Duniya Vijay: ಸದಾ ಸಿದ್ದರಾಮಯ್ಯ ರವರ ಪರ ನಿಲ್ಲುವ ದುನಿಯಾ ವಿಜಯ್- ಎಲೆಕ್ಷನ್ ಫಲಿತಾಂಶ ನೋಡಿ ಹೇಳಿದ್ದೇನು ಗೊತ್ತೇ?? ಇಷ್ಟು ದಿವಸ ಆದ್ಮೇಲೆ ಹೇಳಿದ್ದೇನು ಗೊತ್ತೆ?

Duniya Vijay: ಸದಾ ಸಿದ್ದರಾಮಯ್ಯ ರವರ ಪರ ನಿಲ್ಲುವ ದುನಿಯಾ ವಿಜಯ್- ಎಲೆಕ್ಷನ್ ಫಲಿತಾಂಶ ನೋಡಿ ಹೇಳಿದ್ದೇನು ಗೊತ್ತೇ?? ಇಷ್ಟು ದಿವಸ ಆದ್ಮೇಲೆ ಹೇಳಿದ್ದೇನು ಗೊತ್ತೆ?

Duniya Vijay: ಸ್ನೇಹಿತರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ನೂರರಷ್ಟು ಪರಿಶ್ರಮವನ್ನು ಹಾಕಿ, ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿದರು. ಅದರಲ್ಲಿಯೂ ಸ್ಟಾರ್ ಸೆಲೆಬ್ರಿಟಿಗಳನ್ನು ಅಖಾಡ ಇಳಿಸಿಕೊಂಡು ತಮ್ಮ ತಮ್ಮ ಪಕ್ಷದ ಹಾಗೂ ಅಭ್ಯರ್ಥಿಗಳ ಪರ ಪ್ರಚಾರ ಮಾಡಿಸುತ್ತಾ ಪ್ರತಿಯೊಬ್ಬ ನಾಯಕರುಗಳು ಒಳ್ಳೊಳ್ಳೆ ಸ್ಟ್ಯಾಟರ್ಜಿಗಳನ್ನು ಅನುಸರಿಸಿದರು.

ಆದರೆ ಯಾವ ಸ್ಟ್ರಾಟರ್ಜಿಯೂ ಕೂಡ ಬಿಜೆಪಿ ಪಕ್ಷಕ್ಕೆ ವರ್ಕ್ ಆಗಲಿಲ್ಲ, ಹೌದು ಗೆಳೆಯರೇ ಕಾಂಗ್ರೆಸ್ ಪಕ್ಷದ ಭರ್ಜರಿ ಬಹುಮತಕ್ಕೆ ಬಿಜೆಪಿ ತತ್ತರಿಸಿ ಹೋಯಿತು ಎಂದರೆ ತಪ್ಪಾಗಲಾರದು. ಇನ್ನು ಸಾಕಷ್ಟು ನಟರು ಕಾಂಗ್ರೆಸ್ ಪರವಾಗಿಯೂ ಅಖಾಡಕ್ಕಿಳಿದು ಪ್ರಚಾರ ಮಾಡಿದರು. ಅದರಲ್ಲಿ ದುನಿಯಾ ವಿಜಯ್ (Duniya Vijay) ಸದಾ ಕಾಲ ಸಿದ್ದರಾಮಯ್ಯನವರ ಪರವಾಗಿ ನಿಂತು ಅವರ ಜೊತೆಯಲ್ಲಿ ಪ್ರಚಾರದ ಸಂದರ್ಭಗಳಲ್ಲಿ ಭಾಗಿಯಾಗಿ ಕಾಂಗ್ರೆಸ್ ಪಕ್ಷವನ್ನು ಹಾಡಿ ಹೊಗಳುತ್ತಿದ್ದರು. ಇದನ್ನು ಓದಿ: Electricity Bill: ಈ ತಿಂಗಳು ನೀವು ಕರೆಂಟ್ ಬಿಲ್ ಕಟ್ಟಬೇಕೇ?? ಬೇಡವೇ?? ಇಲ್ಲಿದೆ ನೋಡಿ ಸರಿಯಾದ ಉತ್ತರ. ಅದು ಯಾರು ಕಟ್ಟಲೇಬೇಕು ಗೊತ್ತೇ??

ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ವಿಚಾರಕ್ಕೆ ಪ್ರತಿಕ್ರಯಿಸಿದ ದುನಿಯಾ ವಿಜಯ್ ಸಾಮಾಜಿಕ ಜಾಲತಾಣದಲ್ಲೊಂದು ಪೋಸ್ಟ್ ಹಾಕಿಕೊಂಡಿದ್ದು, ತಮ್ಮ ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಡಿ ಹೋಗಿದ್ದಾರೆ. ಹೌದು ಗೆಳೆಯರೇ “ಚುನಾವಣೆ ಮುಗಿದು ಫಲಿತಾಂಶ ಬಂದಾಯಿತು ಇನ್ನೇನಿದ್ರೂ ಹೊಸ ಸರ್ಕಾರದ ಆಟ. ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಎಲ್ಲರ ಬದುಕು ಸ್ವತಂತ್ರವಾಗುತ್ತದೆ ಎಂಬ ಸುದ್ದಿಗಳು ಹರಿಡಿದ್ದವು.

ಆದರೆ ಕರುನಾಡಿನ ಜನ ಸಂಪೂರ್ಣ ಬಹು ಮತವನ್ನು ಒಂದು ಪಕ್ಷಕ್ಕೆ ನೀಡಿ ತಾವು ಪ್ರಜ್ಞಾವಂತರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಗೆದ್ದವರಿಗೆಲ್ಲ ಶುಭಾಶಯಗಳು ಸೋತವರು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ. ಸಂಪೂರ್ಣ ಬಹುಮತ ಪಡೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ಶುಭಾಶಯಗಳು, ಸಾಮಾನ್ಯ ಜನ ನೆಮ್ಮದಿಯಿಂದ ಜೀವನ ನಡೆಸುವಂತೆ ಉತ್ತಮ ಆಡಳಿತ ನೀಡಿ- ನಿಮ್ಮ ವಿಜಯಕುಮಾರ್” ಎಂದು ದುನಿಯಾ ವಿಜಯ್ (Duniya Vijay) ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಕಾಂಗ್ರೆಸ್ ಪಕ್ಷದ ಕುರಿತು ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಇದು ಕೇವಲ ಮಹಿಳೆಯರಿಗೆ ಮಾತ್ರ; ಗೃಹಿಣಿಯರೇ, ಅಥವಾ ಹುಡುಗಿಯರೇ ನಿಮ್ಮ ಹಣವನ್ನು ಡಬಲ್ ಮಾಡುವುದು ಹೇಗೆ ಗೊತ್ತೇ??

ಕಳೆದ ಕೆಲವು ದಿನಗಳ ಹಿಂದಷ್ಟೇ ಸಿದ್ದರಾಮಯ್ಯನವರ ಜೊತೆ ಸೇರಿ ಹೈ ವೋಲ್ಟೇಜ್ ಕ್ಷೇತ್ರವಾದ ವರುಣದಲ್ಲಿ ರೋಡ್ ಶೋ ನಡೆಸಿದರು. ಇವರೊಂದಿಗೆ ಲೂಸ್ ಮಾದ ಯೋಗಿ ಕೂಡ ಪಾಲ್ಗೊಂಡು ಪ್ರಚಾರದ ಕಾರ್ಯವನ್ನು ಬಹಳ ಭರ್ಜರಿಯಾಗಿ ಮಾಡಿದ ದುನಿಯಾ ವಿಜಯ್ (Duniya Vijay) ‘ನಾನು ಸಿದ್ದರಾಮಯ್ಯನವರ ಅಭಿಮಾನಿ’ ಎಂದು ಎದೆ ತಟ್ಟಿಕೊಂಡು ಹೇಳುವ ಮೂಲಕ ಕಾಂಗ್ರೆಸ್ ಕುರಿತು ತಮ್ಮದೇ ಮಾತುಗಳಿಂದ ವಿಜಯ್ ವರ್ಣಿಸಿದ್ದಾರೆ.