ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಏಷ್ಯಾ ಕಪ್ ಗೆ ಸಿದ್ದವಾದ ಕೊಹ್ಲಿ: ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಂಡು ಬೆರಗಾದ ಜಡೇಜಾ, ಚಾಹಲ್. ವಿಡಿಯೋ ಹೇಗಿದೆ ಗೊತ್ತೇ??

1,384

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಗಸ್ಟ್ 27 ರಿಂದ ಯುಎಇ ನಲ್ಲಿ ಈ ಬಾರಿಯ ಏಷ್ಯಾ ಕಪ್ ಪ್ರಾರಂಭವಾಗಲಿದ್ದು, ಎರಡನೆಯ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಪಾಕಿಸ್ತಾನ ತಂಡವನ್ನು ಆಗಸ್ಟ್ 28 ರಂದು ಎದುರಿಸುವ ಮೂಲಕ ಏಷ್ಯಾ ಕಪ್ ಟೂರ್ನಮೆಂಟ್ ಅನ್ನು ಭಾರತೀಯ ಕ್ರಿಕೆಟ್ ತಂಡ ಪ್ರಾರಂಭಿಸಲಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ಅವರು ಮೂರು ವರ್ಷಗಳಿಗೂ ಅಧಿಕ ಅಂದರೆ ಶತಕ ಸಿಡಿಸದೆ 1000 ದಿನಗಳಿಗೂ ಮಿಗಿಲಾಗಿದೆ. ಇದನ್ನು ಓದಿ. ಕೊನೆಗೂ ತನ್ನ ಕಳಪೆ ಫಾರ್ಮ್ ಬಗ್ಗೆ ತಾನೇ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ: ತಾನು ಹೀಗೇ ಬ್ಯಾಟಿಂಗ್ ಮಾಡಲು ಕಾರಣ ಏನಂತೆ ಗೊತ್ತೇ??

ಕೊನೆ ಬಾರಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಅವರಿಗೆ ಏಷ್ಯಾ ಕಪ್ ವರೆಗೂ ಕೂಡ ಸಂಪೂರ್ಣ ವಿಶ್ರಾಂತಿಯನ್ನು ನೀಡಲಾಗಿತ್ತು. ಏಷ್ಯಾಕಪ್ ಗೆ ಆಯ್ಕೆಯಾಗಿರುವ ವಿರಾಟ್ ಕೊಹ್ಲಿ ಅವರಿಗೆ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಕೊನೆಯ ಅವಕಾಶ ಎಂದು ಹೇಳಲಾಗುತ್ತಿದ್ದು ಇಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದರೆ ಮಾತ್ರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ತಂಡದ ಭಾಗವಾಗಿ ಕಾಣಿಸಿಕೊಳ್ಳಬಹುದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಆಶ್ಚರ್ಯ ಎಂಬಂತೆ ವಿರಾಟ್ ಕೊಹ್ಲಿ ಅವರು ಈಗಾಗಲೇ ಅರಬ್ಬರ ನೆಲದಲ್ಲಿ ಕಾಲಿಟ್ಟು ಅತ್ಯಂತ ಪರಿಶ್ರಮದಿಂದ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಇದನ್ನು ಓದಿ. ಏಷ್ಯಾ ಕಪ್ ನಲ್ಲಿ ಕೊಹ್ಲಿ, ರೋಹಿತ್, ರಾಹುಲ್ ನಿಂದ ಪಾಕಿಸ್ತಾನಕ್ಕೆ ಏನು ತೊಂದರೆ, ಆದರೆ ಆತನೊಬ್ಬನೇ ಸಾಕು ಪಾಕ್ ಗೆ ಶಾಕ್ ನೀಡಲು. ಯಾರು ಗೊತ್ತೇ??

ಇದರ ಫಲಿತಾಂಶ ಅತ್ಯಂತ ವೇಗವಾಗಿ ಕಾಣಲು ಸಿಗಬಹುದಾಗಿದೆ ಎಂಬುದು ಕನ್ಫರ್ಮ್ ಆಗಿದೆ. ಈ ಬಾರಿ ಏಷ್ಯಾಕಪ್ ನಲ್ಲಿ ವಿರಾಟ್ ಕೊಹ್ಲಿ ಅವರು ವಿಂಟೇಜ್ ಸ್ಟೈಲ್ ನಲ್ಲಿ ಬ್ಯಾಟಿಂಗ್ ಮಾಡುವುದು ಕನ್ಫರ್ಮ್ ಆಗಿದೆ. ಹೌದು ಯಾಕೆಂದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೌಲರ್ಗಳಿಗೆ ಕಿಂಗ್ ಕೊಹ್ಲಿ ಪ್ರಾಕ್ಟೀಸ್ ನಲ್ಲಿ ಸತತವಾಗಿ ಸಿಕ್ಸರ್ ಬಾರಿಸುತ್ತಿದ್ದಾರೆ. ಹಿಂದೆ ಫಾರ್ಮ್ ನಲ್ಲಿದ್ದಾಗ ಹೇಗೆ ಆಡುತ್ತಿದ್ದರೋ ಅದೇ ರೀತಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಅದರಲ್ಲೂ ಸ್ಪಿನ್ನರ್ ಸ್ಪೆಷಲಿಸ್ಟ್ ಗಳಾಗಿರುವ ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಾಲ್ ಅವರ ಎಸೆತಗಳಿಗೆ ಯಾವುದೇ ಅಡ್ಡಿ ಇಲ್ಲದೆ ಪ್ರತಿಯೊಂದು ಎಸೆತಗಳನ್ನು ಕೂಡ ಬೌಂಡರಿ ಲೈನ್ ನ ಹೊರಗೆ ಬಾರಿಸುತ್ತಿದ್ದಾರೆ. ಹೀಗಾಗಿ ಏಷ್ಯಾ ಕಪ್ ಗೆ ಕಿಂಗ್ ಕೊಹ್ಲಿ ಸಂಪೂರ್ಣವಾಗಿ ರೆಡಿ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Get real time updates directly on you device, subscribe now.