Electricity Bill: ಈ ತಿಂಗಳು ನೀವು ಕರೆಂಟ್ ಬಿಲ್ ಕಟ್ಟಬೇಕೇ?? ಬೇಡವೇ?? ಇಲ್ಲಿದೆ ನೋಡಿ ಸರಿಯಾದ ಉತ್ತರ. ಅದು ಯಾರು ಕಟ್ಟಲೇಬೇಕು ಗೊತ್ತೇ??

Electricity Bill: ಈ ತಿಂಗಳು ನೀವು ಕರೆಂಟ್ ಬಿಲ್ ಕಟ್ಟಬೇಕೇ?? ಬೇಡವೇ?? ಇಲ್ಲಿದೆ ನೋಡಿ ಸರಿಯಾದ ಉತ್ತರ. ಅದು ಯಾರು ಕಟ್ಟಲೇಬೇಕು ಗೊತ್ತೇ??

Electricity Bill: ಸ್ನೇಹಿತರೆ ಕಾಂಗ್ರೆಸ್ ಪಕ್ಷವು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಮೇಲೆ ರಾಜ್ಯದ ಪ್ರತಿಯೊಬ್ಬರು ಕೂಡ ಕರೆಂಟ್ ಬಿಲ್ ಕಟ್ಟ ಬೇಕಾದಂತಹ ಪರಿಸ್ಥಿತಿ ಇರುವುದಿಲ್ಲ, ಹೆಂಗಸರಿಗೆಲ್ಲರಿಗೂ ಬಿಎಂಟಿಸಿ ಬಸ್ನಲ್ಲಿ ಪ್ರಯಾಣದ ಸೌಕರ್ಯಗಳನ್ನು ಉಚಿತವಾಗಿ ಕಲ್ಪಿಸಿ ಕೊಡುತ್ತೇವೆ ಎಂಬ ಎಲ್ಲಾ ಆಶ್ವಾಸನೆಗಳನ್ನು ನೀಡಿದರು.

ಅದರಂತೆ ಆಶ್ವಾಸನೆಗಳನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಇಂದು ಅಧಿಕಾರಕ್ಕೆ ತಂದಿದ್ದಾರೆ. ಆದರಿಗ ಕಾಂಗ್ರೆಸ್ ಪಕ್ಷ ನೀಡಿದ್ದ ಆಶ್ವಾಸನೆಯ ಕುರಿತು ಅದಾಗಲೇ ಪ್ರಶ್ನೆ ಮಾಡಿರುವಂತಹ ಜನಸಾಮಾನ್ಯರು ಈ ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಬೇಕಾ? ಬೇಡ್ವಾ? ಎಂದು ಮಂತ್ರಿಗಳ ಮುಂದೆ ತಮ್ಮ ಬೇಡಿಕೆಯನ್ನು ತೆರೆದಿಟ್ಟಿದ್ದಾರೆ. ಈ ಕುರಿತು ಮಾತನಾಡಿದಂತಹ ಸಿದ್ದರಾಮಯ್ಯನವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದಾರೆ. ಇದನ್ನು ಓದಿ: ಪುತ್ತೂರಿನಲ್ಲಿ ಬಿಜೆಪಿ ಗೆ ಶಾಕ್ ಕೊಟ್ಟು , ಕಾಂಗ್ರೆಸ್ ಗೆಲ್ಲುವಂತೆ ಮಾಡಿದ ಅರುಣ್ ಪುತ್ತಿಲ್ಲ ರವರಿಂದ ನೇರವಾಗಿ ನಳಿನ್ ಕುಮಾರ್ ಕಟೀಲ್ ಗೆ ಶಾಕ್ ಕೊಡಲು ತಯಾರಿ?? ಏನಾಗುತ್ತಿದೆ ಗೊತ್ತೇ??

 ಹೌದು ಗೆಳೆಯರೇ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತ (Electricity Bill) ಎಂದು ಘೋಷಣೆ ಮಾಡಲಾಗಿತ್ತು. ಇದರ ಜೊತೆಗೆ ಮನೆಯೊಡತಿಗೆ ₹2,000 ಹಣ, ನಿರುದ್ಯೋಗಿ ಪದವೀಧರರಿಗೆ ಕೆಲಸದ ಸೌಕರ್ಯ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪಾಸ್ ಹಾಗು ವರ್ಷಕ್ಕೆ 5 ಸಿಲಿಂಡರ್ಗಳನ್ನು ಉಚಿತವಾಗಿ ನೀಡುತ್ತೇನೆಂದು ಕಾಂಗ್ರೆಸ್ ಪಕ್ಷ ಘೋಷಿಸಿಕೊಂಡಿದ್ದರು. ಅದರಿಂದ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇನೆ ಎಂದು ಹೇಳಿದ್ದ ಕಾಂಗ್ರೆಸ್ ಪಕ್ಷವು ಈ ಒಂದು ಭಾಗ್ಯವನ್ನು ಕಲ್ಪಿಸಿಕೊಡಲು ಸಿದ್ಧವಿದೆ.

 ಆದರೆ ಜನಸಾಮಾನ್ಯರು ನಿಯಮಗಳ ಪ್ರಯೋಜನ ಪಡೆಯಬೇಕೆಂದರೆ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಇನ್ನು ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ (Electricity Bill) ಅನ್ನು ಉಚಿತವಾಗಿ ನೀಡಿದರೆ ಮನೆಯ ಯಜಮಾನಿಗೆ ಬರೋಬ್ಬರಿ 2000 ಹಣ ನೀಡುವುದಾಗಿಯೂ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ಇದು ಯಾವ ವರ್ಗದವರಿಗೆ ಅನುಸರಿಸುತ್ತದೆ ಎಂಬುದನ್ನು ಎಲ್ಲಿಯೂ ಸ್ಪಷ್ಟೀಕರಿಸಿಲ್ಲ. ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ನಲ್ಲಿ ಅಮರ ಜ್ಯೋತಿ ಯೋಜನೆ ಅಡಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ 75 ಯೂನಿಟ್ ಉಚಿತ ಎಂದು ಘೋಷಣೆ ಮಾಡಿದ್ದರು. ಇದನ್ನು ಓದಿ: ಈತನೇ ನೋಡಿ ಭಾರತ ತಂಡಕ್ಕೆ ಹೊಸ ಎಂಟ್ರಿ- ಎಂದ ಹರ್ಭಜನ್. ಅಚ್ಚರಿಯಾಗಿ ಆಯ್ಕೆ ಮಾಡಿದ ಯುವ ಆಟಗಾರ ಯಾರು ಗೊತ್ತೇ??

ಅದರಂತೆ ಜೂನ್ ಒಂದರಿಂದ ಯಾರು ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಡಿಕೆ ಶಿವಕುಮಾರ್ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ. ಹೌದು ಗೆಳೆಯರೇ ಮಳವಳ್ಳಿಯಲ್ಲಿ ಚುನಾವಣಾ ಬಹಿರಂಗ ಪ್ರಚಾರದಲ್ಲಿ ಮಾತನಾಡಿದಂತಹ ಅವರು ಮೇ 15ನೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆನಂತರ ಜೂನ್ ಒಂದನೇ ತಾರೀಖಿನಿಂದ ಯಾರು ಕರೆಂಟ್ ಬಿಲ್ಲನ್ನು ಕಟ್ಟುವಂತಿಲ್ಲ ಎಂದು ಡಿಕೆಶಿ ಹೇಳಿದರು.

 ಇದೀಗ ಈ ಕುರಿತು ಮಾತುಕತೆ ನಡೆಸುತ್ತಿರುವಂತಹ ಸಿದ್ದು ಮತ್ತು ಡಿಕೆಶಿ ಮೊದಲ ಕ್ಯಾಬಿನೆಟ್ ಮೀಟಿಂಗ್ ನಡೆಸಿದ ನಂತರ ಉಚಿತ ಭರವಸೆಗಳನ್ನು ಈಡೇರಿಸಲು ನಿರ್ಧಾರ ಮಾಡಿದ್ದಾರೆ. ಇವರು ಮಾತಿಗೆ ತಕ್ಕಂತೆ ನಡೆದುಕೊಂಡರೆ ಜೂನ್ ಅಥವಾ ಜುಲೈನಿಂದ ವಿದ್ಯುತ್ ಬಿಲ್ ಕಟ್ಟುವುದು ಸಂಪೂರ್ಣ ಬಂದ್ ಆಗಲಿದೆ. ಆದರೆ ನೀವು ಈ ತಿಂಗಳ ಕರೆಂಟ್ ಬಿಲ್ (Electricity Bill) ಕಟ್ಟಲೇಬೇಕು ಹಾಗೂ ಬಡವರ ಲೆಕ್ಕಾಚಾರ ಬದಲಾಗಲಿದ್ದು, BPL ಕಾರ್ಡ್ ಇರುವವರಿಗೆ ಮಾತ್ರ ಅದರಲ್ಲಿ ಅಲ್ಪ ಸಂಖ್ಯಾತರಿಗೆ ಈ ಯೋಜನೆಯ ಹೆಚ್ಚು ಲಾಭಗಳು ಸಿಗಲಿದೆ ಎಂಬುದು ತಿಳಿದು ಬಂದಿದೆ. ಎಂದಿನಂತೆ, ತೆರಿಗೆ ಕಟ್ಟುವವರಿಗೆ ಯಾವುದೇ ಉಚಿತ ಇರುವುದಿಲ್ಲ, ನೀವು ಕೇವಲ ತೆರಿಗೆ ಕಟ್ಟಬೇಕು ಅಷ್ಟೇ, ಅದೇ ಹಣದಿಂದ ಬೇರೊಬ್ಬರಿಗೆ ಇಷ್ಟೆಲ್ಲ ಬಿಟ್ಟಿ ಭಾಗ್ಯ.