೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ನೀವು ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲದೆ ಹೋದಲ್ಲಿ ಆಗ ನೀವು ಸಾಮಾನ್ಯ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ನೀಡಬೇಕಾಗುತ್ತದೆ.

ಸ್ನೇಹಿತರೆ, ದಿನೇ ದಿನೇ ಲೋನ್ ಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಅದೇ ಕಾರಣಕ್ಕೆ ಇದೀಗ ದೇಶದ ಪ್ರತಿಷ್ಠಿತ ಸಂಸ್ಥೆಯಾದ FlipKart ಇದೀಗ ಲೋನ್ ಕೊಡಲು ಮುಂದಾಗಿದೆ. ಒಂದು ವೇಳೆ ದಿಡೀರ್ ಎಂದು ನಿಮಗೆ ಹಣದ ಅವಶ್ಯಕತೆ ಇದ್ದರೇ, ಈ ಲೇಖನದ ಕೊನೆಯಲ್ಲಿ ಈ FlipKart ಸಂಸ್ಥೆಯ ಲೋನ್ ಬಗ್ಗೆ ಮಾಹಿತಿ ನೀಡಲಾಗಿದ್ದು, ಮೊಬೈಲ್ ಇಂದ ಅರ್ಜಿ ಹಾಕಿದರೆ ಸಾಕು ನಿಮಗೆ ಲೋನ್ ಸಿಗುತ್ತದೆ.

ಪರ್ಸನಲ್ ಲೋನ್ ಮೇಲೆ ಬಡ್ಡಿದರ ವನ್ನು ಯಾವ ರೀತಿಯಲ್ಲಿ ನಿರ್ಧರಿಸಲಾಗುತ್ತದೆ. How banks decides Loan interest rate.

ಪರ್ಸನಲ್ ಲೋನ್ ಮೇಲೆ ಬಡ್ಡಿ ದರವನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಲೆಕ್ಕಾಚಾರ ಹಾಕುವಂತಹ ಪ್ರಕ್ರಿಯೆ ಬೇರೆ ಬೇರೆ ಆಗಿರುತ್ತದೆ. ಆದರೆ ಬಹುತೇಕ ಎಲ್ಲಾ ಬ್ಯಾಂಕುಗಳು ಕೂಡ ಸಾಮಾನ್ಯವಾಗಿ ಹೆಚ್ಚು ಅವಧಿಗೆ ಪರ್ಸನಲ್ ಲೋನ್ ಅನ್ನು ಪಡೆದುಕೊಂಡಷ್ಟು ಅದರ ಬಡ್ಡಿದರವನ್ನು ಕೂಡ ಹೆಚ್ಚಿಗೆ ಮಾಡುತ್ತದೆ. ಇದೇ ಕಾರಣಕ್ಕಾಗಿ ಕಡಿಮೆ ಸಮಯಗಳಿಗೆ ನೀವು ಪರ್ಸನಲ್ ಲೋನ್ ಪಡೆದುಕೊಂಡರೆ ಕಡಿಮೆ ಬಡ್ಡಿಯನ್ನು ಕಟ್ಟಬೇಕಾಗುತ್ತದೆ ಹಾಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಪರ್ಸನಲ್ ಲೋನ್ ಅನ್ನು ನೀವು ತೀರಿಸಬಹುದಾಗಿದೆ.

ಕ್ರೆಡಿಟ್ ಸ್ಕೋರ್ ಪ್ರಾಮುಖ್ಯತೆ | Importance of Credit Score

ಕೇವಲ ಪರ್ಸನಲ್ ಲೋನ್ ಮಾತ್ರವಲ್ಲ ಯಾವುದೇ ರೀತಿಯ ಲೋನ್ ಆಗಿದ್ರು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಮಾತ್ರ ನಿಮಗೆ ಉತ್ತಮವಾದ ಬಡ್ಡಿ ದರದಲ್ಲಿ ಹಾಗೂ ವೇಗವಾಗಿ ಲೋನ್ ಸಿಗುತ್ತದೆ. ಈ ಕಾರಣಕ್ಕಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇಟ್ಟುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ. ಅಂದರೆ ಈ ಹಿಂದೆ ಪಡೆದು ಕೊಂಡಿರುವ ಸಾಲವನ್ನು ನೀವು ಸರಿಯಾದ ರೀತಿಯಲ್ಲಿ ಕಟ್ಟಿರಬೇಕು ಈ ಸಂದರ್ಭದಲ್ಲಿ ಮಾತ್ರ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರುತ್ತೆ.

750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಎನ್ನುವುದು ಉತ್ತಮ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಪ್ರತಿಯೊಂದು ಫೈನಾನ್ಸಿಯಲ್ ಸಂಸ್ಥೆಗಳು ಹಾಗೂ ಬ್ಯಾಂಕುಗಳು ಪ್ರಮುಖವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡುತ್ತಾರೆ. ಇದಾದ ನಂತರವಷ್ಟೇ ನಿಮಗೆ ಲೋನ್ ನೀಡಬೇಕಾ ಬೇಡ್ವಾ ಹಾಗೂ ಎಷ್ಟು ಬಡ್ಡಿ ದರದಲ್ಲಿ ಲೋನ್ ನೀಡಬೇಕು ಎನ್ನುವಂತಹ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.

ಕಡಿಮೆ ಬಡ್ಡಿಯಲ್ಲಿ ಪರ್ಸನಲ್ ಲೋನ್ ನೀಡ್ತಾ ಇರುವಂತಹ 5 ಪ್ರಮುಖ ಬ್ಯಾಂಕುಗಳು | Top 5 Banks with Low interest Rate on Personal Loan

Bank of Maharashtra Personal Loan: ಬ್ಯಾಂಕ್ ಆಫ್ ಮಹಾರಾಷ್ಟ್ರ ಕಡೆಯಿಂದ ನಿಮಗೆ 84 ತಿಂಗಳ ಅವಧಿಗೆ 20 ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಅನ್ನು ನೀಡಲಾಗುತ್ತದೆ. ಈ ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಬಡ್ಡಿದರ 10 ಪ್ರತಿಶತದಿಂದ ಪ್ರಾರಂಭವಾಗುತ್ತದೆ.

Bank of india: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೂಡ ನಿಮಗೆ 84 ತಿಂಗಳುಗಳ ಅವಧಿಗೆ 20 ಲಕ್ಷ ರೂಪಾಯಿಗಳ ವರೆಗೆ ಪರ್ಸನಲ್ ಲೋನ್ ಸಾಲವನ್ನು ನೀಡಲಾಗುತ್ತದೆ. ಇನ್ನು ಈ ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಮೇಲೆ 10.25 ಪ್ರತಿಶತ ಬಡ್ಡಿಯಿಂದ ಪ್ರಾರಂಭವಾಗುತ್ತದೆ.

IDFC first bank: ಈ ಬ್ಯಾಂಕಿನಲ್ಲಿ ಆರು ತಿಂಗಳಿನಿಂದ ಪ್ರಾರಂಭಿಸಿ 60 ತಿಂಗಳವರೆಗೂ ಕೂಡ ಒಂದು ಕೋಟಿ ರೂಪಾಯಿವರೆಗೂ ಕೂಡ ಪರ್ಸನಲ್ ನಿಮಗೆ ಉತ್ತಮವಾದ ಕ್ರೆಡಿಟ್ ಸ್ಕೋರ್ ಇದ್ರೆ ಸಿಗುತ್ತದೆ. ಎಲ್ಲಿ ಬಡ್ಡಿದರ 10.49 ಪ್ರತಿಶತದಿಂದ ಪ್ರಾರಂಭವಾಗುತ್ತದೆ.

Kotak Mahindra Bank: ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ 12 ತಿಂಗಳಿನಿಂದ ಪ್ರಾರಂಭಿಸಿ 60 ತಿಂಗಳವರೆಗೂ ಕೂಡ ಪರ್ಸನಲ್ ಲೋನ್ ಅವಧಿಯನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಪರ್ಸನಲ್ ಲೋನ್ ಮೇಲೆ ಬಡ್ಡಿದರ 10.99 ಪ್ರತಿಶತದಿಂದ ಪ್ರಾರಂಭವಾಗುತ್ತದೆ.

Federal Bank: 48 ತಿಂಗಳುಗಳವರೆಗೆ 25 ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದು. ಪರ್ಸನಲ್ ಲೋನ್ ಮೇಲೆ ಬಡ್ಡಿದರ 11.49 ಪ್ರತಿಶತದಿಂದ ಪ್ರಾರಂಭವಾಗುತ್ತದೆ.

Personal Loan: ಇನ್ನು ಮತ್ತಷ್ಟು ಹಬ್ಬ- ಲೋನ್ ವಿಭಾಗಕ್ಕೆ FlipKart ಎಂಟ್ರಿ- ಮೊಬೈಲ್ ನಲ್ಲಿ ಅರ್ಜಿ ಹಾಕಿದರೆ ಲೋನ್ ಕೊಡ್ತಾರೆ.