Citroen EV Car: ಮತ್ತೆ ಸಂಚಲನ ಸೃಷ್ಟಿ ಮಾಡಿದ ಬಜೆಟ್ ಈವಿ – ಬಿಡುಗಡೆಯಾದ 10 ಗಂಟೆ ಗಳಲ್ಲಿ ಸೋಲ್ಡ್ ಔಟ್. ವಿಶೇಷತೆ ಬೆಲೆ ಸಂಪೂರ್ಣ ಡೀಟೇಲ್ಸ್
Citroen EV Car: ಮತ್ತೆ ಸಂಚಲನ ಸೃಷ್ಟಿ ಮಾಡಿದ ಬಜೆಟ್ ಈವಿ – ಬಿಡುಗಡೆಯಾದ 10 ಗಂಟೆ ಗಳಲ್ಲಿ ಸೋಲ್ಡ್ ಔಟ್. ವಿಶೇಷತೆ ಬೆಲೆ ಸಂಪೂರ್ಣ ಡೀಟೇಲ್ಸ್
Citroen EV Car: ನಮಸ್ಕಾರ ಸ್ನೇಹಿತರೇ ವಿಶ್ವದಲ್ಲಿ ಬಹುತೇಕ ಮಾರುಕಟ್ಟೆಗಳಲ್ಲಿ ಎಲೆಕ್ಟ್ರಾನಿಕ್ (Ev vehicles) ವಾಹನಗಳನ್ನು ಜನರು ಬಹಳ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ, ಒಂದು ಕಡೆ ಪರಿಸರ ಸಂರಕ್ಷಣೆ (Save environment) ಮಾಡುವ ಈ ವಾಹನಗಳು ಗ್ರಾಹಕರ ಜೇಬನ್ನು (Saves money) ಕೂಡ ಸಂರಕ್ಷಣೆ ಮಾಡುತ್ತವೆ. ಹೌದು ಪೆಟ್ರೋಲ್ ಹಾಗೂ ಡೀಸೆಲ್ ಆಧಾರಿತ ವಾಹನಗಳಿಗೆ ಹೋಲಿಕೆ ಮಾಡಿ ನೋಡಿದರೆ ಹೇಗೆ ಹೆಚ್ಚು ಖರ್ಚಾದರೂ ಕೂಡ ಕನಿಷ್ಠ 50 % ರಿಂದ 60 % ರಷ್ಟು ಹಣ ಉಳಿಸಬಹುದಾಗಿದೆ. ಹೀಗೆ ಪರಿಸರ ಹಾಗೂ ಹಣ ಉಳಿಸುವ ಎರಡು ಸಾಧನಗಳಾಗಿ ಎಲೆಕ್ಟ್ರಾನಿಕ್ ವಾಹನಗಳು ಬಳಕೆಯಾಗುತ್ತಿವೆ.
ಇನ್ನು ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಆಧಾರಿತ ಕಂಪನಿಗಳಿಗೆ ಹೋಲಿಸಿಕೊಂಡರೆ ಎಲೆಕ್ಟ್ರಾನಿಕ್ ಆಧಾರಿತ ಕಾರುಗಳನ್ನು (Ev cars) ಹಾಗೂ ಬೈಕುಗಳನ್ನು (EV bikes) ತಯಾರು ಮಾಡುವ ಕಂಪನಿಗಳು ಸಾಕಷ್ಟು ಹುಟ್ಟುಕೊಂಡಿದ್ದು ಯಾವ ಕಾರುಗಳನ್ನು ಹಾಗೂ ಬೈಕುಗಳನ್ನು ಖರೀದಿ ಮಾಡಬೇಕು ಎಂಬುದು ಗ್ರಾಹಕರಿಗೆ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಇದನ್ನು ಓದಿ: ನೀವು ಸುಲಭವಾಗಿ ಐದು ಲಕ್ಷ ಆಯುಷ್ಮನ್ ವಿಮೆಯನ್ನು ಪಡೆಯುವುದು ಹೇಗೆ ಗೊತ್ತೇ? ಇದರಿಂದ ನಿಮಗೆ ಆಗುವ ಲಾಭವೇನು ಗೊತ್ತೇ?
ಇಂತಹ ಸಮಯದಲ್ಲಿ ಕೆಲವೊಂದು ಕಾರುಗಳು ಮಾತ್ರ ಬಹಳ ಸುಲಭವಾಗಿ ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದು ಅದರಲ್ಲಿಯೂ ಸಿಟ್ರಾನ್ (Citroen cars) ಕಂಪನಿಯ ಕಾರುಗಳನ್ನು ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇದೀಗ ಈ ಹಿಂದೆ ಆದಂತೆ ಬುಕಿಂಗ್ ಅನ್ನು ಓಪನ್ ಮಾಡಿದ ಕೇವಲ ಹತ್ತೇ ಹತ್ತು ಗಂಟೆಗಳಲ್ಲಿ ಎಲ್ಲಾ ಕಾರುಗಳು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿದ್ದು ಈ ಕುರಿತು ಕಂಪನಿ ಬಹಳ ಹೆಮ್ಮೆಯಿಂದ ಲೆಕ್ಕಾಚಾರಗಳನ್ನು ಹಂಚಿಕೊಂಡಿದೆ
ಕೆಲವೇ ಕೆಲವು ದೇಶಗಳಲ್ಲಿ ಬಿಡುಗಡೆಯಾಗಿರುವ ಸಿಟ್ರನ್ ಕಂಪನಿ ಮೈ ಅಮಿ ಬಗ್ಗಿ (Citroen-my-ami-buggy) ಕಾರು ಮುಂದಿನ ದಿನಗಳಲ್ಲಿ ಮತ್ತಷ್ಟು ದೇಶಗಳಲ್ಲಿ ಬಿಡುಗಡೆ ಮಾಡಬಹುದಾದ ಆಲೋಚನೆಯಲ್ಲಿ ಇದೆ, ಜನರು ಹೀಗೆ ಮುಗಿಬಿದ್ದು ಖರೀದಿ ಮಾಡುತ್ತಿರುವ ಈ ಕಾರಿನ (Citroen EV Car) ವಿಶೇಷತೆಗಳನ್ನು ನೋಡುವುದಾದರೆ ಮೊದಲನೆಯದಾಗಿ 5.4kWh ಹೊಂದಿರುವ ಈ ಕಾರು ಒಮ್ಮೆ ನೀವು ಚಾರ್ಜ್ ಮಾಡಿದರೆ 75km (Mileage) ಚಲಿಸಬಹುದಾಗಿದೆ.
ಇನ್ನು ಇದರ ಗರಿಷ್ಠ ವೇಗ 45km (Maximum Speed) ಆಗಿದ್ದು ಇದು ಇತರ ಕಾರುಗಳಿಗೆ ಹೋಲಿಕೆ ಮಾಡಿದರೆ ವೇಗ ಮತ್ತು ಮೈಲೇಜ್ ಎರಡು ಕಡಿಮೆಯಾದರೂ ಕೂಡ ಜನ ಖರೀದಿ ಮಾಡುತ್ತಿರುವುದು ಒಂದೇ ಒಂದು ಕಾರಣಕ್ಕೆ ಅದುವೇ ಇದರ ಗಾತ್ರ. ಹೌದು ಸ್ನೇಹಿತರೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಇದರ ಗಾತ್ರ ಬಹಳ ಕಿರಿದಾಗಿದ್ದು ಇದು ಹೆಚ್ಚಿನ ಬಳಕೆಗೆ ಬರುತ್ತದೆ ಹಾಗೂ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಕೊಳ್ಳದೆ ಇರಲು ಇದೊಂದು ಉತ್ತಮ ಕಾರ್ ಆಗಿದೆ. ಇದನ್ನು ಓದಿ: ತಾನು ಕಂಡ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿದ ರಾಹುಲ್- ಕೊಹ್ಲಿ, ಧೋನಿ, ರೋಹಿತ್ ಇವರಲ್ಲಿ ಬೆಸ್ಟ್ ಯಾರು ಅಂತೇ ಗೊತ್ತೇ?? ನಿಯತ್ತು ಇಲ್ಲವೇ ಎಂದ ಫ್ಯಾನ್ಸ್.
ಇನ್ನು ಇಷ್ಟೇ ಅಲ್ಲದೆ ಹೇಗಿದ್ದರೂ ನೀವು ನಗರ ಪ್ರದೇಶಗಳಲ್ಲಿ 75km ಗಳಿಗಿಂತ ಹೆಚ್ಚು ಪ್ರಯಾಣ ಮಾಡುವುದಿಲ್ಲ ಅದರಲ್ಲಿಯೂ ಕೆಲಸಕ್ಕೆ ಹೋಗುವ ಯಾವುದೇ ಉದ್ಯೋಗಿಗಳು ಇದಕ್ಕಿಂತ ಹೆಚ್ಚು ಪ್ರವಾಸ ಮಾಡುವ ಕಾರಣ ಇರುವುದಿಲ್ಲ, ಇನ್ನು ಅಷ್ಟೇ ಅಲ್ಲದೆ ಇದರ (Citroen EV Car) ವೇಗ ಕೂಡ ನಗರ ಪ್ರದೇಶಕ್ಕೆ ಸೂಕ್ತವಾಗಿದ್ದು ಜನರು ಈ ಕಾರಣಗಳಿಗಾಗಿ ಇದನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಹಾಗೆಂದು ಇದರ ಬೆಲೆ ಕೂಡ ಕಡಿಮೆ ಇಲ್ಲ ಭಾರತೀಯ ರೂಪಾಯಿಗಳಿಗೆ (Indian Rupee) ಹೋಲಿಕೆ ಮಾಡಿದರೆ ಬರೋಬ್ಬರಿ 7 ಲಕ್ಷದಿಂದ 9.3 ಲಕ್ಷದವರೆಗೂ ಈ ಕಾರಿನ ಬೆಲೆ ಇದ್ದು ಫ್ರಾನ್ಸ್, ಇಟಲಿ, ಸ್ಪೇನ್, ಬೆಲ್ಜಿಯಂ ಪೋರ್ಚುಗಲ್, ಯುಕೆ ಮತ್ತು ಗ್ರೀಸ್ ದೇಶಗಳಲ್ಲಿ ಮಾತ್ರ ಈ ಕಾರ್ ಗಳು ಬಿಡುಗಡೆಯಾಗಿದೆ ಹಾಗೂ ಬಿಡುಗಡೆಯಾದ ಕಡೆಯಲ್ಲ ಈ ಕಾರುಗಳನ್ನು ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ