Karnataka Ganga Kalyana Scheme 2023- ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ.

Karnataka Ganga Kalyana Scheme process and details explained in Kannada- here is how you can apply for Karnataka Ganga Kalyana Scheme.

Karnataka Ganga Kalyana Scheme ನಮಸ್ಕಾರ ಸ್ನೇಹಿತರೇ ನೀರು ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಮೂಲಭೂತವಾಗಿ ಬೇಕಾಗಿರುವಂತಹ ಒಂದು ವಸ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ನೀರನ್ನು ಗೃಹ ಬಳಕೆಗೆ ನಾವು ಪಡೆದುಕೊಳ್ಳಬೇಕು ಎಂದರೆ ಅಂತರ್ಜಾಲದಿಂದ ಆ ನೀರನ್ನು ಪಂಪ್ ಮಾಡಬೇಕು ಎಂದರೆ ಬೋರ್ವೆಲ್(Borewell) ಅನ್ನು ಕೊರೆಸಲೇಬೇಕಾಗುತ್ತದೆ. ಇನ್ನು ಸಾಮಾನ್ಯವಾಗಿ ಈ ಕೆಲಸವನ್ನು ಮಾಡುವುದಕ್ಕೆ ಹೋಗುವುದಾದರೆ ನಿಮ್ಮ ಕೈಯಿಂದ ಸಾಕಷ್ಟು ಹಣ ಖರ್ಚಾಗುತ್ತದೆ ಹಾಗೂ ಅಷ್ಟೊಂದು ಹಣ ನಿಮ್ಮ ಕೈಯಲ್ಲಿ ಇಲ್ಲದೆ ಕೂಡ ಇರಬಹುದು. ಇದಕ್ಕಾಗಿ ನಿಮಗೆ ಇವತ್ತೊಂದು ಉಪಾಯವನ್ನು ಹೇಳಲು ಹೊರಟಿದ್ದೇವೆ.

Karnataka Ganga Kalyana Scheme process and details explained in Kannada- ಯಾರ್ಯಾರು ಯೋಜನೆಯ ಲಾಭ ಪಡೆಯಬಹುದು.

ಹೌದು ಸರಿಯಾಗಿ ಕೇಳಿದ್ದೀರಾ ಇದನ್ನು ಸಾಮಾನ್ಯವಾಗಿ ಎಲ್ಲರಿಗೂ ಮಾಡಿಕೊಡುವಂತಹ ಯೋಜನೆ ಅಲ್ಲ ಬದಲಾಗಿ ಹಳ್ಳಿ ಪ್ರದೇಶದಲ್ಲಿ ಇರುವಂತಹ ಅಲ್ಪಸಂಖ್ಯಾತ ವರ್ಗದ ಸಣ್ಣ ಪ್ರಮಾಣದ ರೈತರಿಗೆ ಬೋರ್ವೆಲ್ ಕೊರೆದು ಪಂಪ್ ಸೆಟ್ ಹಾಕಿಸಿಕೊಟ್ಟು ವಿದ್ಯುತ್ ಅನ್ನು ಕೂಡ ಕಲ್ಪಿಸಿ ಕೊಡುವಂತಹ ಯೋಜನೆ ಇದಾಗಿದೆ. ಹೌದು ನಾವು ಮಾತಾಡ್ತಿರೋದು ಗಂಗಾ ಕಲ್ಯಾಣ ಯೋಜನೆಯ(Karnataka Ganga Kalyana Scheme 2023) ಬಗ್ಗೆ. ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಈ ರೀತಿ ವೈಯಕ್ತಿಕ ಬೋರ್ವೆಲ್ ಅನ್ನು ತೋಡಿಸಿಕೊಳ್ಳಲು 4, ಹಾಗೂ ಉಳಿದ ಜಿಲ್ಲೆಗಳಿಗೆ ಮೂರು ಲಕ್ಷ ಅನುದಾನವನ್ನು ನೀಡುವ ಯೋಜನೆ ಇದಾಗಿದೆ.

Ganga Kalyana Scheme Eligibility – ಈ ಯೋಜನೆಯ ಲಾಭಪಡೆಯಲು ಬೇಕಾಗಿರುವ ಅರ್ಹತೆಗಳು.

ಈ ಯೋಜನೆಗೆ ಫಲಾನುಭವಿಗಳಾಗಲು ಅವರು ಅಲ್ಪಸಂಖ್ಯಾತ ವರ್ಗದವರಾಗಿರಬೇಕು. 1ರಿಂದ 1.20 ಎಕರೆ ಜಮೀನು ಅವರ ಬಳಿ ಇರಬೇಕು. ಸಣ್ಣ ಹಿಡುವಳಿ ರೈತರರು(Small Farmers) ಆಗಿರಬೇಕು ಹಾಗೂ ಕರ್ನಾಟಕದವರೇ ಆಗಿರಬೇಕು. ವಾರ್ಷಿಕ ಆದಾಯ 96 ಸಾವಿರ ರೂಪಾಯಿಗಳಿಗಿಂತ ಹೆಚ್ಚಿರಬಾರದು. ವಯಸ್ಸಿನ ಮಿತಿ ಕೂಡ 18 ವರ್ಷದಿಂದ 55 ವರ್ಷ ಆಗಿರುತ್ತದೆ. ಇವಿಷ್ಟು ಕರ್ನಾಟಕ ಗಂಗಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಇರಬೇಕಾಗಿರುವಂತಹ ಅರ್ಹತೆಗಳಾಗಿವೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಬೇಕಾಗಿರುವಂತಹ ದಾಖಲೆ ಪತ್ರಗಳೇನು ಎಂಬುದನ್ನು ಕೂಡ ತಿಳಿದುಕೊಳ್ಳೋಣ.

ಗಂಗಾ ಕಲ್ಯಾಣ ಯೋಜನೆ(Ganga Kalyana Yojane ಅಡಿಯಲ್ಲಿ ಕೊಳವೆಬಾವಿಗಾಗಿ ಅರ್ಜಿ ಸಲ್ಲಿಸಲು ನಿಮ್ಮ ಬಳಿ ಇರಬೇಕಾಗಿರುವಂತಹ ದಾಖಲೆ ಪತ್ರಗಳು ಅಥವಾ ಬೇರೆ ವಿಚಾರಗಳ ಬಗ್ಗೆ ತಿಳಿಯುವುದಾದರೆ ನೀವು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದೀರಿ ಎನ್ನುವ ನಿಮ್ಮ ಜಾತಿ ದೃಢೀಕರಣ ಪತ್ರ ಬೇಕು. ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್, RTC ಜೆರಾಕ್ಸ್ ಪ್ರತಿ, ನೀವು ಸಣ್ಣ ಹಿಡುವಳಿದಾರ ರೈತರು ಎನ್ನುವುದನ್ನು ಸಾಬೀತುಪಡಿಸುವಂತಹ ಪ್ರಮಾಣ ಪತ್ರ, ಭೂ ಕಂದಾಯ ರಿಸೀಪ್ಟ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಸ್ವಯಂ ಘೋಷಣೆ ಪತ್ರ ಕೂಡ ಬೇಕಾಗುತ್ತದೆ.

Follow Us on Google News
Follow Us on Google News
Click Here to Join Whatsapp Group
Click Here to Join Whatsapp Group
Click Here to Join Telegram Group
Click Here to Join Telegram Group

ಇಲ್ಲಿ ಮೇಲೆ ಹೇಳಿರುವಂತಹ ಎಲ್ಲಾ ಅರ್ಹತೆಗಳಿಗೂ ನೀವು ಅರ್ಹರಾಗಿದ್ದರೆ ನೀವು ಆಫ್ಲೈನ್ ಹಾಗೂ ಆನ್ಲೈನ್ ಎರಡು ಕಡೆಗಳಲ್ಲಿ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. kmdc.karnataka.gov.in ವೆಬ್ ಸೈಟ್ ಗೆ ಹೋಗುವ ಮೂಲಕ ನೀವು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿಯನ್ನು ತೋಡಿಸುವುದಕ್ಕೆ ಅರ್ಜಿಯನ್ನು ಸಲ್ಲಿಸಲು ಸೆಪ್ಟೆಂಬರ್ 25 ಕೊನೆಯ ದಿನಾಂಕವಾಗಿದೆ. ಹೀಗಾಗಿ ವೆಬ್ಸೈಟ್ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಯಾವ ರೀತಿ ಮುಂದುವರೆಯಬಹುದು ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ.  ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope

ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits


Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.

Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.