Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.
How to apply for Shakti Scheme Smart Card explained in Kannada language.
Shakti Scheme Smart Card ನಮಸ್ಕಾರ ಸ್ನೇಹಿತರೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲಿಂದ ಅವರ ಆಡಳಿತಕ್ಕಿಂತ ಅವರ ಭಾಗ್ಯಗಳದ್ದೇ ಸಾಕಷ್ಟು ಸದ್ದು ಕೇಳಿ ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಅವರು ಜೂನ್ 11ರಿಂದ ರಾಜ್ಯದಲ್ಲಿ ಜಾರಿಗೆ ತಂದಿರುವಂತಹ ಶಕ್ತಿ ಯೋಜನೆಯ(Shakti Yojane) ಬಗ್ಗೆ ಇವತ್ತಿನ ಲೇಖನಿಯಲ್ಲಿ ವಿಶೇಷವಾಗಿ ಮಾತನಾಡಲು ಹೊರಟಿದ್ದೇವೆ.
ಕರ್ನಾಟಕ ರಾಜ್ಯದ ಮಹಿಳೆಯರಿಗೆ KSRTC ಹಾಗೂ ಅದರ ಅಂಗ ಸಂಸ್ಥೆಗಳ ಸರ್ಕಾರಿ ಬಸ್ಸುಗಳಲ್ಲಿ ರಾಜ್ಯದ ಒಳಗೆ ಉಚಿತ ಪ್ರಯಾಣ ಮಾಡುವಂತಹ ಅವಕಾಶವನ್ನು ಸರ್ಕಾರ ನೀಡಿತ್ತು. ಬಸ್ಸಿನ ಒಳಗೆ 50% ಪುರುಷರಿಗೆ ಸೀಟಿಂಗ್ ನಿಯಮ ಇದ್ರೂ ಕೂಡ ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಮಹಿಳೆಯರೇ ಬಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ ಈ ಸಂದರ್ಭದಲ್ಲಿ ಮತ್ತೊಂದು ಸೂಚನೆ ಕೂಡ ನೀಡಿದ್ದು ಸೇವಾ ಸಿಂಧು ಪೋರ್ಟಲ್(Seva Sindhu Portal) ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಸ್ಮಾರ್ಟ್ ಕಾರ್ಡ್ ಅನ್ನು ಮುಂದಿನ ಮೂರು ತಿಂಗಳ ಒಳಗಾಗಿ ಪಡೆದುಕೊಳ್ಳುವಂತೆ ಸೂಚಿಸಿತ್ತು.
ಕೇವಲ ಮಹಿಳೆಯರು ಮಾತ್ರವಲ್ಲದೆ ಮಹಿಳೆಯರ ಜೊತೆಯಲ್ಲಿ ತೃತೀಯ ಲಿಂಗಗಳಿಗೆ ಕೂಡ ಈ ಯೋಜನೆಯಲ್ಲಿ ಅವಕಾಶವನ್ನು ನೀಡಲಾಗಿದೆ. ಈಗಾಗಲೇ ಸರ್ಕಾರದ ಮೂಲಗಳು ತಿಳಿಸಿರುವ ಪ್ರಕಾರ ತಿಂಗಳ ಆರಂಭದಲ್ಲಿ ಶಕ್ತಿ ಯೋಜನೆಗೆ ( Shakti Scheme Smart Card) ಸಾರಿಗೆ ನಿಗಮಗಳು ನೀಡಿರುವಂತಹ ಟಿಕೆಟ್ ಹಣವನ್ನು ನಾವು ಪೂರ್ತಿಯಾಗಿ ಪಾವತಿಸುತ್ತಿದ್ದೇವೆ ಎಂಬುದಾಗಿ ಕೂಡ ವಿವರಗಳು ತಿಳಿಸಿ.
ಈ ಸಂದರ್ಭದಲ್ಲಿ ಸರ್ಕಾರಿ ಮೂಲಗಳು ಹೇಳಿರುವ ಪ್ರಕಾರ ಯಾವುದೇ ಆರ್ಥಿಕ ಹೊರ ಕೂಡ ಈ ಯೋಜನೆಯ ಸಲುವಾಗಿ ಇರುವುದಿಲ್ಲ ಎಂಬುದಾಗಿ ಕೂಡ ಸ್ಪಷ್ಟಪಡಿಸಿದೆ. ಶಕ್ತಿ ಯೋಜನೆಯ ಕಾರಣದಿಂದಾಗಿ ಪ್ರತಿದಿನ 41.8 ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರತಿದಿನ ಉಚಿತ ಸಾರಿಗೆ(Free Bus Service) ಸೇವೆಯನ್ನು ಪಡೆದುಕೊಳ್ಳುತ್ತಿರುವುದು ದಾಖಲೆಗಳ ಮೂಲಕ ತಿಳಿದು ಬಂದಿದೆ. ಪ್ರತಿ ವರ್ಷ ಈ ಯೋಜನೆಯಿಂದಾಗಿ 4,051.56 ಕೋಟಿ ರೂಪಾಯಿ ಖರ್ಚು ರಾಜ್ಯ ಸರ್ಕಾರಕ್ಕೆ ಬಂದೊಗಲಿದೆ ಎಂಬುದಾಗಿ ಕೂಡ ತಿಳಿದುಬಂದಿರುವ ಸತ್ಯವಾಗಿದೆ.
ರಾಜ್ಯ ಸರ್ಕಾರ ಹೇಳಿರುವ ಪ್ರಕಾರ ಈ ಯೋಜನೆಯನ್ನು ಮಹಿಳಾ ಸಬಲೀಕರಣದ (Shakti Scheme Smart Card) ದೃಷ್ಟಿಯಲ್ಲಿ ಒಂದು ಹೆಜ್ಜೆ ಇಡುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಉಚಿತ ಬಸ್ ಪ್ರಯಾಣವನ್ನು ನೀಡುವುದರಿಂದಾಗಿ ಹೆಚ್ಚಿನ ಮಹಿಳಾ ಉದ್ಯೋಗಿಗಳು ಕೆಲಸಕ್ಕೆ ಸೇರಲು ಪ್ರೇರೇಪಣೆ ಆಗುತ್ತದೆ ಎಂಬುದು ಸರ್ಕಾರದ ಭಾವನೆ. ಹೆಚ್ಚಿನ ಪ್ರಯಾಣವನ್ನು ಮಾಡಬೇಕಾಗಿರುವಂತಹ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವ ಮೂಲಕ ಅವರ ಪ್ರಯಾಣದ ಹಣವನ್ನು ಉಳಿತಾಯ ಮಾಡಿ ಅದನ್ನು ಬೇರೆ ಕಡೆಗೆ ವಿನಯೋಗಿಸುವಂತಹ ಆಯ್ಕೆಯನ್ನು ಕೂಡ ನೀಡಬಹುದಾಗಿದೆ.
ಯಾವೆಲ್ಲ ಸಾರಿಗೆ ಸಂಸ್ಥೆಗಳು ಈ ಉಚಿತ ಬಸ್ ಪ್ರಯಾಣವನ್ನು ಈಗ ನೀಡುತ್ತಿವೆ ಎಂಬುದನ್ನು ನೋಡೋದಾದ್ರೆ BMTC, KSRTC, NWKRTC ಹಾಗೂ KKRTC. ರಾಜಹಂಸ, ಐರಾವತ, ಅಂಬಾರಿಗಳಂತಹ ಲಕ್ಷುರಿಯಸ್ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂಬುದನ್ನು ಕೂಡ ನೀವು ಅರ್ಥಮಾಡಿಕೊಳ್ಳಬೇಕಾಗಿದೆ. ಈಗ ಪ್ರಮುಖವಾಗಿ ಎಲ್ಲರೂ ಕೂಡ ಕೇಳುತ್ತಿರುವ ಪ್ರಶ್ನೆ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ ಎಂದು ಬನ್ನಿ ಅದರ ಬಗ್ಗೆ ಕೂಡ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮೊದಲಿಗೆ ನೀವು https://sevasindhuservices.karnataka.gov.in/ ಈ ವೆಬ್ ಸೈಟ್ ಗೆ ಲಾಗಿನ್ ಆಗಬೇಕು ನಂತರ ನೊಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿ ಲಾಗಿನ್ ಆದ ನಂತರ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್(Shakti Scheme Smart Card) ಗೆ ಅರ್ಜಿಯನ್ನು ಸಲ್ಲಿಸಬೇಕು. ಇದಾದ ನಂತರ ನಿಮಗೆ ವೆಬ್ಸೈಟ್ನಲ್ಲಿ ಹೊಸ ಪೇಜ್ ಪ್ರದರ್ಶನವಾಗುತ್ತದೆ ಅಲ್ಲಿ ಕೇಳಲಾಗುವಂತಹ ಎಲ್ಲಾ ಮಾಹಿತಿಗಳನ್ನು ನೀವು ಸಲ್ಲಿಸಬೇಕಾಗುತ್ತದೆ. ಅದಾದ ಮೇಲೆ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿದ್ರೆ ಸಾಕು. ನೀವು ಸ್ಮಾರ್ಟ್ ಕಾರ್ಡ್ ಅನ್ನು ಪಡೆಯುವುದಕ್ಕೆ ಅರ್ಹರಾಗಿರುತ್ತೀರಿ.
ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ. ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ?
Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.