Jupiter Transit 2023: ನಾಳೆಯಿಂದ ಕಷ್ಟ ಶುರು- ಗುರುಗ್ರಹದ ವಕ್ರ ಚಾಲನೆ- ನಾಲ್ಕು ರಾಶಿಯವರಿಗೆ ಕಷ್ಟವೋ ಕಷ್ಟ. ಚಿಕ್ಕ ಪರಿಹಾರದಿಂದ ಬಚಾವಾಗಿ.
Jupiter Transit 2023 effects on zodiac signs explained in Kannada
Jupiter Transit 2023 ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಗುರು ಗ್ರಹವನ್ನು ಜ್ಞಾನ ಹಾಗೂ ವಿದ್ಯೆಯ ಅಧಿಪತಿ ಎಂಬುದಾಗಿ ಕರೆಯಲಾಗುತ್ತದೆ. ಎಲ್ಲರ ಜಾತಕದಲ್ಲಿ ಕೂಡ ಗುರುಗ್ರಹದ ಬಲ ಇರಬೇಕು ಎಂಬುದಾಗಿ ಪ್ರತಿಯೊಬ್ಬರೂ ಕೂಡ ಅಪೇಕ್ಷಿಸುತ್ತಾರೆ. ಆದರೆ ಗುರು ದುರ್ಬಲವಾದಾಗ ಕೆಲವೊಂದು ರಾಶಿಗಳು ದುಷ್ಪರಿಣಾಮಗಳನ್ನು ಎದುರಿಸಬೇಕಾದಂತಹ ಅಗತ್ಯ ಕಂಡುಬರುತ್ತದೆ. ಅದೇ ರೀತಿಯಲ್ಲಿ ಇದೇ ಸೆಪ್ಟೆಂಬರ್ ನಾಲ್ಕರಿಂದ ಗುರುವಿನ ವಕ್ರ ಚಲನೆ ಪ್ರಾರಂಭವಾಗಲಿದ್ದು ಗುರು ದುರ್ಬಲ ನಾಗಲಿದ್ದಾನೆ. ಈ ಕಾರಣದಿಂದಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವೆಲ್ಲ ರಾಶಿಗಳು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.
Jupiter Transit 2023 effects on zodiac signs explained in Kannada
ಮೇಷ ರಾಶಿ(Aries) ಈ ಸಂದರ್ಭದಲ್ಲಿ ಮೇಷ ರಾಶಿಯವರ ಜೀವನದಲ್ಲಿ ಸಾಕಷ್ಟು ಸವಾಲುಗಳು ಎದ್ದು ಬರಲಿದ್ದು ಜೀವನದಲ್ಲಿ ಏನು ಮಾಡಬೇಕು ಎನ್ನುವಂತಹ ಗೊಂದಲ ಉಂಟಾಗುತ್ತದೆ. ಇಂದಿನಿಂದಲೇ ನಿಮ್ಮ ಹಣದ ಹೆಚ್ಚಿನ ಖರ್ಚಿನ ಮೂಲಗಳನ್ನು ಕಡಿತಗೊಳಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ತಂದೆ ತಾಯಿಯರ ಆರೋಗ್ಯ ಕೇಳುವಂತಹ ಸಾಧ್ಯತೆ ಇದ್ದು ಆ ಸಂದರ್ಭದಲ್ಲಿ ಹಣ ಖರ್ಚು ಮಾಡುವಾಗ ನಿಮ್ಮ ಆರ್ಥಿಕ ಸಂಕಷ್ಟ ತಡೆಯಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳು ನಿಮ್ಮನ್ನು ಪರೀಕ್ಷಿಸಲು ಸಿದ್ಧವಾಗಿ ಬರಲಿವೆ.

ವೃಷಭ ರಾಶಿ(Taurus) ಗುರು ದುರ್ಬಲವಾಗುವುದರ ಜೊತೆಗೆ ವೃಷಭ ರಾಶಿಯವರಿಗೆ ಈ ಸಂದರ್ಭದಲ್ಲಿ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಸೋಲಾಗುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಲಿವರ್ ಸಂಬಂಧಿತ ಆರೋಗ್ಯದ ವಿಚಾರದಲ್ಲಿ ಹಿನ್ನಡೆ ಉಂಟಾಗುವಂತಹ ಸಾಧ್ಯತೆ ಹೆಚ್ಚಿದ್ದು ಆರೋಗ್ಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾದ ಗಮನವನ್ನು ನೀಡುವುದು ಅತ್ಯಂತ ಅವಶ್ಯಕವಾಗಿದೆ. ಕುಟುಂಬದಿಂದಲೂ ಕೂಡ ಕೆಲವು ಸಮಸ್ಯೆಗಳು ನಿಮಗೆ ಎದುರಾಗಬಹುದಾದಂತಹ ಸಾಧ್ಯತೆ ಹೆಚ್ಚಾಗಿದ್ದು ಈ ಸಂದರ್ಭದಲ್ಲಿ ನೀವು ನಿಮ್ಮನ್ನು ಗಟ್ಟಿಗೊಳಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.
Jupiter Transit 2023 horoscope predictions in Kannada
ಕರ್ಕ ರಾಶಿ(Cancer) ಪ್ರತಿಯೊಬ್ಬರ ಜೀವನದಲ್ಲಿ ಕೂಡ ಕೆಲಸ ಅತ್ಯಂತ ಪ್ರಮುಖವಾದ ವಿಚಾರವಾಗಿರುತ್ತದೆ ಆದರೆ ನಿಮಗೆ ಈ ಸಂದರ್ಭದಲ್ಲಿ ಕೆಲಸದಿಂದಲೇ ತುಂಬಾ ಒತ್ತಡ ಹಾಗೂ ಸಮಸ್ಯೆಗಳು ಉಂಟಾಗುತ್ತವೆ. ನಿಮ್ಮ ಆರೋಗ್ಯ ಸಮಸ್ಯೆ ಸೇರಿದಂತೆ ನಿಮ್ಮ ಕುಟುಂಬಸ್ಥರ ಆರೋಗ್ಯ ಸಮಸ್ಯೆ ಕೂಡ ಈ ಸಂದರ್ಭದಲ್ಲಿ ಉಲ್ಬಣ ಆಗುವ ಸಾಧ್ಯತೆ ಹೆಚ್ಚಾಗಿದೆ. ಸಿಂಹರ ರಾಶಿ(Leo) ಕೆಲಸದ ಜವಾಬ್ದಾರಿಯಿಂದಾಗಿ ದೂರ ಪ್ರಯಾಣ ಮಾಡಬೇಕಾದಂತಹ ಅವಶ್ಯಕತೆ ಉಂಟಾಗುತ್ತದೆ ಆದರೆ ಇದು ನಿಮಗೆ ಇನ್ನಷ್ಟು ಸಮಸ್ಯೆಯನ್ನೇ ಹೆಚ್ಚಾಗಿ ತರಲಿದೆ. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೂಡ ಬೇರೆಯವರ ಜೊತೆಗೆ ಅನಗತ್ಯ ಮಾತುಕತೆಗೆ ಹೋಗಬೇಡಿ ಪರಿಸ್ಥಿತಿ ಉಲ್ಬಣಿಸಬಹುದಾದ ಸಾಧ್ಯತೆ ಕೂಡ ಇದೆ.
ಇಷ್ಟೆಲ್ಲಾ ಇರುವಾಗ ಪರಿಹಾರ ಏನು ಎಂಬುದಾಗಿ ನೀವು ಕೇಳಬಹುದು ಬನ್ನಿ ಅದಕ್ಕೆ ಕೂಡ ಪರಿಹಾರವನ್ನು ಪಡೆಯೋಣ. ಚಿನ್ನದ ಆಭರಣ(Golden Jewelry) ತೊಟ್ಟುಕೊಳ್ಳುವುದು, ಎಲ್ಲಿಗೆ ಹೋಗಬೇಕಾದರೂ ಕೂಡ ಹಳದಿ ಕರ್ಚಿಫ್ ನಿಮ್ಮ ಬಳಿ ಇಟ್ಟುಕೊಳ್ಳಿ, ಗುರು ಬೀಜ ಮಂತ್ರ ಪಠಣೆ ಮಾಡಬೇಕಾಗುತ್ತದೆ, ನಿರ್ಗತಿಕರಿಗೆ ದಾನ ಹಾಗೂ ಕಾಗೆಗಳಿಗೆ ಆಹಾರ ನೀಡಬೇಕು. ಗುರುವಾರದ ದಿನ ಅರಶಿನ ಬಣ್ಣದ ಬೆಲ್ಲ ಅಥವಾ ಬೆಲೆದಿಂದ ಮಾಡಿದಂತಹ ಸಿಹಿಯನ್ನು ಹಂಚುವುದು ಕೂಡ ನಿಮಗೆ ಸಮಸ್ಯೆಯಿಂದ ದೂರ ಉಳಿಯುವಂತೆ ಮಾಡುತ್ತದೆ.
ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ. ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope
ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits
Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.
Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.