Motorola Edge Plus: ಎಲ್ಲಾ ಫೋನ್ ಗಳನ್ನೂ ಮೀರಿಸುವಂತೆ ಇರುವ ಮೋಟೊರೋಲ ಎಡ್ಜ್ ಪ್ಲಸ್ ಫೋನ್ ಹೇಗಿದೆ ಗೊತ್ತೇ?? 60 MP ಕ್ಯಾಮೆರಾ ಫೋನಿನ ಬೆಲೆ ಎಷ್ಟು ಕಡಿಮೆ ಗೊತ್ತೇ?
Motorola Edge Plus: ಎಲ್ಲಾ ಫೋನ್ ಗಳನ್ನೂ ಮೀರಿಸುವಂತೆ ಇರುವ ಮೋಟೊರೋಲ ಎಡ್ಜ್ ಪ್ಲಸ್ ಫೋನ್ ಹೇಗಿದೆ ಗೊತ್ತೇ?? 60 MP ಕ್ಯಾಮೆರಾ ಫೋನಿನ ಬೆಲೆ ಎಷ್ಟು ಕಡಿಮೆ ಗೊತ್ತೇ?
Motorola Edge Plus: ಸ್ನೇಹಿತರೆ ಪ್ರತಿನಿತ್ಯ ಮಾರುಕಟ್ಟೆಗೆ ಒಂದಲ್ಲ ಒಂದು ವಿಶೇಷ ಫೀಚರ್ಸ್ ಇರುವಂತಹ ಫೋನ್ಗಳು ಬರುತ್ತಲೇ ಇರುತ್ತವೆ. ಆದರೆ ಸಾಮಾನ್ಯವಾಗಿ ಇತ್ತೀಚಿನ ಜನರು ಐ ಫೋನ್ ಎಂಬಂತಹ ಬ್ರಾಂಡ್ ಫೋನ್ಗಳನ್ನು ಖರೀದಿಸಲು ಲಕ್ಷಾಂತರ ರೂಪಾಯಿ ಹಣವನ್ನು ವ್ಯಾಯ ಮಾಡುತ್ತಿದ್ದಾರೆ. ಆದರೆ ಐಫೋನ್ (iPhone) ನಲ್ಲಿ ಇರುವಂತಹ ಫೀಚರ್ಗಳೆಲ್ಲ ಅಡಕವಾಗಿರುವಂತಹ ಕಡಿಮೆ ಬೆಲೆಯ ಫೋನ್ಗಳು ಸಾಕಷ್ಟಿವೆ. ಅದರಂತೆ ನಾವಿವತ್ತು ಬೇರೆ ಎಲ್ಲ ಫೋನ್ ಗಳನ್ನು ಮೀರಿಸುವಂತಹ ಮೋಟೊರೋಲ ಎಡ್ಜ್ ಪ್ಲಸ್ ಫೋನ್ ಫೀಚರ್ಸ್, 60 ಎಂಪಿ (60 MP Camera) ಕ್ಯಾಮೆರಾದ ವಿಶೇಷತೆ ಹಾಗೂ ಫೋನಿನ ಬೆಲೆಯ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುವ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ (Motorola Edge Plus) ಮೋಟೊರೋಲ ಎಡ್ಜ್ ಪ್ಲಸ್ ಫೋನ್ ಲೋಹದ ಚೌಕಟ್ಟು ಅಂದರೆ ಮೆಟಲ್ ಫ್ರೇಮನ್ನು ಹೊಂದಿದ್ದು, ಕಾರ್ಣಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ನಿಂದ ಫೋನಿನ ದೇಹವನ್ನು ಸಂಯೋಜಿಸಲಾಗಿದೆ. ಇದರ ಜೊತೆ ಜೊತೆಗೆ ಈ ಒಂದು ಫೋನನ್ನು ನೀರೊಳಗೆ ಹಾಕಿದರು ಯಾವುದೇ ರೀತಿಯಾದಂತಹ ಹಾನಿ ಆಗುವುದಿಲ್ಲ, ಏಕೆಂದರೆ ಇದು ನೀರು ಮತ್ತು ಧೂಳಿನ ನಿರೋಧಕವಾಗಿದೆ, IP68 ರೇಟಿಂಗ್ ಅನ್ನು ಕೂಡ ಹೊಂದಿದೆ.
ಎಲ್ಲರೂ ಇಷ್ಟಪಡುವಂತಹ ಕಪ್ಪು ಬಣ್ಣದ ಫೋನ್ (Motorola Edge Plus) ಇದಾಗಿದ್ದು, ಕೇವಲ 203 ಗ್ರಾಂ ತೂಕವನ್ನು ಹೊಂದಿರುವುದರಿಂದ ಇದನ್ನು ಕ್ಯಾರಿ ಮಾಡಲು ಬಹಳ ಸುಲಭವಾಗಿದೆ ಹಾಗೂ ಕೈ ಬಾರ ಎಣಿಸುವಂತಹ ಯಾವುದೇ ತ್ರಾಸ ಇರುವುದಿಲ್ಲ. ಈ ಒಂದು ಮೋಟೊರೋಲ ಎಡ್ಜ್ ಪ್ಲಸ್ ಫೋನ್ ಬರೋಬ್ಬರಿ 60 MP ಸೆಲ್ಫಿ ಕ್ಯಾಮೆರಾವನ್ನು (Front Camera) ಹೊಂದಿದ್ದು, ನಾಲ್ಕು ಸಾವಿರಕ್ಕೂ ಅಧಿಕ ವಿಡಿಯೋಗಳನ್ನು ಶೂಟ್ ಮಾಡಬಹುದಾಗಿದೆ. ಇನ್ನು ಕ್ಯಾಮರದ ಕುರಿತು ನಿರ್ದಿಷ್ಟವಾಗಿ ಹೇಳುವುದಾದರೆ ಹಿಂಭಾಗದಲ್ಲಿ ಈ ಒಂದು ಫೋನ್ ಮೂರು ಕ್ಯಾಮರವನ್ನು ಹೊಂದಿದ್ದು, 50 MP ಪ್ರಾಥಮಿಕ ಕ್ಯಾಮೆರಾವಾದರೆ,
12 MP 2x ಪೋರ್ಟ್ರೇಟ್ ಕ್ಯಾಮೆರಾ ಆಗಿದೆ ಮತ್ತು ಆಟೋ ಫೋಕಸ್ನೊಂದಿಗೆ 50 MP ಅಲ್ಟ್ರಾ ವೈಡ್ ಕ್ಯಾಮರಾ ಕೂಡ ಇದ್ದು ಮೈಕ್ರೋ ಫೋಟೋಗ್ರಾಫರ್ ಆಗಿಯೂ ಈ ಒಂದು ಕ್ಯಾಮೆರಾ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಒಂದು ವಿಶೇಷವಾದ ಫೋನಿನಲ್ಲಿ 8GB LPDR5X RAM ಮತ್ತು 512GB ಸ್ಟೋರೇಜ್ ಕೆಪ್ಯಾಸಿಟಿಯನ್ನು ಹೊಂದಿದ್ದು, ಎಡ್ಜ್ ಪ್ಲಸ್ 5100mAh ಬ್ಯಾಟರಿ ಕೆಪ್ಯಾಸಿಟಿಯನ್ನು ಕೂಡ ಇದೆ, ಸ್ಪೀಕರ್ ಕ್ವಾಲಿಟಿ ಕೂಡ ಅತ್ಯದ್ಭುತವಾಗಿದೆ. ಇಷ್ಟೆಲ್ಲ ವಿಶೇಷತೆಗಳನ್ನು ಒಳಗೊಂಡಿರುವಂತಹ ಮೋಟೊರೋಲ ಎಡ್ಜ್ ಪ್ಲಸ್ ಫೋನ್ ಕೇವಲ 49,999 ರೂಗಳಿಗೆ ಭಾರತದಲ್ಲಿ ಲಭ್ಯವಿದೆ.
ಇದನ್ನು ಓದಿ: ಅನುಮಾನ ಇದ್ದರೇ ಬರೆದು ಇಟ್ಕೊಳಿ: ಮೇ 14 ನೇ ತಾರೀಕು ಮುಗಿಯಲಿ ಈ ರಾಶಿಯವರೇ ಕಿಂಗ್. ಯಾರು ಬಂದ್ರು ಟಚ್ ಮಾಡೋಕೆ ಆಗಲ್ಲ